ಜಿಲ್ಲಾ ಮಲೆಕುಡಿಯ ಸಂಘದ ವತಿಯಿಂದ 74 ನೇ ಸ್ವಾತಂತ್ರ್ಯೋತ್ಸವ 

ಕಾರ್ಕಳ: ಜಿಲ್ಲಾ ಮಲೆಕುಡಿಯ ಸಂಘದ ವತಿಯಿಂದ 74 ನೇ ಸ್ವಾತಂತ್ರ್ಯೋತ್ಸವವು ಸಂಘದ ಕೇಂದ್ರ ಕಚೇರಿ ವಠಾರ ಪೇರಡ್ಕಾದಲ್ಲಿ ನಡೆಯಿತು. ರಾಜ್ಯ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಈದು ಧ್ವಜಾರೋಹಣ ನಡೆಸಿದರು. ಧ್ವಜವಂದನೆ ಕಾರ್ಯಕ್ರಮವನ್ನು ಪ್ರಶಾಂತ್ ಹೆರ್ಮುಂಡೆ ನೆರವೇರಿಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷರಾದ ಮಂಜಪ್ಪ ಗೌಡ ನೂರಾಳ್ ಬೆಟ್ಟು, ಕಾರ್ಯದರ್ಶಿ ಸಾಧು ಗೌಡ ನಾರ್ಜೆ, ಜಿಲ್ಲಾ ಉಪಾಧ್ಯಕ್ಷ ರಾದ ಸುಂದರ ಗೌಡ ಮುದ್ರಾಡಿ ಮತ್ತು ಗೋಪಾಲ ಗೌಡ ಎತ್ತಲ್ ಗುಡ್ಡೆ, ಕೋಶಾಧಿಕಾರಿ ವಿಷ್ಣುಮೂರ್ತಿ […]

ಸಹನಾ, ಸುಮಂತ್ ಎಸ್. ಆಚಾರ್ಯಗೆ ‘ಮೊಸ್ಟ್ ಪಾಪ್ಯುಲರ್ ದೈವಾರಾಧನೆ ಲೆನ್ಸ್ ಮನ್- 2020’ ಪ್ರಶಸ್ತಿ

ಮೂಡುಅಲೆವೂರು: ತುಳುನಾಡಿನ ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸಿ ಬೆಳೆಸುವ ಉದ್ದೇಶದೊಂದಿಗೆ ಶೂಟ್ಸ್ ಆಫ್ ತುಳುನಾಡ್ ಹಾಗೂ ರುದ್ರ ಎಂಟರ್ಟೈನ್ಮೆಂಟ್ ಮುಂಬೈ ಇದರ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ‘ಮೊಸ್ಟ್ ಪಾಪ್ಯುಲರ್ ದೈವಾರಾಧನೆ ಲೆನ್ಸ್ ಮನ್- 2020’ ಇನ್ಟಾಗ್ರಾಮ್ ಫೋಟೋಗ್ರಾಫಿ ಸ್ಪರ್ಧೆಯಲ್ಲಿ ಸಹನಾ ‘ದೈವರಾಧನೆ ಲೆನ್ಸ್ ಮನ್ ಪ್ರಶಸ್ತಿ’ ಹಾಗೂ ಸುಮಂತ್ ಎಸ್.‌ ಆಚಾರ್ಯ ‘ದೈವರಾಧನೆ ಲೆನ್ಸ್ ಮೆನ್ ಇಂಟರ್ನೆಟ್ ಪಾಪ್ಯುಲರ್ ಪ್ರಶಸ್ತಿ’ ಮುಡಿಗೇರಿಸಿಕೊಂಡಿದ್ದಾರೆ. ಮೂಡುಅಲೆವೂರು ಜುಮಾದಿ ದೈವಾಸ್ಥಾನದ ಬಳಿ ಶನಿವಾರ ನಡೆದ ಸರಳ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. […]

ಕ್ರಿಕೆಟಿಗ ಸುರೇಶ್ ರೈನಾರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ

ಮುಂಬೈ: ಎಂ.ಎಸ್. ಧೋನಿ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಇನ್ನೊಬ್ಬ ಭಾರತೀಯ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿವೃತ್ತಿ ಬಗ್ಗೆ ಮಾಹಿತಿ ನೀಡಿದ್ದಾರೆ.

ಜಾಮಿಯಾ ಮಸೀದಿಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ 

ಉಡುಪಿ: ಇಲ್ಲಿನ ಜಾಮಿಯಾ ಮಸೀದಿಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಕಾಪು ತಹಶೀಲ್ದಾರ್ ಮುಹಮ್ಮದ್ ಇಸ್ಹಾಕ್ ಧ್ವಜಾರೋಹಣ ನೆರವೇರಿಸಿದರು. ಜಾಮಿಯಾ ಮಸೀದಿಯ ಧರ್ಮಗುರುಗಳಾದ ಮೌಲಾನಾ ರಶೀದ್ ಅಹ್ಮದ್ ನದ್ವಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.  ಮಸೀದಿಯ ಅಧ್ಯಕ್ಷ ಅರ್ಷದ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಉಮರ್ ವಿ. ಎಸ್., ರಿಯಾಝ್ ಅಹ್ಮದ್, ಮಸೀದಿಯ ಆಡಳಿತ ಸಮಿತಿ ಸದಸ್ಯರು, ಮಸೀದಿಯ ಜಮಾಅತಿಗಳು ಉಪಸ್ಥಿತರಿದ್ದರು.

ಎಸ್ ಡಿ ಎಂ ಸ್ಕೌಟ್ಸ್ ಮತ್ತು ಗೈಡ್ ವಿದ್ಯಾರ್ಥಿಗಳಿಂದ ಮನೆಯಲ್ಲಿದ್ದೇ ಸ್ವಾತಂತ್ರ್ಯ ದಿನಾಚರಣೆ: ನೆರೆಮನೆಯವರಿಗೆ ಮಾಸ್ಕ್ ವಿತರಿಸಿ ಜಾಗೃತಿ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಸ್ಕೌಟ್ಸ್ ಮತ್ತು ಗೈಡ್ಸ್ ದಳದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ವಿಭಿನ್ನ ರೀತಿಯಲ್ಲಿ ಆಚಚರಿಸಲಾಯಿತು. ಮಕ್ಕಳು ಮನೆಯಲ್ಲಿದ್ದುಕೊಂಡೇ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಯ ಆದೇಶದಂತೆ ವಿಶೇಷವಾಗಿ ಆಚರಿಸಿದ್ದು, ಮಾತ್ರವಲ್ಲದೇ ಕೋವಿಡ್ 19 ಕುರಿತು ಜಾಗೃತಿ ಮೂಡಿಸಿದ್ದಾರೆ. ಕಬ್ ಬುಲ್ ಬುಲ್, ಸ್ಕೌಟ್ಸ್ ಗೈಡ್ಸ್ ವಿಧ್ಯಾರ್ಥಿಗಳು ಭಾರತ ಭೂಪಟವನ್ನು ರಂಗೋಲಿ ಹಾಕಿ, ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ಕುಟುಂಬದ ಸದಸ್ಯರೂಂದಿಗೆ ಧ್ವಜವನ್ನು ಹಾರಿಸುವ ಮೂಲಕ ಆಚರಿಸಿದ್ದಾರೆ. ಪ್ರತಿ […]