ರಂಗಭೂಮಿ ಉಡುಪಿಯ ನೂತನ ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಪುನರಾಯ್ಕೆ

ಉಡುಪಿ: ಗುರುವಾರದಂದು ರಾಜ್ಯದ ಪ್ರತಿಷ್ಠಿತ ಹವ್ಯಾಸಿ ನಾಟಕ ಹಾಗೂ ಸಾಂಸ್ಕೃತಿಕ ಸಂಸ್ಥೆ ರಂಗಭೂಮಿ ಉಡುಪಿಯ 58ನೇ ವಾರ್ಷಿಕ ಮಹಾಸಭೆ ನಡೆಯಿತು. 2023-24 ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಪುನರಾಯ್ಕೆಗೊಂಡರು.

ಸಂಸ್ಥೆಯ ಗೌರವಾಧ್ಯಕ್ಷರಾಗಿ ಡಾ. ಎಚ್​. ಎಸ್​ ಬಲ್ಲಾಳ್​, ಮಾರ್ಗದರ್ಶಕರಾಗಿ ಡಾ. ಎಚ್​. ಶಾಂತರಾಮ್​, ಉಪಾಧ್ಯಕ್ಷರಾಗಿ ಭಾಸ್ಕರ್​ ರಾವ್​ ಕಿದಿಯೂರು ಹಾಗೂ ಎನ್​. ರಾಜ ಗೋಪಾಲ ಬಲ್ಲಾಳ್​, ಪ್ರಧಾನ ಕಾರ್ಯದರ್ಶಿಯಾಗಿ ಪ್ರದಿಪ್​ ಚಂದ್ರ ಕುತ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ಶ್ರೀಪಾದ ಹೆಗಡೆ ಹಾಗೂ ವಿವೇಕಾನಂದ ಎನ್​., ಕೋಶಾಧಿಕಾರಿಯಾಗಿ ಭೋಜ ಯು. ಆಯ್ಕೆಯಾದರು.

ನೂತನ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಪೂರ್ಣಿಮಾ ಸುರೇಶ್​, ಭುವನ ಪ್ರಸಾದ್​ ಹೆಗ್ಡೆ, ವಿದ್ಯಾವಂತ ಆಚಾರ್ಯ, ಎಚ್​. ಜಯಪ್ರಕಾಶ್​ ಕೆದ್ಲಾಯ, ರವೀಂದ್ರ ಕೆ. ಶೆಟ್ಟಿ ಕಡೆಕಾರು, ಆನಂದ ಮೇಲಂಟ, ಡಾ. ವಿಷ್ಣುಮೂರ್ತಿ ಪ್ರಭು, ಅಮಿತಾಂಜಲಿ ಕಿರಣ್​, ತಲ್ಲೂರು ಶಿವಪ್ರಸಾದ್​ ಶೆಟ್ಟಿ, ಹರೀಶ್​ ಜಿ. ಕಲ್ಮಾಡಿ, ಕೆ ರಾಘವೇಂದ್ರ ಆಚಾರ್ಯ, ಕಾರ್ತಿಕ್​ ಪ್ರಭು ಆಯ್ಕೆಯಾದರು.