ಕಿನ್ನಿಗೋಳಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಹಾಗೂ ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ವಾರ್ಷಿಕೋತ್ಸವ ಸಮಾರಂಭ

ಕಿನ್ನಿಗೋಳಿ: ನಾವು ಹಿಂದೂಗಳಾಗಿ ಒಗ್ಗಟ್ಟಾದಾಗ ಮಾತ್ರ ಸಶಕ್ತ ಸಮಾಜದ ಏಳಿಗೆ ಸಾಧ್ಯ. ನಮ್ಮೊಳಗಿನ ಜಾತಿ – ಪಂಗಂಡಗಳು ಸಾಮೂಹಿಕ ಪ್ರಗತಿಗೆ ತೊಡಕಾಗಬಾರದು ಎಂದು ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳದ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಹೇಳಿದರು. ಅವರು ಕಿನ್ನಿಗೋಳಿ ರಾಜರತ್ನಪುರ ಸರಾಫ್ ಅಣ್ಣಯ್ಯಾಚಾರ್ಯ ಸಭಾ ಭವನದಲ್ಲಿ ಕಿನ್ನಿಗೋಳಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಹಾಗೂ ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ವಾರ್ಷಿಕೋತ್ಸವ ಸಮಾರಂಭದಲ್ಲಿ ಶುಭಾಶಂಸನೆ ನೀಡಿ ಮಾತನಾಡಿದರು. ಆನೆಗುಂದಿ ವೇದ ಪಾಠಶಾಲೆಯ ಪವನ್ ಶರ್ಮ್ ಅನುಗ್ರಹ […]
ಜು.15: ವಿಶ್ವಕರ್ಮ ಜಗದ್ಗುರು ಪೀಠ ಕಜ್ಕೆ ಶಾಖಾ ಮಠ ಉದ್ಘಾಟನೆ, ಜು.16: ರಿಂದ ಶ್ರೀ ಶಿವಸುಜ್ಞಾನತೀಥ ಶ್ರೀಪಾದರ 37ನೇ ಚಾತುರ್ಮಾಸ್ಯ ವ್ರತಾನುಷ್ಠಾನ

ಉಡುಪಿ: ಕೊಕ್ಕರ್ಣೆ ಕಜ್ಕೆಯಲ್ಲಿ ನೂತನವಾಗಿ ನಿರ್ಮಾಣವಾದ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಶ್ರೀ ವಿಶ್ವಕರ್ಮ ಜಗದ್ಗುರು ಪೀಠದ ನೂತನ ಶಾಖಾ ಮಠ ಜು.15ರಂದು ಸಾಯಂಕಾಲ 5.30ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ನೂತನ ಶಾಖಾ ಮಠದ ನಿರ್ಮಾಣ ಸಮಿತಿ ಅಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಜ್ಕೆ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಹಬ್ಬಳ್ಳಿ ಸಾಹಿತಿ ಭೀಮ ಸೇನ ಬಡಿಗೇರಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ, ವಿಧಾನ […]
ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ: ಸಾಲ ಸೌಲಭ್ಯ
ಉಡುಪಿ, ಜೂನ್ 17: ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2019-20 ನೇ ಸಾಲಿನಲ್ಲಿ ಸಾಲ ಸೌಲಭ್ಯ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಗಮದ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಇಚ್ಛಿಸುವವರು ವಿಶ್ವಕರ್ಮ ಸಮುದಾಯ ಹಾಗೂ ಅದರ ಉಪ ಜಾತಿಗಳಿಗೆ ಸೇರಿರಬೇಕು. ಗಂಗಾ ಕಲ್ಯಾಣ ಯೋಜನೆಯಲ್ಲಿ ನೀರಾವರಿ ಸೌಲಭ್ಯ ಪಡೆಯಲು ಅರ್ಜಿದಾರರು ಸಣ್ಣ ಮತ್ತು ಅತಿಸಣ್ಣ ರೈತರಾಗಿದ್ದು, ಒಂದೇಕಡೆ ಹೊಂದಿಕೊಂಡಿರುವಂತೆ 2 ರಿಂದ 5 ಎಕರೆ ಜಮೀನು ಹೊಂದಿರಬೇಕು. 18 ರಿಂದ 55 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯ ಸರ್ಕಾರದ […]
ಡಿ.೧೬ರಿಂದ ಕಟಪಾಡಿ ರಥೋತ್ಸವ

ಕಟಪಾಡಿ: ತೆಂಕಾರು ಮಾಗಣೆ ಕಟಪಾಡಿ ವೇಣುಗಿರಿ ಶ್ರೀಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಕಟಪಾಡಿಯಲ್ಲಿ ಡಿ.೧೬ ರಂದು ಕಲಾ ಹೋಮ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ ಹಾಗೂ ರಾತ್ರಿ ಉತ್ಸವ ಆರಂಭವಾಗಲಿದೆ, ಡಿ.೧೭ ರಂದು ಕಲಶಾಭಿಷೇಕ ಮಹಾಪೂಜೆ ಉತ್ಸವ ಮಹಾಜನ ಸಂತರ್ಪಣೆ, ಡಿ.೧೮ ರಂದು ಕವಾಟೋದ್ಘಾಟನೆ, ಮಹಾಪೂಜೆ, ತುಲಾಭಾರ ಸೇವೆ, ಅವಭೃತ ಉತ್ಸವ ಡಿ.೨೨ರಂದು ಶ್ರೀ ದೇವರಿಗೆ ರಂಗಪೂಜೆ, ಪರಿವಾರ ದೈವಗಳ ನೇಮೋತ್ಸವ ಡಿ.೨೩ರಂದು ಸಂಪ್ರೋಕ್ಷಣೆ ಕಾರ್ಯಕ್ರಮಗಳು ನಡೆಯಲಿದೆ.