ಕುಂದಾಪುರ: ಸುಖಾಸುಮ್ಮನೆ ರಸ್ತೆಗೆ ಬಂದವರ 41 ದ್ವಿಚಕ್ರ ವಾಹನ, 5 ಕಾರುಗಳು ವಶಕ್ಕೆ:

ಕುಂದಾಪುರ: ಕೊರೋನಾ ತಡೆಗಟ್ಟುವ ಹಿನ್ನೆಲೆ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದರೂ ಕೂಡ ಜನರು ಸುಖಾಸುಮ್ಮನೆ ರಸ್ತೆಗಿಳಿಯುವುದು ನಿಂತಿಲ್ಲ. ಇದೀಗ ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ನೋಟಿಸ್ ನೀಡುವ ಪ್ರಕ್ರಿಯೆ ನಡೆಸುತ್ತಿದ್ದಾರೆ. ಕುಂದಾಪುರ ಪೊಲೀಸ್ ಉಪವಿಭಾಗದ ಎಲ್ಲಾ ಠಾಣೆಗಳಲ್ಲೂ ಪೊಲೀಸರು ವಾಹನ ವಶಕ್ಕೆ ಪಡೆಯುವ ಕಾರ್ಯ ನಡೆಸುತ್ತಿದ್ದಾರೆ. ಕುಂದಾಪುರ ನಗರ ಠಾಣೆಯಲ್ಲಿ ಪಿಎಸ್‌ಐ ಹರೀಶ್ ಆರ್. ನಾಯ್ಕ್ ನೇತೃತ್ವದ ತಂಡ ಕಳೆದ ಮೂರು ದಿನಗಳಿಂದ ಠಾಣಾ ವ್ಯಾಪ್ತಿಯ ವಿವಿದೆಡೆ ಕಾರ್ಯಾಚರಣೆ ನಡೆಸುತ್ತಿದ್ದು ಒಟ್ಟು ೧೩ ದ್ವಿಚಕ್ರ […]