ಐತಿಹಾಸಿಕ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಗೆ ಯುಎಸ್ ಬೆಂಬಲ: ರೈಲು-ಜಲಮಾರ್ಗದ ಮೂಲಕ ಸಂಪರ್ಕ

ನವದೆಹಲಿ: ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು G20 ಪಾಲುದಾರರು ಭಾರತವನ್ನು ಮಧ್ಯಪ್ರಾಚ್ಯ ಮತ್ತು ಅಂತಿಮವಾಗಿ ಯುರೋಪ್‌ನೊಂದಿಗೆ ಸಂಪರ್ಕಿಸುವ ರೈಲು ಮತ್ತು ಶಿಪ್ಪಿಂಗ್ ಕಾರಿಡಾರ್‌ಗಾಗಿ ಶನಿವಾರ ಯೋಜನೆಗಳನ್ನು ರೂಪಿಸಲು ಯೋಜಿಸಿದ್ದಾರೆ. ಇದು ಚೀನಾದ ಬೆಲ್ಟ್ ಎಂಡ್ ರೋಡ್ ಯೋಜನೆಯನ್ನು ಎದುರಿಸಲು ಅಮೇರಿಕಾ ಸಂಯುಕ್ತ ಸಂಸ್ಥಾನದ ನಿರ್ಣಾಯಕ ನಿರ್ಧಾರವಾಗಿದೆ ಎನ್ನಲಾಗಿದೆ. ಅಧ್ಯಕ್ಷ ಬೈಡೆನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸುಮಾರು ಒಂದು ಗಂಟೆಗಳ ಕಾಲ ಮಾತನಾಡಿದರು ಮತ್ತು ಅವರ ಚರ್ಚೆಯು ಮೂಲಸೌಕರ್ಯ ಮತ್ತು ಸಂವಹನಗಳಿಗೆ ಸಂಬಂಧಿಸಿದ “ಪ್ರಮುಖ […]

ನಾನು ಮೋದಿ ಅಭಿಮಾನಿ ಎಂದ ಎಲೋನ್ ಮಸ್ಕ್; ಸಾಧ್ಯವಾದಷ್ಟು ಬೇಗ ಟೆಸ್ಲಾ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ

ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ದಿನಗಳ ಅಮೇರಿಕಾ ಪ್ರವಾಸದಲ್ಲಿದ್ದು ಮಂಗಳವಾರ ಟೆಕ್ ದಿಗ್ಗಜ, ಟೆಸ್ಲಾ ಸಿಇಒ ಮತ್ತು ಟ್ವಿಟರ್ ಮಾಲೀಕ ಎಲೋನ್ ಮಸ್ಕ್ ಅವರನ್ನು ಭೇಟಿಯಾದರು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಸ್ಕ್, ‘‘ನಾನು ಮೋದಿ ಅವರ ಅಭಿಮಾನಿ” ಎಂದು ಹೇಳಿದ್ದಾರೆ. “ಇದು ಪ್ರಧಾನ ಮಂತ್ರಿಯೊಂದಿಗಿನ ಅದ್ಭುತ ಸಭೆ ಮತ್ತು ನಾನು ಅವರನ್ನು ತುಂಬಾ ಇಷ್ಟಪಡುತ್ತೇನೆ. ಅವರು ಕೆಲವು ವರ್ಷಗಳ ಹಿಂದೆ ನಮ್ಮ ಕಾರ್ಖಾನೆಗೆ ಭೇಟಿ ನೀಡಿದ್ದರು. ಹಾಗಾಗಿ, ನಾವು ಹಲವು ಕಾಲದಿಂದ […]

ಬಿಎಂಡಬ್ಲ್ಯೂ ಅನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಟೆಸ್ಲಾ: 25 ವರ್ಷಗಳಲ್ಲಿ ಮೊದಲ ಬಾರಿಗೆ ಅಮೇರಿಕಾ ಕಾರು ಕಂಪನಿಯ ಸಾಧನೆ

25 ವರ್ಷಗಳಲ್ಲಿ ಅಮೇರಿಕಾದ ವಾಹನ ತಯಾರಕರು ಮಾಡಲಾಗದ್ದನ್ನು ಟೆಸ್ಲಾ ಮಾಡಿ ತೋರಿಸಿದೆ. 2022 ರಲ್ಲಿ ಯುಎಸ್‌ನ ಅಗ್ರ ಐಷಾರಾಮಿ ಬ್ರಾಂಡ್‌ ಕಾರ್ ನ ಶೀರ್ಷಿಕೆಯನ್ನು ಪಡೆದ ಟೆಸ್ಲಾ, ಇದುವರೆಗೂ ಅಗ್ರಸ್ಥಾನದಲ್ಲಿದ್ದ ಜರ್ಮನಿಯ ಬಿಎಂಡಬ್ಲ್ಯೂ ಕಾರುಗಳನ್ನು ಹಿಂದಿಕ್ಕಿದೆ. 2021 ರಲ್ಲಿ ಟೆಸ್ಲಾ ಅಮೇರಿಕಾದಲ್ಲಿ ಬಿಎಂಡಬ್ಲ್ಯೂ ಗಿಂತ ಕೇವಲ 23,244 ಕಡಿಮೆ ವಾಹನಗಳನ್ನು ಮಾರಾಟ ಮಾಡಿತ್ತು, ಆದರೆ 2022 ರಲ್ಲಿ ಟೆಸ್ಲಾ ಇದನ್ನು ಸಂಪೂರ್ಣವಾಗಿ ತಿರುಗಿಸಿತು. ಆಟೋಮೋಟಿವ್ ನ್ಯೂಸ್ ರಿಸರ್ಚ್ ಮತ್ತು ಡಾಟಾ ಸೆಂಟರ್‌ನ ಅಂದಾಜಿನ ಪ್ರಕಾರ ಟೆಸ್ಲಾ ಕಳೆದ […]

