ಪ್ರಧಾನ ಮಂತ್ರಿ ಉಜ್ವಲ ಯೋಜನೆ-2 ಜಾರಿ: ಬಡವರಿಗೆ ಉಚಿತ ಅಡುಗೆ, ಅನಿಲ ಸಂಪರ್ಕ 

ಉಡುಪಿ: ಅಡುಗೆ ಅನಿಲ ಸಂಪರ್ಕದಿಂದ ವಂಚಿತರಾಗಿರುವ ಬಡ ಕುಟುಂಬದವರನ್ನು ಗುರುತಿಸಿ, ಅವರಿಗೆ ಅನಿಲ ಸಂಪರ್ಕ ಒದಗಿಸಲು ಪ್ರಧಾನ ಮಂತ್ರಿ ಉಜ್ವಲ ಯೋಜನೆ-2 ಅನ್ನು ಅನುಷ್ಠಾನಗೊಳಿಸಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವ ಬಡವರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಯೋಜನೆಯ ಉಡುಪಿ ಜಿಲ್ಲಾ ನೋಡಲ್ ಅಧಿಕಾರಿ ಜುನೈದ್ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಕೇಂದ್ರ ಸರ್ಕಾರವು 2017ರಲ್ಲಿ ಆರಂಭಿಸಿರುವ ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ)ಯಲ್ಲಿ ಅಡುಗೆ ಅನಿಲ(ಎಲ್.ಪಿ.ಜಿ.) ಸಂಪರ್ಕ ಸಿಗದೇ ಇರುವ ಬಿಪಿಎಲ್ ಕುಟುಂಬಗಳನ್ನು ಗುರುತಿಸಿ ಈ ನೂತನ ಯೋಜನೆಯಲ್ಲಿ  ಸಂಪರ್ಕ ನೀಡಲಾಗುವುದು […]