ಇಷ್ಟು ಮಾಡಿದ್ರೆ  ಮಳೆಗಾಲದಲ್ಲಿ ಆರೋಗ್ಯದ ಸಮಸ್ಯೆ ಹತ್ತಿರ ಸುಳಿಯಲ್ಲ: ಇಲ್ಲಿದೆ ನೋಡಿ ಡಾಕ್ಟರ್ ಹೇಳಿದ ಸಿಂಪಲ್ ಟಿಪ್ಸ್

ಮಳೆಗಾಲ ಬಂತೆಂದರೆ ಎಲ್ಲರಿಗೂ ಸಂಭ್ರಮ. ಎಲ್ಲೆಡೆ ಕಂಗೊಳಿಸುವ ಹಸಿರು, ಶೀತ ಹವಾಮಾನವಿರುವ ಖುಷಿ. ಆದರೆ ಮಳೆಗಾಲದಲ್ಲಿ ನಮ್ಮ ಆರೋಗ್ಯದ ಕುರಿತು ಕೆಲವೊಂದು ಕಾಳಜಿ ವಹಿಸದಿದ್ದರೆ ಆ ಖುಷಿಯೇ ಮಾಯವಾಗಬಹುದು.

ಅಂದ ಹಾಗೆ ಆಯುರ್ವೇದದಲ್ಲಿ  ವರ್ಷ ಋತುವಿನಲ್ಲಿ ಪಾಲಿಸಬೇಕಾದ ಹಲವು ನಿಯಮಗಳ ಉಲ್ಲೇಖವಿದೆ. ನೀವಿದ್ದನ್ನು ಪಾಲಿಸಿದರೆ ಈ ಮಳೆಗಾಲವನ್ನು ಖುಷಿಯಿಂದ ಎಂಜಾಯ್ ಮಾಡಬಹುದು.

ಮಳೆಗಾಲದಲ್ಲಿ ಏನ್ ಸಮಸ್ಯೆ ಕಾಡುತ್ತೆ?

ಈ ಋತುವಿನಲ್ಲಿ ವಾತಾ ಪ್ರಕೋಪ ದೇಹ ಬಲ ಹಾಗೂ ಜೀರ್ಣಶಕ್ತಿ  ಕ್ಷೀಣಿಸುತ್ತದೆ.

ಕೆಮ್ಮು, ಶೀತ, ಜ್ವರ, ಮಲೇರಿಯಾ, ಆರ್ಥ್ರೈಟಿಸ್, ಗಂಟು ನೋವು ,ಅಜೀರ್ಣದ ಸಮಸ್ಯೆ ಗಳೆಲ್ಲಾ ಈ ಋತುವಿನಲ್ಲಿ ಕಾಮನ್.

ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ:

  • ಈ ಕಾಲದಲ್ಲಿ ಜಠರಾಗ್ನಿ ಕ್ಷೀಣವಾಗಿರುವುದರಿಂದ ಸುಲಭವಾಗಿ ಜೀರ್ಣವಾಗುವ  ಲಘು, ಶುದ್ಧ ಹಾಗೂ ಬಿಸಿ ಆಹಾರ ಸೇವಿಸಿ.
  • ಅಕ್ಕಿ, ಬಾರ್ಲಿ, ಗೋಧಿಯಿಂದ ತಯಾರಿಸಿದ ಆಹಾರ, ಸೂಪ್, ತರಕಾರಿ, ಮಜ್ಜಿಗೆ, ಬೇಳೆಗಳು ,ಹೆಸರು ಕಾಳು ,ತುಪ್ಪ ಸೇವಿಸಿರಿ.
  • ಬಿಸಿ ಮಾಡಿ ಆರಿಸಿದ ನೀರನ್ನು ಕುಡಿಯಿರಿ. ಇದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿದರೆ ಉತ್ತಮ.
  • ವಾರಕ್ಕೊಮ್ಮೆ ಉಪವಾಸ ಮಾಡುವುದರಿಂದ ಜೀರ್ಣಶಕ್ತಿ ಪ್ರಬಲಗೊಳ್ಳುತ್ತದೆ.

ಇದನ್ನು ಮಾಡಬೇಡಿ:

ಹಳಸಿದ ಆಹಾರ, ಹಸಿ ಆಹಾರ, ಸಲಾಡ್, ಬೇಯಿಸದ ಆಹಾರ, ಅತಿಯಾಗಿ ನೀರು ಕುಡಿಯುವುದು, ಹಸಿರು ಸೊಪ್ಪುಗಳನ್ನು ಸೇವಿಸುವುದು, ಮೊಸರು, ಸಿಹಿತಿಂಡಿ ಸೇವಿಸಕೂಡದು. ಹಗಲಲ್ಲಿ ನಿದ್ದೆಮಾಡಬಾರದು.

ಇಷ್ಟು ಮಾಡಿ ಸಾಕು:

  • ಶುದ್ಧ ಹಾಗು ಶುಷ್ಕ ಬಟ್ಟೆಗಳನ್ನು ಧರಿಸಿರಿ.
  • ಮಲೇರಿಯಾವನ್ನು ತಡೆಗಟ್ಟಲು ಮನೆಯ  ಸುತ್ತಮುತ್ತಲಿನಲ್ಲಿ ನೀರು ಶೇಖರವಾಗದಂತೆ ನೋಡಿಕೊಳ್ಳಿ.

  •   ಡಯಾಬಿಟಿಸ್  ಇರುವವರು ತಮ್ಮ ಕಾಲನ್ನು ಸದಾ ಶುಚಿಗೊಳಿಸಬೇಕು.
  • ಮುಲ್ತಾನಿ ಮಿಟ್ಟಿ ದೇಹಕ್ಕೆ ಲೇಪಿಸಿ ಒಣಗಿದ ನಂತರ ಸ್ನಾನ ಮಾಡಿದರೆ ಒಳಿತು.
  • ಬೇವಿನ ಎಲೆಯ ಧೂಪವನ್ನುಹಚ್ಚಿರಿ.
  • ಬಿಸಿ ನೀರಿನ ಸ್ನಾನ ಉತ್ತಮ ನೀರಿಗೆ ಸ್ವಲ್ಪ ಬೇವಿನ ಎಣ್ಣೆ ಹಾಕಿದರೆ ಸ್ಕಿನ್ ಇನ್ಫೆಕ್ಷನ್ ಯಿಂದ ರಕ್ಷಣೆ ಪಡೆಯಬಹುದು . ಉಗುರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿರಿ.

ಇಲ್ಲಿ ಹೇಳಿದ ನಿಯಮಗಳನ್ನು ಪಾಲಿಸಿದರೆ ಮಳೆಗಾಲದಲ್ಲಿ ಆರೋಗ್ಯದ ಸಮಸ್ಯೆ ನಿಮಗೆ ಖಂಡಿತ ಕಾಡುವುದಿಲ್ಲ.

ಡಾ.ಹರ್ಷಾ ಕಾಮತ್