ಟ್ಯಾಕ್ಸಿ, ಸರಕು ವಾಹನ, ಆಟೋರಿಕ್ಷಾ ಖರೀದಿಗೆ ಸಿಗಲಿದೆ 2.5 ಲಕ್ಷ ರೂ. ಸಬ್ಸಿಡಿ; ಯಾರಿಗಿದೆ ಅರ್ಹತೆ?

ಕರ್ನಾಟಕದಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದವರಿಗೆ ಸ್ವಯಂ ಉದ್ಯೋಗ ಆರಂಭಿಸಲು ಉತ್ತಮ ಅವಕಾಶ ಒದಗಿಸುವ ಉದ್ದೇಶದಿಂದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC) ವಿಶೇಷ ವಾಹನ ಖರೀದಿ ಸಹಾಯಧನ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಟ್ಯಾಕ್ಸಿ, ಪ್ರಯಾಣಿಕ ಆಟೋರಿಕ್ಷಾ ಹಾಗೂ ಸರಕು ವಾಹನಗಳನ್ನು ಖರೀದಿಸಲು ಸರ್ಕಾರದಿಂದ ಆರ್ಥಿಕ ನೆರವು ನೀಡಲಾಗುತ್ತದೆ. ಯೋಜನೆ ಕುರಿತು ಒಂದಿಷ್ಟು ಈ ಯೋಜನೆ KMDC ಹಾಗೂ ರಾಷ್ಟ್ರೀಕೃತ/ಅನುಸೂಚಿತ ಬ್ಯಾಂಕ್‌ಗಳ ಸಹಯೋಗದಲ್ಲಿ ಜಾರಿಯಲ್ಲಿದೆ. ಅರ್ಹ ಫಲಾನುಭವಿಗಳು ಬ್ಯಾಂಕ್ ಮೂಲಕ ಸಾಲ ಪಡೆಯುವಾಗ, ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. […]