ಹೃದಯಾಘಾತದ ಬಗ್ಗೆ ಮೊದಲೇ ಸಿಗುತ್ತೆ ಸುಳಿವು: ಆಗ ನೀವು ಈ ಮುನ್ನೆಚ್ಚರಿಕೆ ಪಾಲಿಸಲೇಬೇಕು

ಹೃದಯಾಘಾತದಿಂದ ಸಾವನ್ನಪ್ಪುವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಆದರೆ ಹೃದಯಾಘಾತ ಸಡನ್ನಾಗಿ ಕಾಣಿಸಿಕೊಂಡರೂ, ಹೃದಯಾಘಾತದ ಲಕ್ಷಣಗಳು ತಿಂಗಳ ಮೊದಲೇ ಅಥವಾ ಕೆಲವು ವಾರಗಳ ಮೊದಲೇ ಸಣ್ಣದ್ದಾಗಿ ಗೋಚರಿಸಲು ಶುರುವಾಗುತ್ತದಂತೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ನಿರ್ಲಕ್ಷ ಬೇಡ: ಈ ಮುನ್ನೆಚ್ಚರಿಕೆ ಇರಲಿ ಹೃದಯಾಘಾತಕ್ಕೆ ಕಾರಣವಾಗುವವರ ಹಲವಾರು ದೈಹಿಕ, ಭಾವನಾತ್ಮಕ ಲಕ್ಷಣಗಳು ನಮಗೆ ತಿಂಗಳು ಅಥವಾ ಕೆಲವು ವಾರಗಳ ಮುಂಚೆಯೇ ಸಂಕೇತಗಳನ್ನು ಕಳುಹಿಸುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಪ್ರಧಾನ ಕಾರ್ಯದರ್ಶಿ ಡಾ. ಸಿ.ಎಂ. ನಾಗೇಶ್ ಅವರ […]
ನೀವು ಚಿಕನ್ ಪ್ರಿಯರೇ? ಕೋಳಿಯ ಕಾಲು ಸವಿಯಲು ಭಾರೀ ಇಷ್ಟನಾ? ಹಾಗಾದ್ರೆ ಒಮ್ಮೆ ಈ ವಿಷ್ಯ ತಿಳ್ಕೊಳ್ಳಿ

ಕೋಳಿ ಮಾಂಸಕ್ಕೆ ನಮ್ಮಲ್ಲಿ ವರ್ಷಪೂರ್ತಿ ಬೇಡಿಕೆ ಇದ್ದೇ ಇರುತ್ತದೆ. ದಿನಾಲೂ ಚಿಕನ್ ತಿನ್ನುವ ನಾನ್ ವೆಜ್ ಪ್ರಿಯರಿಗೇನೂ ಕಡಿಮೆ ಇಲ್ಲ. ಕೋಳಿ ಮಾಂಸದಲ್ಲಿ ಪ್ರೋಟೀನ್ ಜಾಸ್ತಿ ಇದೆ ಎನ್ನುವ ಕಾರಣಕ್ಕೆ ತಿನ್ನುವವರೂ ಇದ್ದಾರೆ. ಆದರೆ ಅತೀಯಾಗಿ ಚಿಕನ್ ತಿನ್ನುವುದರಿಂದ ಹೃದಯಾಘಾತವಾಗುತ್ತದೆ ಎನ್ನುವ ವದಂತಿಯೊಂದು ಈಗ ಹರಿದಾಡುತ್ತಿದೆ. ಆದರೆ ಇದಕ್ಕೆ ಪುರಾವೆ ಏನೂ ಸಿಕ್ಕಿಲ್ಲವಾದರೂ ಅತೀಯಾದ ಚಿಕನ್ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ಬಹುತೇಕ ವೈದ್ಯರ ಅಭಿಮತ. ಆದರೆ ಫಾರಂ ಗಳಲ್ಲಿ ಕಡಿಮೆ ಸಮಯದಲ್ಲಿ ಕೋಳಿಯ ತೂಕ ಹೆಚ್ಚಿಸಲು […]
ಇಬ್ಬರ ಕಣ್ಣನ್ನು ಬೆಳಗಿಸಿದ ಅಭಿನಯ ಸರಸ್ವತಿ : ತಮ್ಮ ಸಾವಿನಲ್ಲೂ ಮತ್ತೊಬ್ಬರ ಬಾಳಿಗೆ ಬೆಳಕಾದ ಬಿ ಸರೋಜಾದೇವಿ

