ಹಾಲ್ ಗೆ ನುಗ್ಗಿದ ಕಾರು: ತಪ್ಪಿದ ಅನಾಹುತ

ಮಂಗಳೂರು: ಪಾರ್ಕಿಂಗ್ ಸ್ಥಳದಿಂದ ಹೊರಹೋಗಲು ಯತ್ನಿಸಿದಾಗ ನಿಯಂತ್ರಣ ತಪ್ಪಿದ ಕಾರೊಂದು ನೇರವಾಗಿ ಚರ್ಚ್ ಹಾಲ್ ಗೆ ನುಗ್ಗಿದ ಘಟನೆ ಮಂಗಳೂರಿನ ಬಿಜೈನಲ್ಲಿ ನಡೆದಿದೆ. ಅಕ್ಕಪಕ್ಕದಲ್ಲೇ ಮಕ್ಕಳು ಓಡಾಡುತ್ತಿದ್ದು, ಪಾರ್ಕಿಂಗ್ ನ ಇಳಿಜಾರಿನಿಂದ ಕಾರು ವೇಗವಾಗಿ ಬರುತ್ತಿರುವುದನ್ನು ಗಮನಿಸಿದ ಪೋಷಕರು ಹಾಲ್ ನ ಮುಂಭಾಗ ನಿಂತಿದ್ದ ಮಕ್ಕಳನ್ನು ಹಿಡಿದು ಎಳೆದಿದ್ದಾರೆ. ಇದರಿಂದ ಆಗಬಹುದಾದ ಅನಾಹುತ ತಪ್ಪಿದೆ. ಚಾಲಕನ ನಿಯಂತ್ರಣ ತಪ್ಪಿ ಬಿಜೈನ ಚರ್ಚ್ ಹಾಲ್ ನ ಹಿಂಭಾಗದಲ್ಲಿರುವ ಮಿನಿ ಹಾಲ್ ಗೆ ನುಗ್ಗಿ ಕಾರು ಸಿಲುಕಿಗೊಂಡಿದೆ. ಘಟನೆಯಿಂದ ಸಭಾಂಗಣದ […]

ಕೊಂಡಾಡಿ ಕೊರಗ ಕಾಲನಿ ಹಗರಣ: ಲೋಕಾಯುಕ್ತ ತನಿಖೆ

 ಉಡುಪಿ: ಇಲ್ಲಿನ ಕೊರಗ ಬಾಂಧವರು ಕಳೆದ ೮ ವರ್ಷಗಳಿಂದ ನಿವೇಶನಕ್ಕಾಗಿ ಅಲೆದಾಡುತ್ತಿದ್ದಾರೆ. ರಾಜ್ಯ ಸರಕಾರವೇ ವಿತರಿಸಿದ  ಹಕ್ಕುಪತ್ರಗಳಿದ್ದರೂ ಇವರಿಗೆ ನಿವೇಶನ ಸಿಕ್ಕಿಲ್ಲ. ಇವರ ಅಹವಾಲನ್ನು ಸ್ವೀಕರಿಸಿದ ರಾಜ್ಯ ಲೋಕಾಯುಕ್ತರು ಇದೀಗ ಉಡುಪಿ ಜಿಲ್ಲಾ ಗಿರಿಜನ ಯೋಜನಾ ಸಮನ್ವಯ ಅಧಿಕಾರಿಗೆ ನೋಟಿಸು ನೀಡುವ ಮೂಲಕ ಕೊಂಡಾಡಿ ಕೊರಗ ಕಾಲನಿ ಹಗರಣದ ತನಿಖೆ ಆರಂಭಿಸಿದ್ದಾರೆ. ನಿವೇಶನಕ್ಕಾಗಿ ಕಾಯುತ್ತಿದ್ದಾರೆ: ೨೦೧೦ರಲ್ಲೇ ಕೊರಗ ಸಮುದಾಯದವರಿಗಾಗಿ ಜಿಲ್ಲಾಡಳಿತದಿಂದ ಕಾಯ್ದಿರಿಸಲಾಗಿದ್ದ ಉಡುಪಿ ಜಿಲ್ಲೆಯ ಬೊಮ್ಮರಬೆಟ್ಟು ಗ್ರಾಮದ ೨೨೯ನೇ ಸರ್ವೇ ನಂಬ್ರದ ೨-೬೧ ಎಕ್ರೆ ಜಮೀನನ್ನು ನಿವೇಶನಗಳನ್ನಾಗಿ ವಿಂಗಡಿಸದೇ ಕರ್ತವ್ಯ […]

ವಿಶ್ವಾಸದ ಮನೆಯಲ್ಲಿ ಶುಶ್ರೂಷೆ ಪಡೆದ ಆರು ಮಂದಿ ಜು. 16ರಂದು ತವರಿಗೆ 

ಉಡುಪಿ: ರಸ್ತೆ ಬದಿ ಮಾನಸಿಕ ಅಸ್ವಸ್ಥರಾಗಿ ತಿರುಗಾಡುತ್ತಿದ್ದ ಹೊರ ರಾಜ್ಯ ಮತ್ತು ಜಿಲ್ಲೆಯ ಆರು ಮಂದಿ ಶಂಕರಪುರದ ವಿಶ್ವಾಸದ ಮನೆಯ ಆರೈಕೆ ಹಾಗೂ ಶುಶ್ರೂಷೆಯಿಂದ ಗುಣಮುಖರಾಗಿದ್ದು, ಜು.16ರಂದು ಇವರೆಲ್ಲರನ್ನು ಅವರ ಕುಟುಂಬಗಳಿಗೆ ಒಪ್ಪಿಸಲಾಗುತ್ತಿದೆ. 2015ರ ಡಿ.31ರಂದು ಉಡುಪಿ ಶ್ರೀಕೃಷ್ಣ ಮಠದ ಬಳಿ ತುಮಕೂರು ಕುಣಿಗಲ್ ನಿವಾಸಿ ಶೋಭಾ, 2016ರ ಮೇ 4ರಂದು ಕುಂದಾಪುರ ಶಾಸ್ತ್ರ ಸರ್ಕಲ್ ಬಳಿ ಬೆಂಗಳೂರಿನ ಸುರೇಶ್(40), ಮೇ 11ರಂದು ಕೊಲ್ಲೂರು ಕ್ರಾಸ್ ಬಳಿ ತೆಲಂಗಾಣದ ನಂಬಯ್ಯ(50), ನ.22ರಂದು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಬಳಿ […]