ರಿಲಯನ್ಸ್ ಜಿಯೊದಿಂದ ₹1 ಬೆಲೆಯ ರೀಚಾರ್ಜ್ ಪ್ಲ್ಯಾನ್ ಪ್ರಕಟ
ಬೆಂಗಳೂರು: ರಿಲಯನ್ಸ್ ಜಿಯೊ ತನ್ನ ಗ್ರಾಹಕರಿಗೆ 30 ದಿನ ವ್ಯಾಲಿಡಿಟಿಯ ₹1 ಬೆಲೆಯ ಹೊಸ ರೀಚಾರ್ಜ್ ಪ್ಲ್ಯಾನ್ ಪರಿಚಯಿಸಿದೆ. ಪ್ರಿಪೇಯ್ಡ್ ಗ್ರಾಹಕರು ₹1 ರೀಚಾರ್ಜ್ ಮಾಡಿಸಿಕೊಂಡರೆ, 30 ದಿನ ವ್ಯಾಲಿಡಿಟಿಯ ಜತೆಗೆ 100ಎಂಬಿ ಡೇಟಾ ದೊರೆಯಲಿದೆ. ಹೊಸ ಪ್ಲ್ಯಾನ್ ಮೈ ಜಿಯೊ ಆ್ಯಪ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದೆ. ಜಿಯೊ ವೆಬ್‌ಸೈಟ್‌ನಲ್ಲಿ ಪ್ಲ್ಯಾನ್ ವಿವರ ಮತ್ತು ರೀಚಾರ್ಜ್ ಕೊಡುಗೆ ಲಭ್ಯವಿಲ್ಲ. ಬದಲಾಗಿ ಮೈಜಿಯೊ ಆ್ಯಪ್‌ನಲ್ಲಿ ಅದರ್ ಪ್ಲ್ಯಾನ್ಸ್ ಅಡಿಯಲ್ಲಿ ವ್ಯಾಲ್ಯೂ ಎಂದಿರುವಲ್ಲಿ ಮೋರ್ ಕ್ಲಿಕ್ ಮಾಡಿದಾಗ ₹1 ರೀಚಾರ್ಜ್ ಆಯ್ಕೆ […]