ಬಾಲಪ್ರತಿಭೆಯ ಕೈಯಲ್ಲಿರಳಿದ ತರಕಾರಿ ತ್ರಿವರ್ಣ ಧ್ವಜ

ಕಟಪಾಡಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಬಾಲ ಪ್ರತಿಭೆ ಪ್ರಥಮ್ ಕಾಮತ್ ಕಟಪಾಡಿ ಇವರು ರಚಿಸಿದ ತರಕಾರಿ ತ್ರಿವರ್ಣ ಧ್ವಜ ಕಲಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ. ಬಟಾಟೆ, ಕ್ಯಾರೆಟ್, ಬೆಳ್ಳುಳ್ಳಿ, ಹಾಗೂ ಹಸಿಮೆಣಸು ಬಳಸಿ ರಚಿಸಿರುವ ಕಲಾಕೃತಿ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಕೆ. ನಾಗೇಶ್ ಕಾಮತ್, ಕೆ. ಸುಜಾತ ಕಾಮತ್ ದಂಪತಿಯ ಪುತ್ರ ಪ್ರಥಮ್ ಕಾಮತ್ ಜಾದೂ ಪ್ರದರ್ಶನದಲ್ಲಿಯೂ ಪ್ರಖ್ಯಾತಿ ಗಳಿಸಿದ್ದಾರೆ. ಇದರ ಜೊತೆಗೆ ಅವರು ಚಿತ್ರಕಲೆ, ಕ್ರಾಫ್ಟ್, ಕ್ಲೇ ಮಾಡೆಲಿಂಗ್, ಛದ್ಮವೇಷಗಳಲ್ಲಿಯೂ ಎತ್ತಿದ ಕೈ. ಉದಯ ಟಿವಿಯ […]