ಉಡುಪಿ: ಮತಗಟ್ಟೆಯಲ್ಲಿ ಮತದಾರರಿಗೆ ಮಾಹಿತಿ ನೀಡುವ ಪೋಸ್ಟರ್ ಬಿಡುಗಡೆ

ಉಡುಪಿ: ಜಿಲ್ಲೆಯಲ್ಲಿ ಏಪ್ರಿಲ್ 18 ರಂದು ನಡೆಯುವ ಚುನಾವಣೆಯಲ್ಲಿ, ಮತದಾರರಿಗೆ ಮತಗಟ್ಟೆಯ ಕುರಿತು ಮಾಹಿತಿ ನೀಡಲು ವಿವಿಧ ಬಗೆಯ ಪೋಸ್ಟರ್ ಗಳನ್ನು ಚುನಾವಣಾ ಆಯೋಗ ಬಿಡುಗಡೆಗೊಳಿಸಿದೆ. ಮತಗಟ್ಟೆಯಲ್ಲಿ ವಿವಿಧ ಅಧಿಕಾರಿಗಳು ನಿರ್ವಹಿಸುವ ಕರ್ತವ್ಯಗಳ ವಿವರದ ಪೋಸ್ಟರ್ ನೀಡಲಾಗಿದ್ದು, ಇದರಿಂದ ಮತದಾರರು ಮತಗಟ್ಟೆಯಲ್ಲಿ ಯಾವ ಅಧಿಕಾರಿಗಳ ಬಳಿ ತೆರಳಬೇಕು , ಏನು ಮಾಡಬೇಕು  ಮುಂತಾದ ಅನವಶ್ಯಕ ಗೊಂದಲಕ್ಕೆ ಒಳಗಾಗುವುದನ್ನು ತಪ್ಪಿಸಬಹುದಾಗಿದೆ. ಮತದಾನ ಕೇಂದ್ರದಲ್ಲಿ ಯಾವ ಗುರುತಿನ ದಾಖಲೆ ತೋರಿಸಿ ಮತದಾನ ಮಾಡಬಹುದು  ಮಾಹಿತಿಯಿದ್ದು, ಮತದಾರರ ಪೋಟೋ ಸ್ಲಿಪ್ ಮಾಹಿತಿಗಾಗಿಯೇ […]