ಕರಾವಳಿಯಲ್ಲಿ ಕಾರ್ಗಿಲ್ ವಿಜಯ ದಿವಸ್: ಯೋಧರಿಗೆ ನಮನ

ಉಡುಪಿ/ಮಂಗಳೂರು: ಸ್ವಚ್ಛ ಭಾರತ್ ಫ್ರೆಂಡ್ಸ್ ಮತ್ತು ಜೆಸಿಐ ಉಡುಪಿ ಸಿಟಿ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಇದರ ೨೦ನೇ ವರ್ಷಾಚರಣೆ ಹಾಗೂ ಯೋಧ ನಮನ ಕಾರ್ಯಕ್ರಮವು ಜು. ೨೬ ರಂದು ಅಜ್ಜರಕಾಡು ಹುತಾತ್ಮ ಸ್ಮಾರಕದಲ್ಲಿ ನಡೆಯಿತು. ಸೈನ್ಯದಲ್ಲಿ ಸುದೀರ್ಘ ೨೪ ವರ್ಷಗಳ ಕಾಲ ಸೇವೆ ಸಲ್ಲಿಸಿ ಕಾರ್ಗಿಲ್ ಯುದ್ಧದಲ್ಲಿ ಸತತವಾಗಿ ೨೧ ದಿನಗಳ ಕಾಲ ಗಡಿಯಲ್ಲಿ ಬಂಕರ್ ನಲ್ಲಿಯೇ ಆಶ್ರಯಪಡೆದುಕೊಂಡು ಅಲ್ಲಿಂದಲೇ ಕೆಚ್ಚೆದೆಯ ಹೋರಾಟವನ್ನು ಪ್ರದರ್ಶಿಸಿದ ನಿವೃತ್ತ ಯೋಧ ಜಗದೀಶ್ ಪ್ರಭು ಹಿರಿಯಡ್ಕ ಅವರನ್ನು ಸನ್ಮಾನಿಸಲಾಯಿತು. ಅನಂತರ […]
ಬಿ.ಎಸ್. ಯಡಿಯೂರಪ್ಪ ಇಂದೇ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಹಲವು ದಿನಗಳ ರಾಜಕೀಯ ಕೋಲಹಲಗಳ ಅನಂತರ ಬಿಜೆಪಿಗೆ ಆಡಳಿತ ನಡೆಸುವ ಅವಕಾಶ ದೊರೆತಿದ್ದು, ಹೀಗಾಗಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರವೇ ರಾಜ್ಯದ ಮುಖ್ಯಮಂತ್ರಿಯಾಗಿ 4ನೇ ಬಾರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಮಾಡಲು ಅವಕಾಶ ನೀಡಲು ಮನವಿ ಮಾಡಿದ್ದಾರೆ. ತಮ್ಮದು ಸಿಂಗಲ್ ಲಾರ್ಜೆಸ್ಟ್ ಪಕ್ಷ ಎಂದು ಹಕ್ಕು ಮಂಡಿಸಿದ್ದಾರೆ. ಕೇಂದ್ರಕ್ಕೆ ತೆರಳಿದ್ದ BJP ನಿಯೋಗಕ್ಕೆ ಬಿಜೆಪಿ ಹೈ ಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಸಂಜೆ 6.15ರ ಒಳಗೆ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ […]
ಪಾರಂಪರಿಕವಾದ ಸಂಪ್ರದಾಯಿಕ ಪದ್ದತಿ ಮೀನುಗಾರಿಕೆ: ಎಂ.ಜೆ. ರೂಪ

