ದೊಡ್ಡ ಪತ್ರೆಯ ದೊಡ್ಡಸ್ತಿಕೆ ನಿಮಗೆ ಗೊತ್ತಾ ?: ಶೀತ, ಕೆಮ್ಮಿಗೆ ರಾಮಬಾಣ, ಇದರ ಪೋಡಿ ಸೂಪರ್

ನಮ್ಮ ಮನೆ ಅಂಗಳದಲ್ಲೇ ಬೆಳೆಯಬಹುದಾದ ಜೌಷದೀಯ ಸಸ್ಯಗಳ ಪೈಕಿ ದೊಡ್ಡಪತ್ರೆಗೆ ತನ್ನದೇ ಆದ ದೊಡ್ಡಸ್ತಿಕೆ ಇದೆ. ಮನೆಯ ಅಂಗಳದಲ್ಲಿ ದೊಡ್ಡಪತ್ರೆಯ ಗಿಡವೊಂದಿದ್ದರೆ ಸಣ್ಣ ಪುಟ್ಟ ಕಾಯಿಲೆಗೆಲ್ಲಾ ದೊಡ್ಡಪತ್ರೆ ದೊಡ್ಡ ಪಾತ್ರವಹಿಸುತ್ತದೆ. ದೊಡ್ಡ ಪತ್ರೆಯ ಸಸ್ಯಶಾಸ್ತ್ರೀಯ ಹೆಸರು ಕಾಲಿಯಸ್ ಅರೋಮ್ಯಾಟಿಕಸ್. ಈ ಸಸ್ಯದ ಮೂಲ ಭಾರತ, ಆಗ್ನೇಯ ಏಷ್ಯಾ, ದಪ್ಪ ಮುಸುಡಿಯ ಈ ದೊಡ್ಡ ಪತ್ರೆಯ ಗಿಡ, ಮನೆಯ ನೀರು ಹೋಗುವಲ್ಲಿಯೋ?ಅಂಗಳದ ನೀರಿನ ತೇವಾಂಶ ದಟ್ಟವಾಗಿ ವ್ಯಾಪಿಸುವ ಜಾಗ ಹುಡುಕಿ ಹುಲುಸಾಗಿ ಬೆಳೆಯುತ್ತದೆ. ಔಷಧೀಯ ಆಗರ: ದಪ್ಪ ಕಾಂಡಗಳಿಂದ […]