ಸಂಸದೆ, ಶಾಸಕರು ನಮ್ಮೂರಿಗೆ ಏನೂ ಮಾಡಿಲ್ಲ, ಇವರ ಓಟಿನ ಭಿಕ್ಷೆಗೆ ನಮ್ಮದು ಬಹಿಷ್ಕಾರದ ಶಿಕ್ಷೆ: ನಾಡ್ಪಾಲು, ಮೇಗದ್ದೆ, ಕೂಡ್ಲು, ಅಜ್ಜೊಳ್ಳಿ ಪ್ರದೇಶದಲ್ಲಿ ಮತದಾನ ಬಹಿಷ್ಕಾರ

ಹೆಬ್ರಿ: ನಮ್ಮೂರಲ್ಲಿ ಅಭಿವೃದ್ದಿಯೇ ಆಗಿಲ್ಲ. ಮೂಲಭೂತ ಸೌಕರ್ಯಗಳೇ ಇಲ್ಲ ಇಲ್ಲಿ , ನಾವ್ಯಾಕ್ರೀ ಓಟ್ ಹಾಕ್ಬೇಕು? ಹೀಗೆಂದು ಜನಪ್ರತಿನಿಧಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವುದು, ನಾಡ್ಪಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗದ್ದೆ, ಕೂಡ್ಲು, ಅಜ್ಜೊಳ್ಳಿ ಪ್ರದೇಶದ ಜನರು. ಹೌದು, ಈ ಪ್ರದೇಶಗಳಲ್ಲಿ ರಸ್ತೆ, ಬಸ್ಸಿನ ವ್ಯವಸ್ಥೆ, ಶಾಲೆ, ದೂರವಾಣಿ ಸಂಪರ್ಕ, ತುರ್ತು ವೈದ್ಯಕೀಯ ಸೇವೆ ಒಳಗೊಂಡಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆಯಿಲ್ಲ. ಹಾಗಾಗಿ ಇಲ್ಲಿನ ಜನರು ಬೇಸತ್ತಿದ್ದಾರೆ. ನಮ್ಮ ಪ್ರದೇಶ ಅಭಿವೃದ್ಧಿಯನ್ನೇ ಕಾಣದ ಮೇಲೆ ಯಾವ ಪುರುಷಾರ್ಥಕ್ಕೆ ನಾವು ಓಟ್ […]