ಉಡುಪಿ-ಕಾರ್ಕಳದಲ್ಲಿ ಮತ್ತೊಮ್ಮೆ ಅರಳಿದ ಕಮಲ; ಸುನಿಲ್ ಕುಮಾರ್- ಯಶ್ ಪಾಲ್ ಸುವರ್ಣ ಗೆ ಒಲಿದ ವಿಜಯ

ಉಡುಪಿ: ಬಿಜೆಪಿ- ಕಾಂಗ್ರೆಸ್ ನಡುವೆ ನೇರಹಣಾಹಣಿಯ ಉಡುಪಿ ಮತ್ತು ಕಾರ್ಕಳ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಅರಳಿದೆ. ಫಲಿತಾಂಶ ಉಡುಪಿ ಪ್ರಸಾದ್ ಕಾಂಚನ್- ಕಾಂಗ್ರೆಸ್: 52930 ಯಶಪಾಲ್ ಎ ಸುವರ್ಣ- ಬಿಜೆಪಿ: 77386 ಕಾರ್ಕಳ ಉದಯ ಕುಮಾರ್ ಶೆಟ್ಟಿ- ಕಾಂಗ್ರೆಸ್: 71615 ವಿ ಸುನಿಲ್ ಕುಮಾರ್- ಬಿಜೆಪಿ: 76019

ಕಾರ್ಕಳದಲ್ಲಿ ಮುತಾಲಿಕ್ ಸ್ಪರ್ಧೆ: ಬಿಜೆಪಿಯಿಂದ ಬೆಂಬಲದ ನಿರೀಕ್ಷೆ

ಕಾರ್ಕಳ: ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್, ಹಿಂದೂ ಸಮಾಜದ ಶ್ರೇಯಸ್ಸಿಗಾಗಿ ಬಿಜೆಪಿಯು ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ತನ್ನನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್, ಮುತಾಲಿಕ್ ರವರು 47 ವರ್ಷಗಳಿಂದ ಮನೆ ಮಠ ಕುಟುಂಬವನ್ನು ತ್ಯಜಿಸಿ ದೇಶ ಮತ್ತು ಧರ್ಮ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ಈ ಹಿಂದೆ ರಾಜಕೀಯ ಅವಕಾಶಗಳಿದ್ದಾಗಲೂ ತಿರಸ್ಕರಿಸಿ ಸಂಘಟನೆಯಲ್ಲಿ ತೊಡಗಿಸಿಕೊಂಡು ದೇಶ […]

ಸ್ವರ್ಣ ಕಾರ್ಕಳದ ಭಾಗವಾಗಿ ವಿನೂತನ ಕಾರ್ಯಕ್ರಮ: ವಿ.ಸುನಿಲ್ ಕುಮಾರ್

ಕಾರ್ಕಳ: ಸ್ವರ್ಣ ಕಾರ್ಕಳದ ಭಾಗವಾಗಿ ಕಾರ್ಕಳದಲ್ಲಿ ಹಲವು ವಿನೂತನ ಮತ್ತು ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು. ಅವರು ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ ನಡೆದ ಪೊಲೀಸ್ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಂಗಳೂರು ಮತ್ತು ಮೈಸೂರುಗೆ ಸೀಮಿತವಾಗಿದ್ದ ಪೊಲೀಸ್ ಬ್ಯಾಂಡ್ ಮತ್ತು ಮಂಜಿನ ಕವಾಯತು ಕಾರ್ಯಕ್ರಮವನ್ನು ಕಾರ್ಕಳದಲ್ಲಿ ಆಯೋಜಿಸುವ ಮೂಲಕ, ತಾಲೂಕಿಗೆ ಇನ್ನಷ್ಟು ಗರಿಮೆ, ಹೊಸತನ ನೀಡುವ ಪ್ರಯತ್ನವಾಗಿದೆ. ಕಾರ್ಕಳದಲ್ಲಿ ಆಯೋಜಿಸುವ ಎಲ್ಲಾ […]

ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಉತ್ಸವಗಳು ಸಹಕಾರಿ: ವಿ. ಸುನಿಲ್ ಕುಮಾರ್

ಕಾರ್ಕಳ: ಪರಶುರಾಮ ಥೀಮ್ ಪಾರ್ಕ್ ಹಾಗೂ ಉಡುಪಿ ಜಿಲ್ಲಾ ರಜತಮಹೋತ್ಸವದ ಸಮಾರೋಪವು ಏಕಕಾಲದಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು. ಅವರು ಪರಶುರಾಮ ಥೀಂ ಪಾರ್ಕ್ ನ ಸಮಾರೋಪ ಸಮಾರಂಭ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಉತ್ಸವಗಳು ಸಹಕಾರಿಯಾಗಿದೆ. ರಾಜ್ಯದಲ್ಲಿ ಕಾರ್ಕಳ ಬ್ರಾಂಡ್ ನಿರ್ಮಾಣವಾಗಬೇಕು. ತಾಲೂಕಿನ ಉತ್ಸಾಹದ ಮೂಲಕ ರಾಜ್ಯದಲ್ಲೆಲ್ಲ ಉತ್ಸಾಹ ಮೂಡುವಂತೆ ಮಾಡಿದೆ. ಕ್ಷೇತ್ರದ ಮೂಲ ಸೌಕರ್ಯಗಳನ್ನು ಒದಗಿಸುವ […]

ಕಾರ್ಕಳ: ಸಂಜೀವಿನಿ ರಾಷ್ಟ್ರಮಟ್ಟದ ಕರಕುಶಲ ವಸ್ತು ಪ್ರದರ್ಶನ-ಮಾರಾಟ ಮಳಿಗೆ ಉದ್ಘಾಟನೆ

ಕಾರ್ಕಳ :ಆಚಾರ-ವಿಚಾರ ಪದ್ಧತಿಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಒಂದು ವೇದಿಕೆಯಡಿ ಎಲ್ಲಾ ಪ್ರದೇಶಗಳ ವಸ್ತುಗಳು ಮತ್ತು ಉತ್ಪನ್ನಗಳನ್ನು ನೋಡುವ ಅವಕಾಶ ದೊರಕಿದೆ. ವಿವಿಧ ಜಿಲ್ಲೆಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದಿಂದ ಸಬಲೀಕರಣದ ಸಫಲತೆ ಫಲ ಕಂಡು ಬರುತ್ತಿದೆ. ಇಲ್ಲಿ ಒಂದು ರೀತಿಯಲ್ಲಿ ಭಾರತ ದರ್ಶನ ಆಗಿದೆ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು. ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಭಾರತ ಸರಕಾರ-ಗಾಂಧೀ ಸಿಲ್ಕ್ ಬಜಾರ್, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ […]