ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ: 2024-25 ರ ಅಂತ್ಯದ ವೇಳೆಗೆ 68 ಲಕ್ಷ ಉದ್ಯೋಗ ಸೃಜನೆ

ನವದೆಹಲಿ: ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯು ಶನಿವಾರದಂದು ತನ್ನ ಎರಡನೇ ವಾರ್ಷಿಕೋತ್ಸವವನ್ನು ಪೂರ್ಣಗೊಳಿಸಿದೆ. 2024-25ರ ಅಂತ್ಯದ ವೇಳೆಗೆ ಈ ಯೋಜನೆಯು 68 ಲಕ್ಷ ಉದ್ಯೋಗವನ್ನು ಸೃಷ್ಟಿಸಲಿದೆ ಎಂದು ಅಂದಾಜಿಸಲಾಗಿದೆ. ಮೀನುಗಾರಿಕೆ ವಲಯವು 2019-20 ರಿಂದ 2021-22 ರವರೆಗೆ 14.3 ಶೇಕಡಾದಷ್ಟು ಪ್ರಭಾವಶಾಲಿ ಬೆಳವಣಿಗೆಯನ್ನು ತೋರಿಸಿದೆ. 2021-22ರಲ್ಲಿ ಮೀನಿನ ಉತ್ಪಾದನೆಯು ಸಾರ್ವಕಾಲಿಕ ಗರಿಷ್ಠ 161.87 ಲಕ್ಷ ಟನ್‌ಗಳನ್ನು ತಲುಪಿದೆ. ಮುಖ್ಯವಾಗಿ ಸಿಗಡಿ ರಫ್ತು ಪ್ರಾಬಲ್ಯ ಹೊಂದಿರುವ ಈ ವಲಯವು 57 ಸಾವಿರದ 587 ಕೋಟಿ ರೂಪಾಯಿಗಳ ಮೊತ್ತದ […]