ವಿಶ್ವಕಪ್ ನಿಂದ ಶಿಖರ್ ಧವನ್ ಔಟ್..! ಬೆರಳಿನ‌ ಗಾಯದ ಸಮಸ್ಯೆ ಹಿನ್ನೆಲೆ

ನವದೆಹಲಿ: ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರುತ್ತಿರುವ ಸಮಯದಲ್ಲೇ ತಂಡಕ್ಕೆ ದೊಡ್ಡ ಆಘಾತ ಎದುರಾಗಿದ್ದು, ಆರಂಭಿಕ ಆಟಗಾರ ಶಿಖರ್ ಧವನ್ ಗಾಯದ ಸಮಸ್ಯೆಯಿಂದ ವಿಶ್ವಕಪ್​ನಿಂದ ಹೊರಗುಳಿದಿದ್ದಾರೆ. ಕಳೆದ ಆಸ್ಟ್ರೇಲಿಯಾ ವಿರುದ್ದದ ಪಂದ್ಯದ ವೇಳೆ ಎಡಗೈ ಹೆಬ್ಬರಳಿಗೆ ಗಾಯವಾಗಿತ್ತು. ಹೀಗಾಗಿ ವೈದ್ಯಾಧಿಕಾರಿಗಳು ಪರೀಕ್ಷೆ ನಡೆಸಿದ್ದು, ಇನ್ನು ಮೂರು ವಾರಗಳ ಕಾಲ ವಿಶ್ರಾಂತಿ ಮಾಡುವಂತೆ ಸೂಚಿಸಿದ್ದಾರೆ. ಬೆರಳಿಗೆ ಆಗಿರುವ ಗಾಯದ ಪ್ರಮಾಣವನ್ನು ಪತ್ತೆ ಹಚ್ಚಲು ಸ್ಕಾನಿಂಗ್ ಮಾಡಲಾಗಿದ್ದು, ಅನಂತರ ವರದಿ ಪರಿಶೀಲಿಸಿದ ವೈದ್ಯರು, ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಆಸ್ಟ್ರೇಲಿಯಾ […]

ವಿಶ್ವಕಪ್-2019: 500 ರನ್ ದಾಟುವ ನಿರೀಕ್ಷೆ..!

ಲಂಡನ್ : ಈ ಬಾರಿ‌ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್’ನಲ್ಲಿ ಬ್ಯಾಟ್ಸ್’ಮನ್’ಗಳು ಅಬ್ಬರಿಸುವ ಸುಳಿವಿದ್ದು, ಅಭ್ಯಾಸ ಪಂದ್ಯದದಲ್ಲೇ ಹೆಚ್ಚಿನ‌ ತಂಡಗಳು 350, 400 ರನ್ ಗಳಿಸಿವೆ. ಇಂಗ್ಲೆಂಡ್’ನ ಬ್ಯಾಟಿಂಗ್ ಸ್ನೇಹಿ ಪಿಚ್’ಗಳಲ್ಲಿ ಏಕದಿನ ಕ್ರಿಕೆಟ್ ಮೊದಲ ಬಾರಿಗೆ 500 ರನ್’ಗೆ ಸಾಕ್ಷಿಯಾಗುವ ನಿರೀಕ್ಷೆ ಇದ್ದು, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಅಭಿಮಾನಿಗಳ ಸ್ಕೋರ್’ಕಾರ್ಡ್’ಗಳನ್ನು ಪರಿಷ್ಕರಿಸಿ, 500 ರನ್ ಪಟ್ಟಿಯನ್ನು ಅಳವಡಿಸಿದೆ. ಇಂಗ್ಲೆಂಡ್’ನಲ್ಲಿ ಪಂದ್ಯಗಳ ಸ್ಕೋರ್ ಪಟ್ಟಿಯನ್ನು ಅಭಿಮಾನಿಗಳು ಖರೀದಿಸಿ, ಸ್ಮರಣಿಕೆಯಾಗಿ ಸಂಗ್ರಹಿಸುವ ಪದ್ಧತಿ ಇದೆ. ಸ್ಕೋರ್ ಪಟ್ಟಿಯಲ್ಲಿ […]

ವಿಶ್ವಕಪ್ ಗೆ ಟೀಂ‌ ಇಂಡಿಯ ತಂಡ ಪ್ರಕಟ, ಕನ್ನಡಿಗ ಕೆಎಲ್ ರಾಹುಲ್ ಗೆ ಸ್ಥಾನ

ಮುಂಬೈ: 2019 ವಿಶ್ವಕಪ್ ಟೂರ್ನಿಗೆ 15 ಸದಸ್ಯರ ಟೀಂ ಇಂಡಿಯಾವನ್ನು ಸೋಮವಾರ ಬಿಸಿಸಿಐ ಪ್ರಕಟಿಸಿದೆ. ಕನ್ನಡಿಗ ಕೆ.ಎಲ್ ರಾಹುಲ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಋಷಬ್ ಪಂತ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ನಾಯಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಬಲಿಷ್ಠ ತಂಡವನ್ನೇ ಆಯ್ಕೆ ಮಾಡಿದೆ. ವಿಶ್ವಕಪ್ ಆರಂಭಕ್ಕೆ ಇನ್ನು 50 ದಿನಗಳು ಮಾತ್ರ ಬಾಕಿ ಇದೆ. ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.‍ಕೆ ಪ್ರಸಾದ್ ತಂಡವನ್ನು ಪ್ರಕಟಿಸಿದ್ದು, ಅದಕ್ಕೂ ಮುನ್ನ ಆಯ್ಕೆ ಸಮಿತಿ […]