ಅಮೇರಿಕಾ ಇಂಗ್ಲೆಂಡ್ ಗಳಿಗಿಂತಲೂ ದುಪ್ಪಟ್ಟು ಮಹಿಳಾ ವಾಣಿಜ್ಯ ಪೈಲಟ್ ಗಳನ್ನು ಹೊಂದಿರುವ ದೇಶ ಭಾರತ!

ಭಾರತವು ಜಾಗತಿಕವಾಗಿ ಅತಿ ಹೆಚ್ಚು ಶೇಕಡಾವಾರು ಮಹಿಳಾ ಪೈಲಟ್‌ಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ಇಂಟರ್‌ನ್ಯಾಶನಲ್ ಸೊಸೈಟಿ ಆಫ್ ವುಮೆನ್ ಏರ್‌ಲೈನ್ ಪೈಲಟ್‌ಗಳ ಅಂದಾಜಿನ ಪ್ರಕಾರ ವಿಶ್ವದ ಮಹಿಳಾ ಪೈಲಟ್‌ಗಳ ಒಟ್ಟು ಸಂಖ್ಯೆಯಲ್ಲಿ ಸುಮಾರು 12.4% ಭಾರತದ ಮಹಿಳಾ ಪೈಲಟ್ ಗಳಿದ್ದಾರೆ. ವಿಶ್ವದ ಅತಿದೊಡ್ಡ ವಾಯುಯಾನ ಮಾರುಕಟ್ಟೆಯಾದ ಅಮೇರಿಕಾ ಸಂಯುಕ್ತ ಸಂಸ್ಥಾನದ 5.5% ಮತ್ತು ಯುನೈಟೆಡ್ ಕಿಂಗ್ಡಮ್ ನ 4.7% ರೊಂದಿಗೆ ಹೋಲಿಸಿದರೆ ಈ ಎರಡೂ ದೇಶಗಳಿಗಿಂತ ದ್ವಿಗುಣ ಪಾಲು ಭಾರತದ ಮಹಿಳಾ ವಾಣಿಜ್ಯ ಪೈಲಟ್ ಗಳು ಪಡೆದಿದ್ದಾರೆ. 2021ರ […]

ಯೇ ಭಾರತ್ ಕಾ ತಿರಂಗಾ ಹೈ, ಕಭೀ ಜುಕೆಗಾ ನಹೀ: ಅಮೇರಿಕಾದಲ್ಲಿ ಅಲ್ಲು ಅರ್ಜುನ್ ಡೈಲಾಗ್ ಗೆ ಭಾರೀ ಮೆಚ್ಚುಗೆ

ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ಇಂಡಿಯಾ ಡೇ ಪರೇಡ್‌ನಲ್ಲಿ ನಟ ಅಲ್ಲು ಅರ್ಜುನ್ ಅವರು ಭಾರತದ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ತಮ್ಮ ಪುಷ್ಪಾ ಡೈಲಾಗ್ ರೀತಿಯಲ್ಲಿ “ಯೇ ಭಾರತ್ ಕಾ ತಿರಂಗಾ ಹೈ, ಕಭೀ ಜುಕೆಗಾ ನಹೀ” ಎಂದಿದ್ದಾರೆ. ಇದರ ವಿಡೀಯೋ ತುಣುಕೊಂದು ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಅಲ್ಲು ಅರ್ಜುನ್ ಡೈಲಾಗ್ ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಪುಷ್ಪಾ ಖ್ಯಾತಿಯ ತೆಲುಗು ನಟ ಇತ್ತೀಚೆಗೆ ನ್ಯೂಯಾರ್ಕ್‌ನಲ್ಲಿದ್ದರು. ಅಲ್ಲಿ ಅವರು ಅಮೇರಿಕಾದಲ್ಲಿನ ಭಾರತೀಯರು ಆಯೋಜಿಸಿದ್ದ ಅತ್ಯಂತ ಪ್ರಸಿದ್ಧ ವಾರ್ಷಿಕ […]