ಪ್ರಕೃತಿಗೆ ಪೂರಕವಾದ ಪರಿಸರ ಸ್ನೇಹಿ ಪ್ರವಾಸ ಕೈಗೊಂಡು ಮುಂದಿನ ಪೀಳಿಗೆಗೆ ಸುಂದರ- ಸ್ವಸ್ಥ ಜಗತ್ತಿನ ಕೊಡುಗೆ ನೀಡಿ

ಲೇಖನ :ಶರೋನ್ ಶೆಟ್ಟಿ
ಚಿತ್ರ : ಗುರು ಕಾಪು

ವಿಶ್ವ ಪ್ರವಾಸೋದ್ಯಮ ಸಂಸ್ಥೆ (UNWTO) 1979 ರಲ್ಲಿ ವಿಶ್ವ ಪ್ರವಾಸೋದ್ಯಮ ದಿನವನ್ನು ಪ್ರಾರಂಭಿಸಿತು. ಆದರೆ ಇದನ್ನು ಅಧಿಕೃತವಾಗಿ 1980 ರಲ್ಲಿ ಪ್ರಾರಂಭಿಸಲಾಯಿತು. ವಿಶ್ವ ಪ್ರವಾಸೋದ್ಯಮ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ಆಚರಿಸಲಾಗುತ್ತದೆ. 1997 ರ ಬಳಿಕ UNWTO ಪ್ರತಿ ವರ್ಷ ವಿವಿಧ ಆತಿಥೇಯ ದೇಶಗಳಲ್ಲಿ ಈ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ.    ಪ್ರಪಂಚದ ವಿವಿಧ ಭಾಗಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಅದರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪ್ರವಾಸೋದ್ಯಮ ದಿನವು ಅಂತರರಾಷ್ಟ್ರೀಯ ಸಮುದಾಯದ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳ ಮೇಲೆ ಪರಿಣಾಮ ಬೀರುವಲ್ಲಿ ಪ್ರವಾಸೋದ್ಯಮದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ. ರಾಷ್ಟ್ರದ ಆರ್ಥಿಕತೆಯನ್ನು ಸುಧಾರಿಸುವಲ್ಲಿ ಮತ್ತು ಅದರ ಮನ್ನಣೆಯನ್ನು ಹೆಚ್ಚಿಸುವಲ್ಲಿ ಪ್ರವಾಸೋದ್ಯಮವು ಮಹತ್ವದ ಪಾತ್ರವನ್ನು ವಹಿಸುತ್ತದೆ.

ಈ ಬಾರಿಯ ವಿಶ್ವ ಪ್ರವಾಸೋದ್ಯಮದ ದಿನದ ಥೀಮ್ “ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆ” ಎಂದಾಗಿದೆ.ಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳಿಗಾಗಿ ಹೆಚ್ಚು ಮತ್ತು ಉತ್ತಮ-ಉದ್ದೇಶಿತ ಹೂಡಿಕೆಗಳ ಅಗತ್ಯವನ್ನು ಇದು ಎತ್ತಿ ತೋರಿಸುತ್ತದೆ. ಇದು 2030 ರ ವೇಳೆಯ ಉತ್ತಮ ಜಗತ್ತಿಗೆ ವಿಶ್ವ ಸಂಸ್ಥೆಯಿಂದ ನಿರ್ದೇಶಿಸಲಾದ ಮಾರ್ಗಸೂಚಿಯಾಗಿದೆ. ಬದಲಾದ ಯುಗದಲ್ಲಿ ಸಾಂಪ್ರದಾಯಿಕ ಹೂಡಿಕೆಗಳ ಜೊತೆ ನವೀನ ಪರಿಹಾರಗಳು, ಆರ್ಥಿಕ ಬೆಳವಣಿಗೆ ಮತ್ತು ಉತ್ಪಾದಕತೆಯನ್ನು ಉತ್ತೇಜಿಸುವ ಹೊಸ ಹೂಡಿಕೆಗಳನ್ನು ಮಾಡಲು ಈ ಥೀಮ್ ಅನ್ನು ಆಯೋಜಿಸಲಾಗಿದೆ.

ಪರಿಸರ ಸ್ನೇಹಿ ಅಭ್ಯಾಸಗಳು ಮತ್ತು ಪರಿಸರವನ್ನು ಸಂರಕ್ಷಿಸುವಲ್ಲಿ ಜವಾಬ್ದಾರಿಯುತ ಪ್ರವಾಸೋದ್ಯಮದ ಪಾತ್ರವನ್ನು ಈ ಥೀಮ್ ಒತ್ತಿಹೇಳುತ್ತದೆ. ಪ್ರಕೃತಿ ಮತ್ತು ಪ್ರವಾಸೋದ್ಯಮವು ಸಾಮರಸ್ಯದಿಂದ ಒಮ್ಮುಖವಾಗುವ ಭಾರತದಂತದ ದೇಶದಲ್ಲಿ ಪರಿಸರಕ್ಕೆ ಪೂರಕ ನವೀಕರಿಸಬಹುದಾದ ಇಂಧನಗಳ ಪ್ರಯೋಗದಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಗುರಿ ಹೊಂದಲಾಗಿದೆ.

ಭಾರತದಲ್ಲಿ ಅದಾಗಲೇ ಹಸಿರು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು ಸೌರ ವಿದ್ಯುತ್, ತ್ಯಾಜ್ಯ ನಿರ್ವಹಣೆ, ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸಾರಿಗೆ ಸಂಪರ್ಕದಂತಹ ಪರಿಸರ ಸ್ನೇಹಿ ಉಪಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ನಮ್ಮ ಸುತ್ತು ಮುತ್ತಲಿನ ಪರಿಸರ ಸುಂದರ ಮತ್ತು ಪ್ರಕೃತಿಯು ಆಹ್ಲಾದಕರವಾಗಿದ್ದಾಗ ಪ್ರಯಾಣವೂ ಸುಖಕರ ಮತ್ತು ಚಿರಸ್ಮರಣೀಯವಾಗಿರುತ್ತದೆ.

ಪರಿಸರ ಸ್ನೇಹಿ ಅಭ್ಯಾಸಗಳೊಂದಿಗೆ ಪ್ರವಾಸಗಳನ್ನು ಕೈಗೊಂಡು ವಿಶ್ವ ಪ್ರವಾಸೋದ್ಯಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ.. ನಾಳಿನ ಪೀಳಿಗೆಗೆ ಸ್ವಸ್ಥ ಪರಿಸರದ ಕೊಡುಗೆಯನ್ನು ನೀಡಿ.. ವಿಶ್ವ ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು.