ಯಕ್ಷಗಾನ ಸ್ಪರ್ಧೆಯಿಂದ ಕಲೆಯ ಬೆಳವಣಿಗೆ:ರಘುಪತಿ ಭಟ್

 ಉಡುಪಿ: ವಕೀಲರ ಸಂಘದ ವತಿಯಿಂದ ಅಜ್ಜರಕಾಡು ಪುರಭವನದಲ್ಲಿ ನಡೆದ ರಾಜ್ಯ ಮಟ್ಟದ ವಕೀಲರ ಯಕ್ಷಗಾನ ಸ್ಪರ್ಧೆ “ಯಕ್ಷ ಕಲಾ ವೈಭವ – 2019” ಕಾರ್ಯಕ್ರಮ ಮಂಗಳವಾರ ಜರಗಿತು.
 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಶಾಸಕ ಕೆ ರಘುಪತಿ ಭಟ್ , ಈ ಯಕ್ಷಗಾನ ಸ್ಪರ್ಧೆ ನಿಜಕ್ಕೂ ಒಂದು ಅದ್ಭುತ ಕೆಲಸ, ಈ ಅಕಾಡಮಿ ಮೂಲಕ ಅದೆಷ್ಟೋ ಮಕ್ಕಳು ಯಕ್ಷಗಾನದ ಜೊತೆಗೆ ವಿದ್ಯಾಭ್ಯಾಸ ಕೂಡ ಮಾಡುವಂತಾಗಿದೆ, ಅದರ ಪರಿಣಾಮವಾಗಿ ಇಂದು ಈ ವೇದಿಕೆಯಲ್ಲಿ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವಂತಾಗಿದೆ ಎಂದರು. ಅಷ್ಟೇ ಅಲ್ಲದೇ ಇಂತಹ ಕಾರ್ಯಕ್ರಮಗಳನ್ನು ವಕೀಲರು ನಡೆಸುವುದರಿಂದ ಮಕ್ಕಳಿಗೆ ಯಾವ ರೀತಿ ಉಪಯೋಗವಾಗುತ್ತದೆಯೋ ಅದರ ಜೊತೆಗೆ ವಕೀಲರಿಗೂ ಉಪಯೋಗವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾದ ಪೆರ್ಡೂರು ಮೇಳದ ವ್ಯವಸ್ಥಾಪಕರಾದ  ಕರುಣಾಕರ ಶೆಟ್ಟಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟ ಪೂರ್ವ ಸಂಚಾಲಕರಾದ  ಪಿ ಕಿಶನ್ ಹೆಗ್ಡೆ, ಮಣಿಪಾಲ ಎಂ.ಐ‌.ಟಿ ಉಪನ್ಯಾಸಕರಾದ  ಎಸ್ ವಿ ಉದಯ್ ಕುಮಾರ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.*