ಯಾವ ಬಿರುದು, ಸಮ್ಮಾನವನ್ನೂ ಬಯಸದೆ ಶೈಕ್ಷಣಿಕ ಕ್ರಾಂತಿ ಮಾಡ್ತಿದ್ದಾರೆ ಉಡುಪಿಯ ಡಾ. ಮಹಾಬಲೇಶ್ವರ ರಾವ್

ಐದು ಕೃತಿಗಳಿಗೆ ಐದು ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಡಾ. ಎ.ಎಸ್. ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿನಿಧಿ ಪುರಸ್ಕಾರ (ಇದೊಂದು ದಾಖಲೆ. ಯಾರಿಗೂ ಹೀಗೆ ಕಳೆದ ಏಳೆಂಟು ವರ್ಷಗಳಲ್ಲಿ ಕಸಾಪದ ದತ್ತಿನಿಧಿ ಬಹುಮಾನ ಬಂದಿಲ್ಲ), ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಟ್ರಸ್ಟಿನ ಜೀವಮಾನ ಸಾಧನೆ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ, ಡಾ.ಹಿರೇಮಲ್ಲೂರು ಈಶ್ವರನ್ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ, ರಾಜ್ಯಮಟ್ಟದ ಉಪಾಧ್ಯಾಯ ಸಮ್ಮಾನ್ ಗೌರವ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಡಾ.ಹಾ.ಮಾ.ನಾ. ದತ್ತಿನಿಧಿ ಪುರಸ್ಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪುಸ್ತಕ ಸೊಗಸು ಬಹುಮಾನ, […]