ವಿಕಲಚೇತನರಿಗೆ ಅನುಕಂಪವಲ್ಲ, ಸ್ವಾಭಿಮಾನದಿಂದ ಬದುಕುವ ಅವಕಾಶ ನೀಡಿ: ಶರ್ಮಿಳಾ ಎಸ್

ಉಡುಪಿ: ವಿಕಲಚೇತನರ ಸಾಧನೆಗಳಿಗೆ ಸಮಾಜವು ಪ್ರೋತ್ಸಾಹ ನೀಡಬೇಕು. ಅವರನ್ನು ಅನುಕಂಪದಿಂದ ಕಾಣುವುದಕ್ಕಿಂತ ಸ್ವಾಭಿಮಾನದಿಂದ ಬದುಕುವ ಹಕ್ಕು ಮತ್ತು ಅವಕಾಶವನ್ನು ನೀಡಬೇಕು. ಅವರಿಗೆ ಅವಮಾನ ಮಾಡುವುದು, ವಂಚಿಸುವುದು ಅವರ ಸಾಧನಗಳನ್ನು ಹಾಳುಗೆಡುವುದು ಜಾಮೀನುರಹಿತ ಅಪರಾಧವಾಗಿದ್ದು, 6 ತಿಂಗಳಿಂದ 6 ವರ್ಷದವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದ್ದು, ವಿಕಲಚೇತನರನ್ನು ಮುಖ್ಯವಾಹಿನಿಗೆ ತರಲು ಎಲ್ಲರೂ ಶ್ರಮಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶೆ ಶರ್ಮಿಳಾ ಎಸ್ ಹೇಳಿದರು. ಅವರು ಶನಿವಾರ ನಗರದ ಶ್ರೀಮತಿ ಅಮ್ಮಣ್ಣಿ […]