ಇಷ್ಟು ಮಾಡಿದ್ರೆ  ಮಳೆಗಾಲದಲ್ಲಿ ಆರೋಗ್ಯದ ಸಮಸ್ಯೆ ಹತ್ತಿರ ಸುಳಿಯಲ್ಲ: ಇಲ್ಲಿದೆ ನೋಡಿ ಡಾಕ್ಟರ್ ಹೇಳಿದ ಸಿಂಪಲ್ ಟಿಪ್ಸ್

ಮಳೆಗಾಲ ಬಂತೆಂದರೆ ಎಲ್ಲರಿಗೂ ಸಂಭ್ರಮ. ಎಲ್ಲೆಡೆ ಕಂಗೊಳಿಸುವ ಹಸಿರು, ಶೀತ ಹವಾಮಾನವಿರುವ ಖುಷಿ. ಆದರೆ ಮಳೆಗಾಲದಲ್ಲಿ ನಮ್ಮ ಆರೋಗ್ಯದ ಕುರಿತು ಕೆಲವೊಂದು ಕಾಳಜಿ ವಹಿಸದಿದ್ದರೆ ಆ ಖುಷಿಯೇ ಮಾಯವಾಗಬಹುದು. ಅಂದ ಹಾಗೆ ಆಯುರ್ವೇದದಲ್ಲಿ  ವರ್ಷ ಋತುವಿನಲ್ಲಿ ಪಾಲಿಸಬೇಕಾದ ಹಲವು ನಿಯಮಗಳ ಉಲ್ಲೇಖವಿದೆ. ನೀವಿದ್ದನ್ನು ಪಾಲಿಸಿದರೆ ಈ ಮಳೆಗಾಲವನ್ನು ಖುಷಿಯಿಂದ ಎಂಜಾಯ್ ಮಾಡಬಹುದು. ಮಳೆಗಾಲದಲ್ಲಿ ಏನ್ ಸಮಸ್ಯೆ ಕಾಡುತ್ತೆ? ಈ ಋತುವಿನಲ್ಲಿ ವಾತಾ ಪ್ರಕೋಪ ದೇಹ ಬಲ ಹಾಗೂ ಜೀರ್ಣಶಕ್ತಿ  ಕ್ಷೀಣಿಸುತ್ತದೆ. ಕೆಮ್ಮು, ಶೀತ, ಜ್ವರ, ಮಲೇರಿಯಾ, ಆರ್ಥ್ರೈಟಿಸ್, […]