1960-70 ಸಮಯದಲ್ಲಿ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಮಿಂಚಿದ ಬಹುಮುಖ ತಾರೆ ಬಿ ಸರೋಜಾದೇವಿ ಅವರೀಗ ಲೋಕ ಬಿಟ್ಟು ಹೋದರೂ, ಇಬ್ಬರ ಬಾಳಿಗೆ ಬೆಳಕಾಗಿದ್ದಾರೆ. ಹೌದು 87 ವರ್ಷದ ಬಿ ಸರೋಜಾದೇವಿ ಚಿತ್ರರಂಗ ಕಂಡಂತಹ ಶ್ರೇಷ್ಠ ನಟಿಯಾಗಿದ್ದರು. ಇದೀಗ ಈ ನಟಿಯ ಇಚ್ಛೆಯಂತೆ ಅವರ ಕುಟುಂಬಸ್ಥರು ಸರೋಜಾದೇವಿ ಅವರ ಕಣ್ಣುಗಳನ್ನು ದಾನ ಮಾಡುವ ಮೂಲಕ ಇನ್ನೊಂದು ಜೀವಕ್ಕೆ ಬೆಳಕಾಗಿದ್ದಾರೆ. ಈ ಸಂಬಂಧ ಐ ಬ್ಯಾಂಕ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ ಕೂಡಲೇ, ಐ ಬ್ಯಾಂಕ್‌ನ ತಂಡವು ಸರೋಜಾದೇವಿಯವರ ಮನೆಗೆ […]
ಮಾರುಕಟ್ಟೆಗೆ ಎಂಟ್ರಿ ಕೊಡ್ತು Ai+ ಸ್ಮಾರ್ಟ್‌ಫೋನ್: ಅತ್ಯಂತ ಕಡಿಮೆ ಬೆಲೆಗೆ ಭರ್ಜರಿ ಸ್ಟೊರೇಜ್, ಕ್ಯಾಮರಾ ಇರೋ ಪವರ್ ಫುಲ್ ಫೋನ್!

ನೀವೇನಾದ್ರೂ ಕಡಿಮೆ ಬೆಲೆಗೆ ಒಂದೊಳ್ಳೆ ಫೋನ್ ತಗೊಳ್ಬೇಕು ಎನ್ನುವ ಯೋಚನೆಯಲ್ಲಿದ್ದರೆ ಇನ್ನೇನ್ ಲಾಂಚ್ ಆಗ್ತಿದೆ ಒಂದು ಅದ್ಬುತ ಸ್ಮಾರ್ಟ್ ಪೋನ್. ಹೌದು ಖ್ಯಾತ ಮೊಬೈಲ್ ಕಂಪೆನಿ ರಿಯಲ್‌ಮಿಯ ಮಾಜಿ ಸಿಇಒ ಭಾರತದ ಮಾಧವ್ ಶೇಠ್ ತಮ್ಮ ಹೊಸ ಕಂಪನಿ NxtQuantum Shift Technologies ನಲ್ಲಿ ಭಾರತದ ಮೊದಲ ಸಂಪೂರ್ಣ ಸ್ಥಳೀಯ ಸ್ಮಾರ್ಟ್‌ಫೋನ್ ಅನ್ನು ಘೋಷಿಸಿದ್ದಾರೆ. ಈ ಹೊಸ ಸ್ಮಾರ್ಟ್‌ಫೋನ್‌ಗೆ Ai+ ಸ್ಮಾರ್ಟ್‌ಫೋನ್ ಎಂದು ಬ್ರ್ಯಾಂಡ್ ಮಾಡಲಾಗಿದೆ. ಇದು ದೇಶಿ ಮೊಬೈಲ್ ಫೋನ್ ಎಂದವರು ಹೇಳಿಕೊಂಡಿದ್ದಾರೆ. ಸದ್ಯ ಪಲ್ಸ್ […]
ಮೊಳಕೆಯೊಡೆದ ಬೆಳ್ಳುಳ್ಳಿಯನ್ನು ತಿಂದರೆ ಹೃದಯದ ಖಾಯಿಲೆಗಳು ಮಾಯ: ಬೆಳ್ಳುಳ್ಳಿಯನ್ನು ದಿನ ನಿತ್ಯ ಯಾಕೆ ಸೇವಿಸಬೇಕು?

ಈಗ ಎಲ್ಲೆಲ್ಲೂ ಹೃದಯಾಘಾತಗಳದ್ದೇ ಸುದ್ದಿ, ಹೃದಯದ ವಿವಿಧ ಖಾಯಿಲೆಗಳು ಯಾವಾಗ ಸಂಭವಿಸುತ್ತೆ ಎಂದು ಹೇಳುವುದೇ ಕಷ್ಟಕರ. ಇಂತಹ ಸಂದರ್ಭದಲ್ಲಿ ಆರೋಗ್ಯಕರ ಜೀವನಶೈಲಿಯ ಅಳವಡಿಕೆಯೇ ಒಂದು ಪರಿಹಾರ ಎನ್ನುವ ಚರ್ಚೆ ನಡೆಯುತ್ತಿದೆ. ಹಾಗಾದ್ರೆ ನೀವು ಮನೆಯಲ್ಲಿಯೇ ಸಿಂಪಲ್ಲಾಗಿ ಮಾಡಬಹುದಾದ ಆರೋಗ್ಯಕರ ಟಿಪ್ಸ್ ಒಂದು ಇಲ್ಲಿದೆ. ಬೆಳ್ಳುಳ್ಳಿ ಕೆಲವು ಅಸಾಧಾರಣ ಆರೋಗ್ಯ ಪ್ರಯೋಜನಗಳಿಂದ ತುಂಬಿದೆ. ಮೊಳಕೆಯೊಡೆದ ಬೆಳ್ಳುಳ್ಳಿ ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು ಮತ್ತು ಆಹಾರದ ನಾರಿನಂಶದಿಂದ ಸಮೃದ್ಧವಾಗಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕ ಅಂಶಗಳು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. […]