ಅ. 3ರಂದು ಸಬ್-ಇನ್ಸ್ಪೆಕ್ಟರ್ ಲಿಖಿತ ಪರೀಕ್ಷೆ

ಉಡುಪಿ: ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಸಿವಿಲ್) ಪುರುಷ ಮತ್ತು ಮಹಿಳಾ (ಎನ್‌ಕೆಕೆ & ಕೆಕೆ) ಹಾಗೂ ಸೇವಾನಿರತರನ್ನೊಳಗೊಂಡ 545 ಹುದ್ದೆಗಳಿಗೆ ನಡೆಸಲಾದ ಇಟಿ/ಪಿಎಸ್‌ಟಿ ಪರೀಕ್ಷೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಕ್ಟೋಬರ್ 3 ರಂದು ಲಿಖಿತ ಪರೀಕ್ಷೆ ನಡೆಸಲಾಗುವುದು. ಪತ್ರಿಕೆ-1 ಮತ್ತು 2ನ್ನು ಕ್ರಮವಾಗಿ ಬೆ. 11 ರಿಂದ 12.30 ಮತ್ತು 3 ರಿಂದ 4.30 ರವರೆಗೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ದಾವಣಗೆರೆ ಹಾಗೂ ತುಮಕೂರು ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ಲಿಖಿತ ಪರೀಕ್ಷೆಯ ಕರೆ ಪತ್ರವನ್ನು ಅಧಿಕೃತ ವೆಬ್‌ಸೈಟ್ www.recruitment.ksp.gov.in ನಿಂದ […]
ನುಗ್ಗೆಕಾಯಿಯ ಈ ದಾಲ್ ತಿಂದ್ರೆ ನಿಮ್ಮಲ್ಲಿ ಜೋಶ್ ಬರುತ್ತೆ!

ನುಗ್ಗೆಕಾಯಿ ಆರೋಗ್ಯಕ್ಕೆ ಹಿತಕರವಾದ ಆಹಾರ.ನುಗ್ಗೆಕಾಯಿಯ ಎಲ್ಲಾ ಖಾದ್ಯಗಳು ಚೆಂದ. ಆದರೆ ನುಗ್ಗೇಕಾಯಿ ಯ ದಾಲ್ ತಿಂದರೆ ನಿಮ್ಮಲ್ಲಿ ಬೇರೆಯೇ ಜೋಶ್ ಬರುತ್ತೆ.ಊಟಕ್ಕೆ ಕಿಕ್ಕೇರಿಸುವ ಈ ದಾಲ್ ಅನ್ನು ಮನೆಲೇ ಒಮ್ಮೆ ಟ್ರೈ ಮಾಡಿ ಬೇಕಾಗುವ ಪದಾರ್ಥಗಳು ನುಗ್ಗೇಕಾಯಿ- 4 ತೊಗರಿಬೇಳೆ – 1 ಚಮಚ ಕಡಲೇಬೇಳೆ- 1 ಚಮಚ ಮೈಸೂರ್ ಬೇಳೆ- 1 ಚಮಚ ಹೆಸರುಬೇಳೆ- 1 ಚಮಚ ಟೊಮೆಟೋ ಪ್ಯೂರಿ- 1 ಸಣ್ಣ ಬಟ್ಟಲು ಈರುಳ್ಳಿ- 1 ಅಚ್ಚಖಾರದ ಪುಡಿ- 1 ಚಮಚ ಕೊತ್ತಂಬರಿ ಸೊಪ್ಪು-ಸ್ವಲ್ಪ […]
ಸಂಕಷ್ಟದಲ್ಲಿರುವ ಕ್ರೀಡಾಪಟುಗಳಿಗೆ ಮಾಸಾಶನ: ಅರ್ಜಿ ಆಹ್ವಾನ

ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖಾ ವತಿಯಿಂದ 2021-22ನೇ ಸಾಲಿನಲ್ಲಿ ವಿವಿಧ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟç ಮಟ್ಟವನ್ನು ಪ್ರತಿನಿಧಿಸಿದ ಕರ್ನಾಟಕದ 50 ವರ್ಷ ಮೇಲ್ಪಟ್ಟ, ವಾರ್ಷಿಕ ಆದಾಯ ಗರಿಷ್ಠ 20 ಸಾವಿರ ರೂ ಮೀರಿರದ ಸಂಕಷ್ಟದಲ್ಲಿರುವ ಮಾಜಿ ಕ್ರೀಡಾಪಟುಗಳಿಗೆ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ತಮ್ಮ ಜನನ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಹಾಗೂ ಕ್ರೀಡಾ ಪ್ರಮಾಣ ಪತ್ರದೊಂದಿಗೆ ಪ್ರಸ್ತಾವನೆಯನ್ನು ಸೆಪ್ಟೆಂಬರ್ 30ರೊಳಗಾಗಿ ಉಡುಪಿ ಜಿಲ್ಲಾ ಕ್ರೀಡಾಂಗಣ ಕಛೇರಿಗೆ ಸಲ್ಲಿಸಬಹುದಾಗಿದ್ದು, ಹಿರಿಯ […]
ಸೆ.4-5ರಂದು ಉಡುಪಿಯಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ

ಉಡುಪಿ: ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ರಾಜ್ಯಮಟ್ಟದ ಹಿರಿಯರ ಮತ್ತು ಕಿರಿಯರ 23ರ ವಯೋಮಿತಿಯ ಪುರುಷ ಮತ್ತು ಮಹಿಳೆಯರ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಸೆ.4 ಮತ್ತು 5ರಂದು ಅಜ್ಜರಕಾಡು ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಕುರಿತು ಕ್ರೀಡಾ ಕೂಟದ ಸಂಘಟನ ಸಮಿತಿ ಅಧ್ಯಕ್ಷ, ಶಾಸಕ ಕೆ.ರಘುಪತಿ ಭಟ್ ಅವರು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಕ್ರೀಡಾ ಇಲಾಖೆ, ಮಾಹೆ, ನಿಟ್ಟೆ ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ ಈ ಕ್ರೀಡಾಕೂಟ ನಡೆಯಲಿದ್ದು, ಸುಮಾರು 400 ಮಂದಿ ಕ್ರೀಡಾಪಟುಗಳು, 75 […]
ಜ್ಞಾನಸುಧಾ ಕಾಲೇಜಿನಲ್ಲಿ ಜನ್ಮಶತಾಬ್ದಿ ನುಡಿನಮನ ಕಾರ್ಯಕ್ರಮ

ಕಾರ್ಕಳ: ಶಿಕ್ಷಣ ನಮಗೆ ಜ್ಞಾನ, ಧೈರ್ಯ, ಮಾರ್ಗದರ್ಶನ, ನೌಕರಿಯನ್ನು ನೀಡುತ್ತದೆ. ಆದರೆ ಇಂದು ವಿದ್ಯಾರ್ಥಿಗಳು ತಮ್ಮ ಪೋಷಕ, ಶಿಕ್ಷಕರನ್ನು ಗೌರವಿಸದಿರುವುದು ವಿಷಾದನೀಯ ಸಂಗತಿ ಎಂದು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ನುಡಿದರು. ಅವರು ಗಣಿತನಗರದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ನಡೆದ, ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಸಂಸ್ಥಾಪಕ ಗೋಪಶೆಟ್ಟಿಯವರ ಜನ್ಮಶತಾಬ್ದಿ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೀವನ ಮೌಲ್ಯಗಳನ್ನು ಸಮಗ್ರವಾಗಿ ಅಳವಡಿಸಿಕೊಂಡು ಜೀವನದ ಸಮಗ್ರ ಅಭಿವೃದ್ದಿಯ ಕನಸು ಕಾಣಲು, ಜ್ಞಾನಸುಧಾ […]