ಯುಗಾದಿಯ ಈ ಹರುಷದ ಹಸಿರಲ್ಲಿ ಇನ್ನಷ್ಟು ಬೆಳಗೋಣ ಬನ್ನಿ: ಯುಗಾದಿ ಹಬ್ಬಕ್ಕೊಂದು ಅಕ್ಷರ ತೋರಣ

ಆಚೆಯ ತೋಟದಲ್ಲೆಲ್ಲೋ ಮಾವಿನ ಮಿಡಿ ಉದುರಿ ಚಂದದ ಸದ್ದಾದಾಗ, ಪುಟ್ಟ ಪುಟ್ಟ ಕಂಗಳಲ್ಲಿ ಪರೀಕ್ಷೆಯ ಬಿಸಿಯೆಲ್ಲಾ ಕಳೆದು ರಜೆ ಅನ್ನೋ ಐಸ್‌ ಕ್ಯಾಂಡಿ ನಗು ಮೂಡೋವಾಗ, ಅದಕ್ಕಿಂತಲೂ ಹೆಚ್ಚಾಗಿ ತೋಟದ ತುಂಬೆಲ್ಲಾ ಬಣ್ಣ ಬಣ್ಣದ ಹೂವುಗಳು ತೊನೆದಾಡುವಾಗ, ಹೋ ಹೋ ಯುಗಾದಿ ಇಷ್ಟು ಬೇಗ ಬಂದೇ ಬಿಡ್ತಾ ಅನ್ನಿಸಿ ಕಣ್ಣೂ ಹಬ್ಬವಾಗಿ ಬಿಡುತ್ತದೆ. ಯುಗಾದಿ ಬರುವ ಈ  ತಿಂಗಳು ಅಂದರೆ ಪೆಪ್ಪರ್ ಮಿಂಟಿಗಿಂತಲೂ ಜಾಸ್ತಿ ರುಚಿ, ಅದಮ್ಯ ಉತ್ಸಾಹ ಅಮಿತಾನಂದದ ಚಿಗುರು ಈ ಯುಗಾದಿ. ಇಲ್ಲಿನ ಒಂದೊಂದು […]