ನಿಫ್ಟಿ 51, ಸೆನ್ಸೆಕ್ಸ್​ 173 ಪಾಯಿಂಟ್​ ಏರಿಕೆ

ಮುಂಬೈ: ಭಾರತದ ಷೇರು ಮಾರುಕಟ್ಟೆಗಳು ಏರಿಕೆಯೊಂದಿಗೆ ಬುಧವಾರದ ವಹಿವಾಟು ಕೊನೆಗೊಳಿಸಿವೆ.30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 173.22 ಪಾಯಿಂಟ್ ಅಥವಾ ಶೇಕಡಾ 0.26 ರಷ್ಟು ಏರಿಕೆ ಕಂಡು 66,118.69 ಕ್ಕೆ ತಲುಪಿದೆ. ಸೂಚ್ಯಂಕವು ಬೆಳಗಿನ ವಹಿವಾಟಿನಲ್ಲಿ 65,549.96 ಕ್ಕೆ ಇಳಿದಿತ್ತು. ಆದಾಗ್ಯೂ, ರಿಲಯನ್ಸ್, ಎಲ್ &ಟಿ, ಇನ್ಫೋಸಿಸ್ ಮತ್ತು ಮಾರುತಿ ಷೇರುಗಳ ಖರೀದಿಯಲ್ಲಿನ ಹೆಚ್ಚಳವು ನಷ್ಟ ತುಂಬಲು ಸಹಾಯ ಮಾಡಿತು. ನಂತರ ಸೆನ್ಸೆಕ್ಸ್​ ದಿನದ ವಹಿವಾಟಿನಲ್ಲಿ 226.8 ಪಾಯಿಂಟ್ ಅಥವಾ ಶೇಕಡಾ 0.34 ರಷ್ಟು ಏರಿಕೆಯಾಗಿ 66,172.27 ಕ್ಕೆ […]

ತನಿಖೆ ಪ್ರಾರಂಭ : ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಡ್ರೋನ್‌ ಹಾರಾಟ

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ):ನಕಲಿ ಪಾಸ್ ಪೋರ್ಟ್ ಜಾಲ ಪ್ರಕರಣ: ನಕಲಿ‌ ದಾಖಲಾತಿ ಸೃಷ್ಟಿಸಿ ಅಕ್ರಮವಾಗಿ ವಿದೇಶಿಯರಿಗೆ ಪಾಸ್ ಪೋರ್ಟ್ ಮಾಡಿಕೊಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ್ದ ಪೊಲೀಸರು 9 ಮಂದಿ ಆರೋಪಿಗಳನ್ನು (ಫೆಬ್ರವರಿ 1-2023) ಬಂಧಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ವಿಚಾರಣೆ ವೇಳೆ ಸಿಕ್ಕಿದ ಸುಳಿವಿನ ಮೇರೆಗೆ ಗುಜರಾತ್ ಮೂಲದ‌ ಪ್ರಮುಖ ಆರೋಪಿಯನ್ನು ಬಂಧಿಸಿದ್ದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಪ್ರದೇಶದಲ್ಲಿ ಅಪರಿಚಿತ ಡ್ರೋನ್​ ಹಾರಾಟ ಮಾಡಿ ಕೆಲಕಾಲ ಆತಂಕ ಸೃಷ್ಟಿಸಿದ್ದ ಘಟನೆ ನಡೆದಿದೆ. ಗುಜರಾತ್ […]

ಬ್ರೆಜಿಲ್ ವಿರುದ್ಧ ಭಾರತಕ್ಕೆ ಗೆಲುವು : ಜಯದ ಓಟ ಮುಂದುವರೆಸಿದ ಜೂನಿಯರ್ಸ್​

ಸ್ಪೋಕೇನ್ (ಯುಎಸ್​ಎ): ಅಮೆರಿಕದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ನಿನ್ನೆ ಜಯದ ಮೂಲಕ ಶುಭಾರಂಭ ಮಾಡಿದ ತಂಡವು ಇಂದು ಗೆಲುವಿನ ಓಟವನ್ನು ಮುಂದುವರೆಸಿದೆ. ಅಮೆರಿಕದ ಸ್ಪೋಕೇನ್‌ನಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನ ಮಿಶ್ರ ಟೀಮ್ ಈವೆಂಟ್‌ನಲ್ಲಿ ಭಾರತೀಯ ಶಟ್ಲರ್‌ಗಳು ಬ್ರೆಜಿಲ್ ವಿರುದ್ಧ 5-0 ಅಂತರದಿಂದ ಗೆಲುವು ಸಾಧಿಸಿದ್ದಾರೆ.ಮಿಶ್ರ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಂಡವು ಇಂದು ಆರಂಭದಲ್ಲಿ ಬ್ರೆಜಿಲ್ ವಿರುದ್ಧ 5-0 ಅಂಕಗಳಿಂದ ಜಯ ದಾಖಲಿಸಿದೆ.ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಯುವ ಬ್ಯಾಡ್ಮಿಂಟನ್ ತಾರೆಗಳು ಉತ್ತಮ ಪ್ರದರ್ಶನ […]

