ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಉತ್ಸವಗಳು ಸಹಕಾರಿ: ವಿ. ಸುನಿಲ್ ಕುಮಾರ್

ಕಾರ್ಕಳ: ಪರಶುರಾಮ ಥೀಮ್ ಪಾರ್ಕ್ ಹಾಗೂ ಉಡುಪಿ ಜಿಲ್ಲಾ ರಜತಮಹೋತ್ಸವದ ಸಮಾರೋಪವು ಏಕಕಾಲದಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.

ಅವರು ಪರಶುರಾಮ ಥೀಂ ಪಾರ್ಕ್ ನ ಸಮಾರೋಪ ಸಮಾರಂಭ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಉತ್ಸವಗಳು ಸಹಕಾರಿಯಾಗಿದೆ. ರಾಜ್ಯದಲ್ಲಿ ಕಾರ್ಕಳ ಬ್ರಾಂಡ್ ನಿರ್ಮಾಣವಾಗಬೇಕು. ತಾಲೂಕಿನ ಉತ್ಸಾಹದ ಮೂಲಕ ರಾಜ್ಯದಲ್ಲೆಲ್ಲ ಉತ್ಸಾಹ ಮೂಡುವಂತೆ ಮಾಡಿದೆ.

ಕ್ಷೇತ್ರದ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸ ನಡೆಯುತ್ತಿದೆ .ವಾರಾಹಿ ಯೋಜನೆ ಮೂಲಕ 46000 ಮನೆಗಳಿಗೆ ಕುಡಿಯುವ ನೀರು ತರುವ ಯೋಜನೆ ಮುಂದಿನ‌ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.
ಕಾರ್ಕಳ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ,‌ ಶೈಕ್ಷಣಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದೆ.
ಕಾರ್ಕಳ ತಾಲೂಕಿನ ಮಹಿಳಾ ಕಾರ್ಮಿಕರಿಗೆ ಅನುಕೂಲವಾಗುವಂತೆ ಜವಳಿ ಪಾರ್ಕ್ ನಿರ್ಮಾಣವಾಗುತ್ತಿದೆ.
ಯಾವುದೇ ಟೀಕೆಗಳಿಗೆ ಒಳಪಡದೆ ರಾಜಕೀಯ ಮಾಡದೆ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುತಿದ್ದೇವೆ ಎಂದರು.

ಎಂ ಎಲ್ ಸಿ ಮಂಜುನಾಥ್ ಭಂಡಾರಿ ಪರಶುರಾಮ ಸೃಷ್ಟಿಯೊಳಗೆ ಪರಶುರಾಮನ ಮೂರ್ತಿಯನ್ನು ಸೃಷ್ಟಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ ಎಂದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ ಸುನೀಲ್ ಕುಮಾರ್ ಅವರನ್ನು ಅಧುನಿಕ ಪರಶುರಾಮ ಎಂದು ಬಣ್ಣಿಸಿದರು. ಮುಂದಿನ ಚುನಾವಣೆಯಲ್ಲಿ ಸಚಿವ ಸುನೀಲ್ ಕುಮಾರ್ ಅವರನ್ನು ಗೆಲ್ಲಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಗೆಸೆಟಿಯರ್ ಸಂಪಾದಕಿ ಎ ರಾಜಮ್ಮ ಚೌಡರೆಡ್ಡಿ ಗೆಸೆಟಿಯರ್ ಮಾಹಿತಿ ನೀಡಿದರು.

ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್,
ಮುನಿಯಾಲು ಉದಯ ಕುಮಾರ್ ಶೆಟ್ಟಿ, ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಜಿಲ್ಲಾ ಎಸ್ಪಿ ಅಕ್ಷಯ್ ಮಚ್ಚೀಂದ್ರನಾಥ್, ಉದ್ಯಮಿಗಳಾದ ಎಸ್ ಹುರ್ಲಾಡಿ ರಘುವೀರಶೆಟ್ಟಿ, ಸುಧೀರ್ ಹೆಗ್ಡೆ ಬೈಲೂರು, ತೆಳ್ಳಾರು ಗಿರೀಶ್ ಶೆಟ್ಟಿ ಉಪಸ್ಥಿತರಿದ್ದರು.

ಇದೆ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದ ಸುಪ್ರಿತ್ ರಾವ್ , ದೀಕ್ಷಿತ್, ಸಚಿನ್ ಕುಮಾರ್, ಗೌತಮ್, ಖ್ಯಾತ ವಿನ್ಯಾಸಕಾರ ಪುರುಷೋತ್ತಮ ಅಡ್ವೆ , ದೇವಾನಂದ , ಅನಿಲ್ , ಸದಾಶಿವ ಆಚಾರ್ , ಪ್ರತಿಮೆ ನಿಮಾರ್ತೃ ಕೃಷ್ಣ ನಾಯ್ಕ್ ತಂಡ ‌ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ರಮ್ಯ ಸುಧೀಂದ್ರ ಪ್ರಾರ್ಥಿಸಿದರು, ನವೀನ್ ನಾಯಕ್ ಸ್ವಾಗತಿಸಿದರು ಸದಾನಂದ ಸಾಲಿಯಾನ್ ವಂದಿಸಿದರು.