ಅಂದಿನ ದೀಪಾವಳಿ ಹೀಗಿತ್ತು, ಇಂದಿನ ದೀಪಾವಳಿ ಹೀಗುಂಟು: ದೀಪಾವಳಿಯ ಒಂದು ಅವಲೋಕನವಿದು

ಡಾ. ಪರಶುರಾಮ ಕಾಮತ್ ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದೆ. ಸುಮಾರು ಎರಡು ದಶಕಗಳ ಹಿಂದಿನ ದೀಪಾವಳಿ ಆಚರಣೆಯ ಸೊಗಡು ಇಂದು ಎಲ್ಲೋ ಮಾಯವಾದಂತೆ ಕಾಣಿಸುತ್ತಿದೆ. ಅಂದಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳಿದ್ದವು. ಹೀಗಾಗಿ ಮನೆ ತುಂಬಾ ಸದಸ್ಯರು, ಅವರೊಳಗಿನ ಅವಿನಾಭಾವ ಸಂಬಂಧ ಕುಟುಂಬದ ಒಗ್ಗಟ್ಟಿಗೆ ಸಹಕಾರಿಯಾಗಿತ್ತು. ದೀಪಾವಳಿಯಂದು ಮನೆಯವರೆಲ್ಲರೂ ಸಕ್ರೀಯವಾಗಿ ಭಾಗವಹಿಸುವ ಮೂಲಕ ಹಬ್ಬದ ಆಚರಣೆಗೆ ವಿಶೇಷ ಮೆರುಗನ್ನು ನೀಡುತ್ತಿದ್ದರು. ಇಂದಿನ ವಿಭಕ್ತ ಕುಟುಂಬಗಳಲ್ಲಿ ತಂದೆ ತಾಯಿ ಮತ್ತು ಮಕ್ಕಳು ಮಾತ್ರವಿರುವುದರಿಂದ ತಕ್ಕ ಮಟ್ಟಿನಲ್ಲಿ ದೀಪಾವಳಿಯ ಆಚರಣೆ […]