ಮಿಂಚು ಹರಿಸಲಿರುವ ಕನ್ನಡ ತಾರೆಗಳಿವರು- ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಕ್ಷಣಗಣನೆ

ಸೈಮಾ (SIIMA). ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ. ದುಬೈನಲ್ಲಿ ಇಂದು ಮತ್ತು ನಾಳೆ ಸೌತ್​ ಇಂಡಿಯನ್​​ ಇಂಟರ್​ನ್ಯಾಶನಲ್​ ಮೂವಿ ಅವಾರ್ಡ್ಸ್ ನಡೆಯಲಿದೆ.ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಕಲಾವಿದರು, ತಂತ್ರಜ್ಞರು ಒಂದೇ ವೇದಿಕೆಯಲ್ಲಿ ಮಿಂಚು ಹರಿಸಲಿದ್ದಾರೆ.ಬೆಂಗಳೂರು, ಹೈದರಾಬಾದ್​ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಈಗಾಗಲೇ ಈ ಕಾರ್ಯಕ್ರಮ ನಡೆದಿದೆ. ಈ ಬಾರಿಯ (11ನೇ) ಸಿನಿ ಸಮಾರಂಭ ದುಬೈನಲ್ಲಿ ಅದ್ಧೂರಿಯಾಗಿ ಆಯೋಜನೆಗೊಂಡಿದೆ. ನಟ, ನಿರ್ಮಾಪಕ, ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಮತ್ತು ಸೂಪರ್​ ಹಿಟ್​ ‘ಸೀತಾ […]

ಇ-ಎಫ್‌ಐಆರ್​ಗೆ ಸಿಎಂ ಸಿದ್ದರಾಮಯ್ಯ ಚಾಲನೆ : ರಾಜ್ಯ ಪೊಲೀಸ್ ಇಲಾಖೆಯಿಂದ ವಿನೂತನ ಪ್ರಯತ್ನ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆ ಇದೇ ಮೊದಲ ಬಾರಿಗೆ ಇ-ಎಫ್‌ಐಆರ್ ವ್ಯವಸ್ಥೆಯನ್ನು ಪರಿಚಯಿಸಿದೆ. ಕಾಗದರಹಿತ ಹಾಗೂ ಪರಿಸರಸ್ನೇಹಿ ನೀತಿಗೆ ಒತ್ತು ನೀಡಲು ಇದೇ ಮೊದಲ ಬಾರಿಗೆ ಇ-ಎಫ್‌ಐಆರ್ ಸೌಲಭ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ‌ ಕೊಟ್ಟರು. ಇ-ಎಫ್‌ಐಅರ್ ದಾಖಲಿಸುವುದು ಹೇಗೆ?: ದಿನೇ ದಿನೇ ಪೊಲೀಸ್ ಇಲಾಖೆ ಸ್ಮಾರ್ಟ್ ಆಗುತ್ತಿದೆ. ಇ-ಎಫ್‌ಐಆರ್ ವ್ಯವಸ್ಥೆಯಿಂದ ಸಾರ್ವಜನಿಕರು ಸುಖಾಸುಮ್ಮನೆ ಪೊಲೀಸ್ ಠಾಣೆಗೆ ಅಲೆಯುವುದು ತಪ್ಪಲಿದೆ‌. ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ಜಾಲತಾಣ ಕರ್ನಾಟಕ ಪೊಲೀಸ್ ವೆಬ್‌ಸೈಟ್​ಗೆ ಹೋಗಿ ಅಲ್ಲಿ ಸಿಟಿಜನ್ ಡೆಸ್ಕ್ ಮೇಲೆ […]

