ಪುಷ್ಪಾ 2, ಜ. 30 ರಂದು OTT ಯಲ್ಲಿ ರಿಲೀಸ್: ದಾಖಲೆ ಮೊತ್ತಕ್ಕೆ ಸೇಲ್ ಆಯ್ತಾ ಸಿನಿಮಾ!

ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರ ಇನ್ನೂ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಸದ್ದು ಮಾಡುತ್ತಲೇ ಇದೆ. ಆದ್ರೂ ಚಿತ್ರ ರಿಲೀಸಾಗಿ ತುಂಬಾ ದಿನಗಳಾಗಿರುದರಿಂದ ಓಟಿಟಿಯಲ್ಲಿ ಆದಷ್ಟು ಬೇಗ ಚಿತ್ರ ನೋಡಲು ಅಭಿಮಾನಿಗಳು ಕಾತರಗೊಂಡಿದ್ದಾರೆ, ಈ ನಡುವೆ ಜನವರಿ ಅಂತ್ಯದ ವೇಳೆಗೆ ನೆಟ್‌ಫ್ಲಿಕ್ಸ್ನಲ್ಲಿ ಪುಷ್ಪ 2 ಸಿನಿಮಾ ಸ್ಟ್ರೀಮ್ ಆಗುವ ಸಾಧ್ಯತೆಯಿದೆ. ಸಿನಿಮಾ ಬಿಡುಗಡೆಯಾಗಿ 56 ದಿನಗಳಾದ ಬಳಿಕ ಓಟಿಟಿಗೆ ಬರಲಿದೆ. ಜನವರಿ 17 ರಂದು ಚಿತ್ರತಂಡ 20 ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಪುಷ್ಪ 2 ಗೆ […]

ಮಾರುತಿ ಸುಜೂಕಿ ಕಾರು ಪ್ರಿಯರಿಗೆ ಬಿಗ್ ಶಾಕ್:ಫೆ. 1ರಿಂದ ಕಾರು ಖರೀದಿ ದುಬಾರಿ, ಬಿಡಿಭಾಗಗಳೂ ತುಟ್ಟಿ!

ನವದೆಹಲಿ :ವಾಹನಗಳ ಖರೀದಿ, ಬಿಡಿಭಾಗಗಳ ಖರೀದಿ ದಿನದಿಂದ ದಿನಕ್ಕೆ  ಗ್ರಾಹಕರ ಜೇಬಿಗೆ ಭಾರವಾಗುತ್ತಿದೆ. ಇದೀಗ ಖ್ಯಾತ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜೂಕಿ ಕೂಡ ತನ್ನ ಕಾರುಗಳ ಬೆಲೆಯನ್ನು ಮತ್ತಷ್ಟು ಏರಿದಿದೆ. ಈ ಕುರಿತು ಪ್ರಕಟಣೆ ಹೊರಡಿಸುವ ಸಂಸ್ಥೆಯು ಫೆ. 1 ರಿಂದ ಕಾರುಗಳ ಬೆಲೆ ಏರಿಸುತ್ತೇವೆ ಎಂದಿದೆ. ಇನ್ಪುಟ್ ವೆಚ್ಚಗಳು ಹೆಚ್ಚಳವಾಗಿರುವುದರಿಂದ ಅನಿವಾರ್ಯವಾಗಿ ಕಾರುಗಳ ಬೆಲೆ ಏರಿಕೆ ಮಾಡುತ್ತಿದ್ದೇವೆ ಎಂದು ಸಂಸ್ಥೆ ತಿಳಿಸಿದೆ. ” ಗ್ರಾಹಕರಿಗೆ ಹೊರೆಯಾಗದಂತೆ ಕಾರು ಕೊಡುವ ಉದ್ದೇಶ ಸಂಸ್ಥೆಗಿದ್ದರೂ  ಹೆಚ್ಚಿನ ಹಲವು […]

ಹುಡುಗಿಯರು ಹುಡುಗನಿಂದ ನಿಜಕ್ಕೂ ನಿರೀಕ್ಷೆ ಮಾಡೋದೇನು ? ನಿಮ್ಮ ಪ್ರೀತಿಯ ಹುಡುಗಿಗೆ ನೀವೇನ್ ಕೊಡ್ಬೇಕು?