ಭಾರತೀಯರ ಮೆಚ್ಚಿನ ಆನ್ಲೈನ್​ ಪ್ಲಾಟ್​ಫಾರ್ಮ್ ಆದ ಯೂಟ್ಯೂಬ್

ನವದೆಹಲಿ: ಯೂಟ್ಯೂಬ್ ಭಾರತದಲ್ಲಿ ಪ್ರತಿ ಐವರ ಪೈಕಿ ನಾಲ್ವರ ಅತ್ಯಂತ ಮೆಚ್ಚಿನ ಆನ್ಲೈನ್ ವೇದಿಕೆಯಾಗಿ ಮಾರ್ಪಟ್ಟಿದೆ ಎಂದು ಸ್ವತಃ ಯೂಟ್ಯೂಬ್ ಹೇಳಿಕೊಂಡಿದೆ. ಯೂಟ್ಯೂಬ್ ಭಾರತದಲ್ಲಿ ಮೆಚ್ಚಿನ ವೀಡಿಯೊ ವೀಕ್ಷಣೆಯ ತಾಣವಾಗಿ ಹೊರಹೊಮ್ಮಿದೆ.ಜಾಗತಿಕವಾಗಿ ಸರಾಸರಿ 70 ಬಿಲಿಯನ್ ದೈನಂದಿನ ವೀಕ್ಷಣೆ ಹೊಂದಿರುವ ಯೂಟ್ಯೂಬ್ ಶಾರ್ಟ್ಸ್ ಭಾರತದಲ್ಲೂ ಜನಪ್ರಿಯವಾಗುತ್ತಿದೆ. ಯೂಟ್ಯೂಬ್​ ಶಾರ್ಟ್ಸ್​ನ ಸರಾಸರಿ ದೈನಂದಿನ ವೀಕ್ಷಣೆಗಳು ಜಾಗತಿಕವಾಗಿ ವರ್ಷದಿಂದ ವರ್ಷಕ್ಕೆ (ವೈಒವೈ) ಶೇಕಡಾ 120 ಕ್ಕಿಂತ ಹೆಚ್ಚಾಗಿದೆ. ಕಳೆದ 12 ತಿಂಗಳುಗಳಲ್ಲಿ 18-44 ವರ್ಷ ವಯಸ್ಸಿನವರಲ್ಲಿ 88 ಪ್ರತಿಶತದಷ್ಟು ಜನರು […]

ನಾಳೆಯಿಂದ ಆನೆಗಳ ತಾಲೀಮು ಶುರು: ದಸರಾ ಮಹೋತ್ಸವದಲ್ಲಿ ಭಾಗವಹಿಸುವ 14 ಆನೆಗಳ ತೂಕ ಪರೀಕ್ಷೆ

ಮೈಸೂರು: .ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಮೊದಲ ಹಾಗೂ ಎರಡನೇ ಗಜಪಡೆಯ ಹದಿನಾಲ್ಕು ಆನೆಗಳ ತಂಡ ಮೈಸೂರಿನ ಅರಮನೆಯಲ್ಲಿ ಬೀಡು ಬಿಟ್ಟಿದ್ದು ಇಂದು ಹದಿನಾಲ್ಕು ಆನೆಗಳ ತೂಕ ಪರೀಕ್ಷೆಯನ್ನ ಮಾಡಲಾಯಿತು. ದಸರಾ ಆನೆಗಳಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತಿರುವ ಮಾಜಿ ಕ್ಯಾಪ್ಟನ್​ ಅರ್ಜುನ ಆನೆ 5680 ಕೆಜಿ ತೂಕ ಹೊಂದಿ ಅತ್ಯಂತ ಬಲಶಾಲಿ ಎಂಬ ಹೆಗ್ಗಳಿಕೆಯನ್ನು ಮತ್ತೆ ಉಳಿಸಿಕೊಂಡಿದೆ. ಮೊದಲ ಬಾರಿಗೆ ಜಂಬುಸವಾರಿಯ ಕ್ಯಾಪ್ಟನ್ ಅಭಿಮನ್ಯು ಆನೆ ತೂಕ ಸೆ. 6 ರಂದು 5160 ಕೆಜಿ ಇತ್ತು. ಈ […]