ಏಷ್ಯಾಕಪ್‌ : ಭಾರತಕ್ಕೆ 266 ರನ್​ಗಳ ಸ್ಪರ್ಧಾತ್ಮಕ ಗುರಿ

ಕೊಲಂಬೊ (ಶ್ರೀಲಂಕಾ): ನಾಯಕ ಶಕೀಬ್​ ಅಲ್​ ಹಸನ್​ ಮತ್ತು ತೌಹೀದ್ ಹೃದಯೋಯ್ ಅವರ ಅರ್ಧಶತಕದ ನೆರವಿನಿಂದ ಭಾರತದ ವಿರುದ್ಧ ಬಾಂಗ್ಲಾದೇಶ ನಿಗದಿತ 50 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್​ ಕಳೆದುಕೊಂಡು 265 ರನ್​ ಕಲೆಹಾಕಿತು. ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಭಾರತ ಈಗಾಗಲೇ ಫೈನಲ್‌ಗೇರಿದ್ದು, ಪ್ರಮುಖ ಆಟಗಾರರಿಗೆ ವಿಶ್ರಾಂತಿ​ ನೀಡಿ ಐದು ಬದಲಾವಣೆಯೊಂದಿಗೆ ಮೈದಾನಕ್ಕಿಳಿದಿದೆ. ಬೌಲಿಂಗ್​ನಲ್ಲಿಂದು ತಂಡ ಸಾಧಾರಣ ಪ್ರದರ್ಶನ ನೀಡಿತು. ಬಾಂಗ್ಲಾ ಮೇಲೆ ಆರಂಭಿಕ ಓವರ್​ಗಳಲ್ಲಿ ಯಶ ಕಂಡ ಬೌಲರ್​ಗಳು ನಂತರ ಕೊಂಚ ಮಂಕಾದರು. ಮಧ್ಯಮ […]

ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ

ಮಹಾತ್ಮ ಗಾಂಧೀಜಿಯವರ 154 ನೇ ಜಯಂತಿ ಸಂದರ್ಭದಲ್ಲಿ ವಿದ್ಯಾರ್ಥಿ, ಯುವಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ‍್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಸಹಬಾಳ್ವೆ, ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಮೊದಲಾದ ವಿಷಯಗಳ ಕುರಿತು ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಣ ಹಾಗೂ ಪದವಿ-ಸ್ನಾತಕೋತ್ತರ ಪದವಿಗಳ ಹಂತದ ವಿದ್ಯಾರ್ಥಿಗಳಿಗೆ ಒಟ್ಟು 3 ಪ್ರತ್ಯೇಕ ವಿಭಾಗಗಳಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆಯೋಜಿಸಿದೆ. ಜಿಲ್ಲಾ ಮಟ್ಟದಲ್ಲಿ ವಿಜೇತರಾದವರಿಗೆ ಪ್ರತಿ ವಿಭಾಗದಲ್ಲಿ ಪ್ರತ್ಯೇಕವಾಗಿ ಹಾಗೂ ಕ್ರಮವಾಗಿ ತಲಾ […]

ಚೈತ್ರಾ ಬೆಂಬಲಕ್ಕೆ ಯಾರೂ ನಿಂತಿಲ್ಲ; ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಶೋಭಾ ಕರಂದ್ಲಾಜೆ

ಬೆಂಗಳೂರು: ಚೈತ್ರಾ ಕುಂದಾಪುರ ಬಹುಕೋಟಿ ವಂಚನೆ ಪ್ರಕರಣದಲ್ಲಿ ಪಕ್ಷದ ಯಾರೂ ಕೂಡಾ ಚೈತ್ರಾ ಬೆಂಬಲಕ್ಕೆ ನಿಂತಿಲ್ಲ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆ ಆಗಲೇಬೇಕು. ನಾವು ಯಾರೂ ಕೂಡಾ ವರನ್ನು ರಕ್ಷಿಸುತ್ತಿಲ್ಲ ಅಥವಾ ಯಾರಿಗೂ ಶಿಫಾರಸು ಮಾಡುವ ಕೆಲಸ ಮಾಡುತ್ತಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮಲ್ಲಿ ಯಾರಿಗೂ ಚೈತ್ರಾ ಜೊತೆ ವೈಯಕ್ತಿಕ ಅಥವಾ ನೇರವಾದ ಯಾವುದೇ ಸಂಬಂಧ ಇಲ್ಲ, ಈ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ. ಕಾನೂನಿನ ಪ್ರಕಾರ ತನಿಖೆ […]