udupixpress
Home Trending ಶಂಕರಾಚಾರ್ಯರ ಪುತ್ಥಳಿಗೆ ಅವಮಾನ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮಕೈಗೊಳ್ಳಿ: ವಾಸುದೇವ ಭಟ್ ಆಗ್ರಹ

ಶಂಕರಾಚಾರ್ಯರ ಪುತ್ಥಳಿಗೆ ಅವಮಾನ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮಕೈಗೊಳ್ಳಿ: ವಾಸುದೇವ ಭಟ್ ಆಗ್ರಹ

ಉಡುಪಿ: ದಕ್ಷಿಣ ಭಾರತದ ಪವಿತ್ರ ಪುಣ್ಯಕ್ಷೇತ್ರ ಶೃಂಗೇರಿಯ ಶಂಕರಾಚಾರ್ಯರ ಪ್ರತಿಮೆಯ ಮೇಲೆ ದುಷ್ಕರ್ಮಿಗಳು ಅನ್ಯಧರ್ಮೀಯ ಧ್ವಜವನ್ನು ಹಾರಿಸಿ ಅವಮಾನಿಸಿರುವುದನ್ನು ಹಿಂದೂ ಮುಖಂಡ ವಾಸುದೇವ ಭಟ್ ಪೆರಂಪಳ್ಳಿ ತೀವ್ರವಾಗಿ ಖಂಡಿಸಿದ್ದಾರೆ.

ಭಾರತದ ನೆಲದಲ್ಲಿ ಸನಾತನ ಧರ್ಮದ ಸಂವರ್ಧನೆಗೆ ಅಮೂಲ್ಯ ಕೊಡುಗೆ ಕೊಟ್ಟ ಧೀಮಂತರಲ್ಲಿ ಆಚಾರ್ಯ ಶಂಕರರು ಪ್ರಮುಖರಾಗಿದ್ದಾರೆ. ಅವರನ್ನು ಈ ನೆಲ ಸಾರ್ವಕಾಲಿಕ ಮಾನ್ಯರೆಂದೇ ಪರಿಗಣಿಸಿದೆ. ಅವರ ಸ್ಮಾರಕಕ್ಕೆ ಅವಮಾನ ಮಾಡಿರುವುದು ರಾಷ್ಟ್ರದ್ರೋಹದ ಕೆಲಸ. ಇಂಥ ಹೀನ ಕೃತ್ಯ ಎಸಗಿದವರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.