ವೈದ್ಯರೇ ಕೈಚೆಲ್ಲಿದರೂ ಕೈಬಿಡದ ಕೊರಗಜ್ಜ: ಉಕ್ರೇನಿನ ಅನಾರೋಗ್ಯ ಪೀಡಿತ ಮಗುವೀಗ ಸಂಪೂರ್ಣ ಸ್ವಸ್ಥ!

ಬಂಟ್ವಾಳ: ಅವಿಭಜಿತ ದ.ಕ ಜಿಲ್ಲೆಯಲ್ಲಿ ಕೊರಗಜ್ಜನ ಕಾರ್ನಿಕ ತಿಳಿಯದೆ ಇರುವವರು ವಿರಳ. ಕಳೆದು ಹೋದ ವಸ್ತುಗಳು ಮರಳಿ ಸಿಗಬೇಕಾದಲ್ಲಿ ಕೊರಗಜ್ಜನಿಗೆ ಒಂದು ಹರಕೆ ಹೇಳಿದರೆ ಸಾಕು, ಕಳೆದು ಹೋದ ವಸ್ತು ಯಾವ ಮಾಯೆಯಲ್ಲೋ ಪ್ರತ್ಯಕ್ಷ!! ಇಂತಿಪ್ಪ ಕೊರಗಜ್ಜ ಈಗ ಉಕ್ರೇನಿನ ಮಗುವಿನ ಜೀವವನ್ನೂ ಉಳಿಸಿ ಮತ್ತೊಮ್ಮೆ ಕಾರ್ನಿಕ ಮೆರೆದಿದೆ. ಪ್ರಕರಣ: ಕೆಲವು ತಿಂಗಳ ಹಿಂದೆ ಉಕ್ರೇನ್ ದೇಶದ ಪ್ರಜೆ ಆ್ಯಂಡ್ರ್ಯೂ, ಪತ್ನಿ ಎಲೆನಾ ಮತ್ತು ಮಗ ಮ್ಯಾಕ್ಸಿಂ ಭಾರತಕ್ಕೆ ಪ್ರವಾಸ ಬಂದಿದ್ದರು. ಉಕ್ರೇನ್ ದಂಪತಿ ತನ್ನ ಮಗನ […]

ರಷ್ಯಾದಿಂದ ತೈಲ ಆಮದನ್ನು ದ್ವಿಗುಣಗೊಳಿಸುವತ್ತ ಭಾರತದ ಚಿತ್ತ? ರಷ್ಯಾ ಕಂಪನಿಯಿಂದ ಹೆಚ್ಚು ತೈಲ ಖರೀದಿಸಲು ಭಾರತ ಉತ್ಸುಕ

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ಯುದ್ದ ಹಿನ್ನೆಲೆಯಲ್ಲಿ ಯೂರೋಪ್ ಮತ್ತಿತರ ಪಾಶ್ಚಾತ್ಯ ದೇಶಗಳು ಮಾಸ್ಕೋದೊಂದಿಗಿನ ವ್ಯವಹಾರವನ್ನು ತಿರಸ್ಕರಿಸಿರುವುದರಿಂದ, ಭಾರತವು ಈ ಸನ್ನಿವೇಶವನ್ನು ತನ್ನ ಅನುಕೂಲಕ್ಕೆ ಪರಿವರ್ತಿಸಲು ಉತ್ಸುಕವಾಗಿದೆ ಎನ್ನಲಾಗಿದೆ. ಭಾರತವು ತನ್ನ ರಷ್ಯಾದ ತೈಲ ಆಮದುಗಳನ್ನು ಸರ್ಕಾರಿ ಸ್ವಾಮ್ಯದ ಸಂಸ್ಕರಣಾಗಾರಗಳೊಂದಿಗೆ ದ್ವಿಗುಣಗೊಳಿಸಲು ನೋಡುತ್ತಿದ್ದು, ರಷ್ಯಾದ ರೋಸ್ನೆಫ್ಟ್ ಪಿ ಜೆ ಎಸ್ ಸಿ ಯಿಂದ ಹೆಚ್ಚು-ರಿಯಾಯಿತಿ ಸರಬರಾಜುಗಳನ್ನು ತೆಗೆದುಕೊಳ್ಳಲು ಉತ್ಸುಕವಾಗಿದೆ ಎಂದು ವರದಿಯಾಗಿದೆ. ಭಾರತದ ಸಂಸ್ಕಾರಕಗಳು ಒಟ್ಟಾಗಿ ಭಾರತಕ್ಕೆ ರಷ್ಯಾದ ಕಚ್ಚಾ ತೈಲಕ್ಕಾಗಿ ಆರು ತಿಂಗಳ ಹೊಸ ಪೂರೈಕೆ […]

ಅಖಂಡ ರಷಿಯಾಕ್ಕೆ ಮುನ್ನುಡಿ ಬರೆದರೆ ವ್ಲಾದಿಮಿರ್ ಪುತಿನ್? ರಕ್ತಪಾತವಿಲ್ಲದೆ ಉಕ್ರೇನ್ ಆಯಿತು ಮೂರು ತುಂಡು!

ನವದೆಹಲಿ: ಪಾಶ್ಚಿಮಾತ್ಯ ದೇಶಗಳು ಮತ್ತು ವಿಶ್ವದ ಮಾಧ್ಯಮಗಳು ವ್ಲಾದಿಮಿರ್ ಪುತಿನ್ ಅನ್ನು ಒಬ್ಬ ಸರ್ವಾಧಿಕಾರಿ, ನಿರ್ದಯಿ ನಾಯಕನೆಂದು ಜರೆಯುತ್ತಿರಬಹುದು. ಆತನನ್ನು ಖಳನಾಯಕನಂತೆ ಬಿಂಬಿಸುತ್ತಿರಬಹುದು. ಆದರೆ ತನ್ನ ರಾಷ್ಟ್ರದ ಅಖಂಡತೆಯ ವಿಷಯ ಬಂದಾಗ ಎಂತಹ ಕಠೋರ ನಿರ್ಧಾವನ್ನು ತೆಗೆದುಕೊಳ್ಳಲೂ ಹಿಂಜರಿಯುವುದಿಲ್ಲ, ತಾನು ಯಾರಿಗೂ ಜಗ್ಗುವುದಿಲ್ಲ ಎನ್ನುವುದನ್ನವರು ಮತ್ತೊಮ್ಮೆ ಜಗಜ್ಜಾಹೀರು ಮಾಡಿದ್ದಾರೆ. ತನ್ನ ‘ಅಖಂಡ ರಷಿಯಾ’ ನೀತಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪುತಿನ್ ಮುಂದಡಿಯಿಟ್ಟು, ಮಗ್ಗುಲ ಮುಳ್ಳಾಗಿದ್ದ ಉಕ್ರೇನ್ ಅನ್ನು ಶಸ್ತ್ರಾಸ್ತ್ರಗಳ ಸಹಾಯವಿಲ್ಲದೆಯೆ ಮೂರು ತುಂಡುಗಳಾಗಿ ವಿಭಾಗಿಸಿದ್ದಾರೆ! ರಷಿಯಾಕ್ಕೆ ಅಂಟಿಕೊಂಡಿರುವ ಪೂರ್ವ […]