ಕೆಮ್ಮು-ಕಫ, ಜೀರ್ಣಶಕ್ತಿ ಸಮಸ್ಯೆ ಇದ್ಯಾ? ಹಾಗಿದ್ರೆ ಈ ಕಷಾಯ ಕುಡೀರಿ ಎಲ್ಲಾ ಓಡೋಗುತ್ತೆ!

«ಸಿಂಥಿಯಾ ಮೆಲ್ವಿನ್  ಭಾರತೀಯ ಸಂಪ್ರದಾಯದಲ್ಲಿ ವೀಳ್ಯದೆಲೆಗೆ ಹೆಚ್ಚಿನ ಮಹತ್ವವಿದೆ. ವೀಳ್ಯದೆಲೆ ಭಾರತೀಯ, ಅದರಲ್ಲೂ ಕರಾವಳಿ ಕರ್ನಾಟಕದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಎಲ್ಲಾ ಶುಭಕಾರ್ಯಗಳಿಗೂ ವೀಳ್ಯದೆಲೆ ಬೇಕೇ ಬೇಕು. ವೀಳ್ಯದ ಜೊತೆ ಅಡಿಕೆ ಮತ್ತು ಸುಣ್ಣವನ್ನು ಸೇರಿಸಿ ತಿನ್ನುವುದನ್ನು ನೋಡಿದ್ದೇನೆ. ಆದರೆ ವೀಳ್ಯದೆಲೆಯ ಕಷಾಯವನ್ನು ಮಾಡಬಹುದು ಎನ್ನುವುದು ಕೇಳಿದ್ದೀರಾ? ಹೌದು. ವೀಳ್ಯದೆಲೆಯ ಕಷಾಯವನ್ನು ಮಾಡಿ ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಲಾಭಗಳಿದೆ. ಕಷಾಯ ಮಾಡುವ ರೀತಿ: ಒಂದು ಲೋಟ ಕುದಿಯುತ್ತಿರುವ ನೀರಿಗೆ ಒಂದು ವೀಳ್ಯದೆಲೆಯನ್ನು ಚೂರು-ಚೂರು ಮಾಡಿ ಹಾಕಿ […]

ಶೃಂಗೇರಿಯ ಅಪ್ರಾಪ್ತ ಬಾಲಕಿಯ ಮೇಲೆ ಬಲಾತ್ಕಾರ, ಖಂಡನೀಯ: ಶೋಭಾ ಕರಂದ್ಲಾಜೆ

ಉಡುಪಿ: ಶೃಂಗೇರಿಯ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಬಲಾತ್ಕಾರ, ಅತ್ಯಾಚಾರ ಅತ್ಯಂತ ಖಂಡನೀಯವಾದುದು. ಈ ಘಟನೆ ಬೆಳಕಿಗೆ ಬಂದ ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಂಪರ್ಕ ಮಾಡಿ ತಪ್ಪಿತಸ್ತರನ್ನು ಬಂಧಿಸಲು, ಮತ್ತು ಬಾಲಕಿಗೆ ಸೂಕ್ತ ರಕ್ಷಣೆ ಕೊಡವಂತೆ ಸೂಚಿಸಿರುತ್ತೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಬಾಲಕಿಯನ್ನು ಸಾಂತ್ವನ ಕೇಂದ್ರಕ್ಕೆ ಸೇರಿಸಿದ ತಕ್ಷಣದಲ್ಲಿಯೇ ತಪ್ಪಿತಸ್ತರನ್ನು ಪೊಲೀಸರು ಬಂಧಿಸಿರುತ್ತಾರೆ. ಬಾಲಕಿಯನ್ನು ಕರೆತಂದು ದುರುಪಯೋಗ ಮಾಡಿದ ಅವಳ ಚಿಕ್ಕಮ್ಮ ಎಂದು ಕರೆಯಲ್ಪಡುವ ಗೀತಳನ್ನು ಕೂಡ ಬಂಧಿಸಿ ವಿಚಾರಿಸಲಾಗುತ್ತಿದೆ. SSLC ಓದುವ […]

