ಆಪತ್ಕಾಲದ “ದೇವ ಮಂದಿರ” ಮೈಮುನಾ ಫೌಂಡೇಶನ್: ನೆಲೆಯಿಲ್ಲದವರಿಗೆ ಸ್ಪೂರ್ತಿ ಸೆಲೆಯಾದ ಆಪದ್ಭಾಂಧವ ಆಸೀಫ್ ಕತೆ ಇದು

ಭ ಗವಂತನ ಸೃಷ್ಟಿಯಲ್ಲಿರುವವರೆಲ್ಲ ಆತನ ಬಂಧುಗಳೇ, ಯಾರು ಅವರುಗಳ ಸೇವೆ ಮಾಡುತ್ತಾರೋ, ಅವರು ದೇವರಿಗೆ ಹತ್ತಿರವಾದವರು” ಎನ್ನುತ್ತದೆ ವೇದವಾಣಿ. ಇದು ನೂರಕ್ಕೆ ನೂರರಷ್ಟು ಸತ್ಯ. ಇದನ್ನೇ ಸ್ವಾಮಿ ವಿವೇಕಾನಂದರು “ಎಲ್ಲರೂ ಭಗವಂತನ ರೂಪಗಳೇ” ಎನ್ನುತ್ತಾರೆ. ಆ ರೂಪಗಳು ನಮ್ಮ ಕಣ್ಣಮುಂದೆ ಬೇರೆ ಬೇರೆಯಾಗಿ ಕಂಡು ಬರುತ್ತವೆ. ದೀನರಂತೆ, ಹುಚ್ಚರಂತೆ, ರೋಗಿಯಂತೆ, ಆಶಕ್ತರಂತೆ, ದುರ್ಬಲರಂತೆ, ನಿರ್ಬಲರಂತೆ, ದುಃಖಿಗಳಂತೆ, ದಿವ್ಯಾಂಗಿಗಳಂತೆ ಭಿಕ್ಷುಕರಂತೆ, ಹೀಗೆ ಲೋಕದ ಸಂತೆಯೊಳಗೆ ಅನೇಕರು ನಾನ ತರದವರಿದ್ದಾರೆ. ಈ ರೀತಿ ನರಳುತ್ತಿರುವವರು ಸಾವಿರಾರು ಜನ ಕಣ್ಣಮುಂದೆ ಇದ್ದಾರೆ. […]