ಹುಡುಗಿಯರು ಕೇವಲ ಸುಂದರ, ಆಕರ್ಷಕವಾಗಿರುವ ಹುಡುಗನನ್ನು ಮಾತ್ರ ಇಷ್ಟಪಡ್ತಾರೆ ಅನ್ನೋ ಯೋಚ್ನೆ ಖಂಡಿತಾ ತಪ್ಪು. ಹಾಗಾಗಿ ನೀವು ನಾನು ನೋಡಲು ಚೆನ್ನಾಗಿಲ್ಲ ಎಂದು ಚಿಂತಿಸಬೇಕಿಲ್ಲ. ಹುಡುಗಿಯರನ್ನು ಹೇಗೆ ಒಲಿಸ್ಕೊಳ್ಬೋದು ಅಂತ ಯೋಚಿಸಿದ್ರೆ ಸಾಕು. ಹುಡುಗಿಯರು ಸಾಮಾನ್ಯವಾಗಿ ಇಷ್ಟಪಡೋದು ಅವಳಿಗಿಂತಾ ಅವಳನ್ನು ಹೆಚ್ಚು ಇಷ್ಟಪಡೋ ಹುಡುಗರನ್ನ. ಪರಿಶುದ್ಧ ಪ್ರೀತಿಯನ್ನು ನೀಡಿ ಪ್ರೀತಿ ಗಳಿಸಬಹುದು.ನಿಮ್ಮ ಮಾತಿನಂತೆಯೇ ನಿಮ್ಮ ನಡೆಯಿದ್ದರೆ ಚೆನ್ನ. ನೀವು ಹೇಳುವುದೊಂದು ಮಾಡುವುದೊಂದು ಆದರೆ ಯಾರೂ ನಿಮ್ಮತ್ತ ಆಕರ್ಷಿತರಾಗುವುದಿಲ್ಲ. ಹಾಗಾಗಿ ನಿಮ್ಮ ನಡೆ ನುಡಿ ಒಂದೇ ಆಗಿರಲಿ. ದುಬಾರಿ […]

ಅಯ್ಯಪ್ಪ ಮಾಲೆ ಹಾಕಿದ ಮೇಲೆ ಬಾಲಕನಿಗೆ ಮಾತು ಬಂತು: ಇದು ಅಯ್ಯಪ್ಪ ಸ್ವಾಮಿಯ ಪವಾಡನಾ!?

ಅಯ್ಯಪ್ಪ ಸ್ವಾಮಿಯ ಕುರಿತು ನೂರಾರು ಪವಾಡದ ಕತೆಗಳು ನಮ್ಮ ಸುತ್ತಮುತ್ತ ಓಡಾಡುತ್ತಲೇ ಇದೆ. ಒಂದು ಶಬ್ದ ಕೂಡ ಮಾತನಾಡಲು ಬಾರದ ಪುತ್ತೂರಿನ ಯುವಕನೊಬ್ಬನಿಗೆ ಇದೀಗ ಮಾತು ಬಂದಿದೆ ! ಅದೂ ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಎನ್ನುವ ಸುದ್ದಿ ಈಗ ಸದ್ದು ಮಾಡಿದೆ. ಹೌದು ಹುಟ್ಟು ಮಾತು ಬರದ ಇದೀಗ ಶಬರಿಮಲೆ ಏರಲು ಮಾಲೆ ಹಾಕಿರುವ ಬಾಲಕ ಇದೀಗ ಮಾತನಾಡಲು ಆರಂಭಿಸಿದ್ದಾನೆ. ಈ ಘಟನೆ ದೊಡ್ಡದ್ದೊಂದು ಅಚ್ಚರಿಗೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಾಮೆತ್ತಡ್ಕ […]

ಕೃಷಿಕರ ಶ್ರಮವನ್ನು ನೀವು ಒಂದಿನನಾದ್ರೂ ನೆನೆದಿದ್ದೀರಾ?: ಇವೆಲ್ಲಾ ಸಂಗತಿಗಳನ್ನು ಮರೆಯದಿರೋಣ

ಕೃಷಿಕನ ಶ್ರಮದ ಬೆವರು ಒಂದು ದಿನ ಹರಿಯದಿದ್ದರೂ ಜಗತ್ತಿನಲ್ಲಿ ಜನ ಸಾಮಾನ್ಯರ ಹೊಟ್ಟೆ ಹೊರೆಯುವುದು ಬಹಳಾ ಕಷ್ಟವಿದೆ. ನಾವು ಕೃಷಿಕರಲ್ಲದೇ ಇರಬಹುದು. ಆದರೆ ಪ್ರತಿಯೊಬ್ಬರೂ ಆತನನ್ನು ಅವಲಂಬಿಸಿಯೇ ಬದುಕುತ್ತಿರುವವರಾದ್ದರಿಂದ ಆತನ ಶ್ರಮಕ್ಕೆ, ಬೆವರಿಗೆ ಗೌರವ ಕೊಡಲು ವರ್ಷವಿಡೀ ಹೀಗೆ ಮಾಡೋಣ…