ಮಂಗಳೂರು: ನಗರ ದಕ್ಷಿಣ ಬಿಜೆಪಿ ನೂತನ ಅಧ್ಯಕ್ಷರ ಪದಗ್ರಹಣ

ಮಂಗಳೂರು: ಮಂಗಳೂರು ನಗರ ದಕ್ಷಿಣ ಮಂಡಲ ಬಿಜೆಪಿಯ ನೂತನ ಮಂಡಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಬಿಜೆಪಿ ಕಚೇರಿಯಲ್ಲಿ ಜರಗಿತು. ಮಂಗಳೂರು ನಗರ ದಕ್ಷಿಣ ಮಂಡಲದ ಅದ್ಯಕ್ಷರಾಗಿದ್ದ ಶಾಸಕ ವೇದವ್ಯಾಸ್ ಕಾಮತ್ ಅವರು ನೂತನ ಅದ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ ಅವರಿಗೆ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷವು ಭಾರತದ ಮೂಲೆ ಮೂಲೆಗಳಲ್ಲಿ ತನ್ನ ವಿಚಾರಧಾರೆಯ ಮೂಲಕ ಬಲಗೊಂಡಿದೆ. ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ರಾಷ್ಟ್ರೀಯವಾದವನ್ನು ಉಸಿರಾಡುವ ರಾಷ್ಟ್ರೀಯವಾದಿ ಪಕ್ಷವಾಗಿ ಜನ ಮನ್ನಣೆ […]