ಕುಂದಾಪುರ:ಟಿಪ್ಪರ್‌ನೊಳಗಿದ್ದ ಕಲ್ಲುಬಂಡೆ ರಸ್ತೆಗೆ: ತಪ್ಪಿತು ಭಾರೀ ದುರಂತ!

ಕುಂದಾಪುರ: ಬೃಹತ್ ಗಾತ್ರದ ಕಲ್ಲುಬಂಡೆಗಳನ್ನು ಹೊತ್ತು ಸಾಗುತ್ತಿದ್ದ ಟಿಪ್ಪರ್‌ನಿಂದ ಕಲ್ಲುಗಳು ರಸ್ತೆ ಮಧ್ಯೆ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೆ ತೊಡಕುಂಟಾದ ಘಟನೆ ಹೆಮ್ಮಾಡಿಯ ಲಕ್ಷ್ಮೀ ಹೊಟೇಲ್ ಎದುರುಗಡೆಯ ರಾಷ್ಟ್ರೀಯ ಹೆದ್ದಾರಿ-೬೬ ರಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಇಲ್ಲಿನ ಸಮುದ್ರತೀರದಲ್ಲಿ ಕಡಲ್ಕೊರೆತ ತಡೆಗಾಗಿ ಬಂಡೆಕಲ್ಲುಗಳನ್ನು ಹಾಸುವ ಕಾಮಗಾರಿ ನಡೆಯುತ್ತಿದ್ದು ಕಡಲತೀರಕ್ಕೆ ಬಂಡೆಕಲ್ಲುಗಳನ್ನು ಸಾಗಾಟ ಮಾಡುವ ವೇಳೆಯಲ್ಲಿ ಈ ಅವಘಡ ನಡೆದಿದೆ. ತಪ್ಪಿದ ಭಾರೀ ಅನಾಹುತ: ಕಡಲ್ಕೊರೆತ ತಡೆಗಾಗಿ ದೊಡ್ಡ ಟಿಪ್ಪರ್ ವಾಹನಗಳಲ್ಲಿ ಬಂಡೆಕಲ್ಲುಗಳನ್ನು ಸಾಗಿಸುತ್ತಿದ್ದು, ಟಿಪ್ಪರ್ ಹಿಂಬದಿಯ […]