ಭಾರತದಲ್ಲಿ ಯಾಹೂ ವೆಬ್ ಸೈಟ್ ನ ಜಾಲತಾಣಗಳು ಸ್ಥಗಿತ.!

ನವದೆಹಲಿ: ಯಾಹೂ ವೆಬ್ ಸೈಟ್ ನ ಕೆಲವು ಸುದ್ದಿ ಜಾಲತಾಣಗಳು ಭಾರತದಲ್ಲಿ ಸ್ಥಗಿತಗೊಳ್ಳಲಿದೆ. ಯಾಹೂ ನ್ಯೂಸ್, ಯಾಹೂ ಕ್ರಿಕೆಟ್, ಹಣಕಾಸು, ಮನರಂಜನೆ ಮತ್ತು ಮೇಕರ್ಸ್ ಇಂಡಿಯಾ ಸೇರಿದಂತೆ ಹಲವು ಜಾಲತಾಣಗಳು ಭಾರತದಲ್ಲಿ ಸ್ಥಗಿತವಾಗಲಿದೆ. ಆದರೆ ಕಂಪನಿಯ ಈ ಕ್ರಮದಿಂದ ಯಾಹೂ ಇ–ಮೇಲ್ ಹಾಗೂ ಸರ್ಚ್ ಎಂಜಿನ್ ಬಳಕೆದಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಯ (ಎಫ್‌ಡಿಐ) ಹೊಸ ನಿಯಮಗಳ ಪ್ರಕಾರ ಭಾರತದಲ್ಲಿ ಡಿಜಿಟಲ್ ಮಾಹಿತಿ ಪ್ರಕಟಿಸುವ ಮತ್ತು ನಿರ್ವಹಿಸುವ ಮಾಧ್ಯಮ ಕಂಪನಿಗಳಲ್ಲಿ ವಿದೇಶಿ […]