ಯಕ್ಷಗಾನ ಸ್ಪರ್ಧೆಯಿಂದ ಕಲೆಯ ಬೆಳವಣಿಗೆ:ರಘುಪತಿ ಭಟ್

 ಉಡುಪಿ: ವಕೀಲರ ಸಂಘದ ವತಿಯಿಂದ ಅಜ್ಜರಕಾಡು ಪುರಭವನದಲ್ಲಿ ನಡೆದ ರಾಜ್ಯ ಮಟ್ಟದ ವಕೀಲರ ಯಕ್ಷಗಾನ ಸ್ಪರ್ಧೆ “ಯಕ್ಷ ಕಲಾ ವೈಭವ – 2019” ಕಾರ್ಯಕ್ರಮ ಮಂಗಳವಾರ ಜರಗಿತು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಶಾಸಕ ಕೆ ರಘುಪತಿ ಭಟ್ , ಈ ಯಕ್ಷಗಾನ ಸ್ಪರ್ಧೆ ನಿಜಕ್ಕೂ ಒಂದು ಅದ್ಭುತ ಕೆಲಸ, ಈ ಅಕಾಡಮಿ ಮೂಲಕ ಅದೆಷ್ಟೋ ಮಕ್ಕಳು ಯಕ್ಷಗಾನದ ಜೊತೆಗೆ ವಿದ್ಯಾಭ್ಯಾಸ ಕೂಡ ಮಾಡುವಂತಾಗಿದೆ, ಅದರ ಪರಿಣಾಮವಾಗಿ ಇಂದು ಈ ವೇದಿಕೆಯಲ್ಲಿ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವಂತಾಗಿದೆ ಎಂದರು. […]