ಉಜಿರೆ: ಎಸ್ ಡಿಪಿಐ ಕಾರ್ಯಕರ್ತರಿಂದ ಪಾಕ್ ಪರ ಘೋಷಣೆ

ಬೆಳ್ತಂಗಡಿ: ಇಲ್ಲಿನ ಉಜಿರೆ ಮತಎಣಿಕೆ ಕೇಂದ್ರದ ಹೊರಗಡೆ ವಿಜಯೋತ್ಸವ ಆಚರಿಸುತ್ತಿದ್ದ ಎಸ್ ಡಿಪಿಐ ಕಾರ್ಯಕರ್ತರು ಪಾಕಿಸ್ಥಾನ ಪರ ಘೋಷಣೆಗಳನ್ನು ಕೂಗಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಬಿಜೆಪಿ ಕಾರ್ಯಕರ್ತರು ತಮ್ಮ ಬೆಂಬಲಿತ ಅಭ್ಯರ್ಥಿಗಳು ವಿಜಯಿಯಾದಾಗ ಪಕ್ಷದ ಘೋಷಣೆ ಕೂಗೂತ್ತಾ, ಬಾವುಟ ಹಾರಸಿ ವಿಜಯೋತ್ಸವದಲ್ಲಿ ತೊಡಗಿದ್ದರು. ಈ ವೇಳೆ ಎಸ್ ಡಿಪಿಐ ಪಕ್ಷದ ಕಾರ್ಯಕರ್ತರು ಘೋಷಣೆಗಳನ್ನು ಕೂಗೂತ್ತಾ ಬಿಜೆಪಿ ಕಾರ್ಯಕರ್ತರ ಬಳಿ ಬಂದರು. ಎರಡೂ ಪಕ್ಷದ ಬೆಂಬಲಿಗರ ಘೋಷಣೆಗಳು ತಾರಕಕ್ಕೇರಿದಾಗ ಎಸ್ ಡಿಪಿಐ ಕಾರ್ಯಕರ್ತರು “ಪಾಕಿಸ್ಥಾನ ಪರ ಘೋಷಣೆ […]