ರಣಮಳೆಗೆ ನಲುಗಿದ ಉತ್ತರಾಖಂಡ್: 42 ಸಾವು, ಹಲವರು ನಾಪತ್ತೆ

ನವದೆಹಲಿ: ವರುಣನ ಆರ್ಭಟಕ್ಕೆ ಉತ್ತರಾಖಂಡ್​ ನಲುಗಿ ಹೋಗಿದ್ದು, ಜನರು ಪ್ರವಾಹದ ಭೀಕರತೆಗೆ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ನಿರಂತರ ಸುರಿಯುತ್ತಿರುವ ಮಳೆ, ಭೂಕುಸಿತಕ್ಕೆ ಈವರೆಗೂ 42ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಅನೇಕ ಮಂದಿ ನಾಪತ್ತೆಯಾಗಿದ್ದಾರೆ. ಸಾವನ್ನಪ್ಪಿರುವ 42 ಮಂದಿಯಲ್ಲಿ 28 ಜನರು ನೈತಿನಾಲ್ ಒಂದರಲ್ಲೇ ಮೃತಪಟ್ಟಿದ್ದಾರೆ. ಅಲ್ಲದೇ ಅಲ್ಮೋರಾ ಮತ್ತ ಚಂಪಾವತ್​​ನಲ್ಲಿ 6 ಮಂದಿ ಸಾವನ್ನಪ್ಪಿದ್ರೆ, ಪಿತೋಗಡ್ ಹಾಗೂ ಉಧಾಮ್ ಸಿಂಗ್ ನಗರದಲ್ಲಿ ತಲಾ ಒಬ್ಬರು ಮಳೆರಾಯನ ಆರ್ಭಟಕ್ಕೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಈ ನಡುವೆಯೇ ರಾಜ್ಯದ ಸಿಎಂ […]