ಮಂಗಳೂರು: ಮೀನುಗಾರಿಕೆ ಎನ್ನುವುದು ಪಾರಂಪರಿಕವಾದ ಒಂದು ಸಂಪ್ರದಾಯಿಕ ಪದ್ದತಿ. ಪ್ರತಿಯೊಬ್ಬರಿಗೂ ಸುಲಭವಾಗಿ ಸಿಗುವಂತಹ ಆಹಾರ ಮೂಲ. ಬಡ ಜನರಿಗೆ ಇದು ಶ್ರೀಮಂತ ಆಹಾರ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ ಹೇಳಿದರು. ನಗರದ ಓಷಿಯನ್ ಪರ್ಲ್ ಹೊಟೇಲಿನ ಪೆಸಿಫಿಕ್-5ರ ಸಭಾಂಗಣದಲ್ಲಿ ಮೀನುಗಾರಿಕಾ ಇಲಾಖೆ, ಕರ್ನಾಟಕ ಸರಕಾರ ಇದರ ಸಹಯೋಗದೊಂದಿಗೆ ನಡೆದ ‘ಕಡಲ ಮೀನುಗಾರಿಕೆ ಸುಧಾರಣೆ ಯೋಜನೆ’ಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು. ಕಡಲ ಮೀನುಗಾರಿಕೆ ಸುಧಾರಣೆ ಯೋಜನೆ ಎಂಬ ಕೈಪಿಡಿಯನ್ನು ಬಿಡುಗಡೆ […]
ಮಂಗಳೂರು: ಅಪಹರಣಕ್ಕೀಡಾದ ವಿದ್ಯಾರ್ಥಿ ಪತ್ತೆ

ಮಂಗಳೂರು: ಅಪಹರಣಕ್ಕೀಡಾಗಿದ್ದ ಮಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿ ಹಾರಿಸ್ ಗುರುವಾರ ಪತ್ತೆಯಾಗಿದ್ದಾನೆ. ಈತ ಜು. 22ರಂದು ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ವರ್ಕಾಡಿಯ ಕಳಿಯೂರಿನಿಂದ ಅಪಹರಣಕ್ಕೀಡಾಗಿದ್ದ. ಅಪಹರಣಕಾರರು ಹಾರಿಸ್ ನನ್ನು ಮಂಗಳೂರಿನ ಬಸ್ ನಿಲ್ದಾಣದಲ್ಲಿ ತೊರೆದು ಹೋಗಿದ್ದರು. ವಿಷ್ಯ ತಿಳಿದ ಮಂಜೇಶ್ವರ ಪೊಲೀಸರು ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ಕುಂಬಳೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಆನಂತರ ಪ್ರಕರಣದ ಕುರಿತಂತೆ ಹೆಚ್ಚಿನ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಆತನನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಕಳುಹಿಸಲಾಗಿದೆ. […]
ಮಂಗಳೂರು: ತೀವ್ರ ಜ್ವರ ಹಿನ್ನೆಲೆ ಇಬ್ಬರು ಮಕ್ಕಳು ಸಾವು

ಮಂಗಳೂರು: ತೀವ್ರ ಜ್ವರದ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಕಾಸರಗೋಡಿನಲ್ಲಿ ಸಂಭವಿಸಿದೆ. ಕಾಸರಗೋಡು ಸಮೀಪದ ಬದಿಯಡ್ಕ ಕನ್ಯಪ್ಪಾಡಿಯ ಸಿಧಾರುತ್ತಲ್ ಮುಂತಾಹ್(8) ಮತ್ತು 6 ತಿಂಗಳ ಮಗು ಸಿನಾಸ್ ಮೃತಪಟ್ಟ ಕಂದಮ್ಮಗಳು. ಕೆಲವು ದಿನಗಳಿಂದ ಈ ಇಬ್ಬರು ಪುಟಾಣಿಗಳು ತೀವ್ರ ಜ್ವರ ಪೀಡಿತರಾಗಿದ್ದರು. ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪುಟಾಣಿಗಳು ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳ ಸಾವಿನ ಹಿನ್ನೆಲೆಯಲ್ಲಿ ವೈದ್ಯಕೀಯ ತಂಡವು ಆಸ್ಪತ್ರೆಗೆ ಭೇಟಿ ನೀಡಿ ರೋಗ ಲಕ್ಷಣಗಳ ಬಗ್ಗೆ ಪರಿಶೀಲನೆ ನಡೆಸಿದೆ.