ಭಾಗ್ಯಲಕ್ಷ್ಮಿ ಅಡಿಗರ ‘ಕ್ಯಾಲ್ಕುಲಸ್ ಎಂಡ್ ಲೀನಿಯರ್ ಆಲ್ಜಿಬ್ರಾ’ ಪುಸ್ತಕ ಅನಾವರಣ

ಉಡುಪಿ: ಶ್ರೀಮನ್ ಮಧ್ವ ಸಿದ್ಧಾಂತ ಪ್ರಬೋಧಕ ಸಂಸ್ಕೃತ ಸ್ನಾತಕ ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ ಇದರ ಸಹಯೋಗದಲ್ಲಿ ಭಾಗ್ಯಲಕ್ಷ್ಮಿ ಅಡಿಗ ಅವರು ಬರೆದಿರುವ ಗಣಿತಶಾಸ್ತ್ರಕ್ಕೆ ಸಂಬಂಧಿಸಿದ “ಕ್ಯಾಲ್ಕುಲಸ್ ಎಂಡ್ ಲೀನಿಯರ್ ಆಲ್ಜಿಬ್ರಾ” ಪುಸ್ತಕ ಬಿಡುಗಡೆ ಕಾರ್ಯಕ್ರಮವು ಕಾಲೇಜಿನ ಭೀಮ ಸಭಾಂಗಣದಲ್ಲಿ ಗುರುವಾರ ನಡೆಯಿತು. ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಎಸ್.ಎಮ್.ಎಸ್.ಪಿ ಸಭಾದ ಕಾರ್ಯದರ್ಶಿ ದೇವಾನಂದ ಉಪಾಧ್ಯಾಯ, ಎಲ್ಲಾ ಕ್ಷೇತ್ರದಲ್ಲಿ ಗಣಿತದ ಅವಶ್ಯಕತೆ ಇದ್ದು, ಗಣಿತ ಭಾಗ್ಯವನ್ನು ತರುವ ವಿದ್ಯೆಯಾಗಿದೆ ಎಂದರು. ಲೇಖಕಿ ಭಾಗ್ಯಲಕ್ಷ್ಮಿ ಅಡಿಗ ಮಾತನಾಡಿ, ಗಣಿತ ಎಂಬುವುದು […]