ಮೊಸರಲ್ಲಿದೆ ಆರೋಗ್ಯದ ನೂರು ಗುಟ್ಟು: ಆ ಗುಟ್ಟು ಈ ಡಾಕ್ಟರ್ ರಟ್ಟು ಮಾಡಿದ್ದಾರೆ ನೋಡಿ

ಮೊಸರು ಅಂದ್ರೆ ಬಹಳ ಮಂದಿಗೆ ಬೇಕೇ ಬೇಕು. ಮೊಸರಿಲ್ಲದೇ ಊಟ ಸಾಧ್ಯವಿಲ್ಲ ಎಂದು ಹೇಳುವವರಿದ್ದಾರೆ. ಆದರೆ ಮೊಸರು ತಿಂದ್ರೆ ಏನಾಗುತ್ತೆ? ಯಾರಿಗೆ ಬೇಕು ಮೊಸರು ಎಂದು ನಿರ್ಲಕ್ಷ್ಯ  ಮಾಡುವವರು ಇದ್ದಾರೆ. ದಿನಕ್ಕೆ ಒಂದು ಕಪ್ ಮೊಸರು ಕುಡಿದರೂ ಸಾಕು ಅದರಿಂದ ನಮ್ಮ ಆರೋಗ್ಯದ ಮೇಲಾಗುವ ಒಳ್ಳೆಯ ಪ್ರಭಾವಗಳೇನು ಎನ್ನುವುದರ ಕುರಿತು ಕಾರ್ಕಳದ ಆಯುರ್ವೇದ ವೈದ್ಯೆ ಡಾ.ಹರ್ಷಾ ಕಾಮತ್ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಮೊಸರು ತಿಂದ್ರೆ ದಪ್ಪವಾಗಬಹುದಾ?ಮೊಸರು ಉಷ್ಣವೇ? ಯಾವ ದೈಹಿಕ ಸಮಸ್ಯೆಗೆಲ್ಲಾ ಮೊಸರು ಒಳ್ಳೆಯದು? ಇತ್ಯಾದಿಗಳ ಬಗ್ಗೆ […]

ಇವರ ಬಣ್ಣದ ಲೋಕ ಜಗಮಗ, ಇವರೇ ಕಲಾಪ್ರಪಂಚದ ಯುವ ಪಯಣಿಗ:ಬಣ್ಣದ ರಂಗಿನ ಹುಡುಗ “ಆಕಾಂಕ್ಷ್”

ಇದು ಉಡುಪಿ XPRESS “ಬಣ್ಣದ ಕನಸುಗಾರರು” ಸರಣಿಯ  7ನೇ ಕಂತು. ಈ ಸರಣಿಯಲ್ಲಿ  ನಮ್ಮ ನಡುವಿನ ಯುವ ಕಲಾವಿದರ ಬಗ್ಗೆ ಗಣಪತಿ ದಿವಾಣ ಬರೆಯುತ್ತಾರೆ. ಇಲ್ಲಿ ಬರುವ ಕಲಾವಿದರು  ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ಈ ಸಂಚಿಕೆಯಲ್ಲಿ ಉಡುಪಿಯ ಬೈಲೂರಿನ ಕಲಾಜಗತ್ತಿನ  ಯುವ ಪಯಣಿಗ ಆಕಾಂಕ್ಷ್ ಅವರ ಕತೆ. ಮನೆಯೇ ಸಣ್ಣ ರಂಗಕೇಂದ್ರವಾಗಿದ್ದಾಗ ಕಲೆಯಲ್ಲಿನ ಆಸಕ್ತಿ, ಸಣ್ಣ ಪುಟ್ಟ ತಿಳುವಳಿಕೆ, ಕಲಿಕೆ ಆಗುವುದು ಸಹಜ ಎನ್ನಬಹುದು. […]

ಸರಕಾರ-ಸಂಘ ಸಂಸ್ಥೆಯ ಸಹಕಾರದಿಂದ ಅಂಗನವಾಡಿಯ ಅಭಿವೃದ್ಧಿ: ಮಂಜುನಾಥ್ 

ಉಡುಪಿ: ಸರ್ಕಾರ ನೀಡುವ ಸೌಲಭ್ಯದ ಜತೆಗೆ ಸಂಘ ಸಂಸ್ಥೆಗಳು ಸಹ ಸಹಕಾರ ನೀಡಿದಲ್ಲಿ ಅಂಗನವಾಡಿ‌ ಕೇಂದ್ರಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಬಹುದು ಎಂದು ನಗರಸಭಾ ಸದಸ್ಯ ಮಂಜುನಾಥ್‌ ಮಣಿಪಾಲ ಹೇಳಿದರು. ಬಾಲವಿಕಾಸ ಸಮಿತಿ, ರೋಟರಿ ಕ್ಲಬ್‌ ಉಡುಪಿ ರಾಯಲ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಣಿಪಾಲ ಕಾಲೇಜ್‌ ಆಫ್‌ ನರ್ಸಿಂಗ್‌, ಸಹಕಾರ ಭಾರತಿ ಸಹಯೋಗದಲ್ಲಿ ಮಣಿಪಾಲ ಈಶ್ವರನಗರ ವಾರ್ಡ್‌ನ ಆದರ್ಶ ನಗರ-ದ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ ಸ್ತನ್ಯಪಾನ ಮತ್ತು ಪೋಷಕಾಂಶ ಅಭಿಯಾನ ಕಾರ್ಯಾಗಾರದಲ್ಲಿ ಮಾತನಾಡಿದರು. ಅಂಗನವಾಡಿಯಿಂದಲೇ […]