ಗಾಂಧಿ ಗ್ರಾಮ ಪುರಸ್ಕಾರ ಪಡೆದ ವಂಡ್ಸೆ ಗ್ರಾಮದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದೆ ಸೇತುವೆ; ಪಂಚಾಯತ್ ಪ್ರತಿನಿಧಿಗಳಿಂದ ದಿವ್ಯ ನಿರ್ಲಕ್ಷ್ಯ

ವಂಡ್ಸೆ: ಪೇಟೆಯ ಅನತಿ ದೂರದಲ್ಲಿರುವ ಲಕ್ಷ್ಮಣ ನಾಯ್ಕ್ ಎಂಬುವವರ ಮನೆಯ ಹತ್ತಿರವಿರುವ 30 ವರ್ಷದ ಹಿಂದಿನ ಸೇತುವೆಯ ಎರಡು ಕಬ್ಬಿಣದ ಸರಳು ಪಟ್ಟಿ ಕಿತ್ತು ಹೋಗಿದ್ದರೂ ಸಂಬಂಧಪಟ್ಟವರು ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ. ಇದು ವಂಡ್ಸೆ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದ ಸೇತುವೆ ಆಗಿದ್ದು, ಮತದಾನದ ಸಮಯದಲ್ಲಿ ಇದೇ ಸೇತುವೆ ಮೂಲಕ ತೆರಳಿ ಮತದಾನ ನಡೆಸುತ್ತಾರೆ. ದಿನನಿತ್ಯ ಈ ಸೇತುವೆಯ ಮೂಲಕ ಸಾರ್ವಜನಿಕರು ತಮ್ಮ ದೈನಂದಿನ ಕೆಲಸಗಳಿಗಾಗಿ ತೆರಳುತ್ತಾರೆ. ಶಾಲಾ ಮಕ್ಕಳು ಕೂಡಾ ಇದೇ ಸೇತುವೆಯನ್ನಾಶ್ರಯಿಸಿ ಶಾಲೆಗೆ ತೆರಳುತ್ತಾರೆ. […]

ವಂಡ್ಸೆ ಗ್ರಾಮಕ್ಕೆ ಬೇಕಾಗಿದೆ 108 ಅಂಬ್ಯುಲೆನ್ಸ್ ಮತ್ತು ಸಮುದಾಯ ಆರೋಗ್ಯ ಕೇಂದ್ರ

ಕುಂದಾಪುರ: ವಂಡ್ಸೆ ಹೋಬಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರೂ 108 ಅಂಬ್ಯುಲೆನ್ಸ್ ಮತ್ತು ಸಮುದಾಯ ಆರೋಗ್ಯ ಕೇಂದ್ರ ಇಲ್ಲದಿರುವುದು ದುರದೃಷ್ಕಕರ. ವಂಡ್ಸೆ ಹೋಬಳಿ ಗ್ರಾಮ ಆಗಿರುವುದರಿಂದ ಇಲ್ಲಿಗೆ ಒಂದು ಸಮುದಾಯ ಆರೋಗ್ಯ ಕೇಂದ್ರ ಮತ್ತು 108 ಅಂಬ್ಯುಲೆನ್ಸ್ ಸೌಲಭ್ಯ ಅಗತ್ಯವಾಗಿದೆ. ಇಲ್ಲಿನ ಸರಕಾರಿ ಕಛೇರಿ, ಬ್ಯಾಂಕುಗಳು, ಸೊಸೈಟಿಯಂತಹ ನಾನಾ ಕೆಲಸಗಳಿಗೆ ಬೇರೆ ಗ್ರಾಮಗಳಿಂದ ನೂರಕ್ಕೂ ಹೆಚ್ಚು ಜನರು ವ್ಯವಹಾರಕ್ಕಾಗಿ ಪ್ರತಿ ನಿತ್ಯ ಬರುತ್ತಾರೆ. ಹೋಬಳಿಗೊಂದು ಸಮುದಾಯ ಆರೋಗ್ಯ ಕೇಂದ್ರ ಇದ್ದರೆ ಸಾರ್ವಜನಿಕರಿಗೆ ಅನುಕೂಲವಾಗುವುದು.ಇಲ್ಲಿ ಯಾರದ್ದಾದರೂ ಆರೋಗ್ಯ ಹದೆಗೆಟ್ಟರೆ […]

2 ಪ್ರತ್ಯೇಕ ದಾಳಿಯಲ್ಲಿ ನಾಲ್ಕು ಟಿಪ್ಪರ್; 20 ಮೆಟ್ರಿಕ್ ಟನ್ ಅಕ್ರಮ ಮರಳು ವಶ: ಗಣಿ ಇಲಾಖಾಧಿಕಾರಿಗಳಿಂದ ಕ್ಷಿಪ್ರ ಕಾರ್ಯಾಚರಣೆ

ಕುಂದಾಪುರ: ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ಮೊವಾಡಿ ಪರಿಸರದಲ್ಲಿ ಪರವಾನಿಗೆ ರಹಿತವಾಗಿ ಮರಳು ಸಾಗಾಟ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸ್ವೀಕೃತವಾದ ದೂರಿನ ಮೇರೆಗೆ ಇಲಾಖೆ ಹಿರಿಯ ಭೂವಿಜ್ಞಾನಿ ಸಂದೀಪ್ ಜಿ. ಯು ಅವರ ಮಾರ್ಗದರ್ಶನದಲ್ಲಿ ಸೋಮವಾರ (ಡಿ.19) ಮದ್ಯಾಹ್ನ 12.30ಕ್ಕೆ ಭೂ ವಿಜ್ಞಾನಿ ಸಂಧ್ಯಾ ಅವರು ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ಮೋವಾಡಿ ಪರಿಸರದಲ್ಲಿ ಕಾರ್ಯಚಾರಣೆ ನಡೆಸಿ ಪರವಾನಿಗೆ ರಹಿತವಾಗಿ ಮರಳು ಸಾಗಾಣಿಕೆ ನಡೆಸುತ್ತಿದ್ದ ಮರಳು ಸಹಿತ 2 ಟಿಪ್ಪರ್ […]