ಪ್ರಯಾಣಿಕರಿಂದ ಹೆಚ್ಚುವರಿ ದರ ವಸೂಲಿ ಮಾಡಿದ ಖಾಸಗಿ ಬಸ್ ಗಳ ವಿರುದ್ಧ RTO ಕಾರ್ಯಾಚರಣೆ: ರಾಜ್ಯದಲ್ಲಿ ಒಟ್ಟು 3,756 ಪ್ರಕರಣ ದಾಖಲು

ಬೆಂಗಳೂರು: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರಿಂದ ಹೆಚ್ಚುವರಿ ದರ ವಸೂಲಿ ಸೇರಿದಂತೆ ವಿವಿಧ ನಿಯಮ ಉಲ್ಲಂಘನೆಗಳ ಆರೋಪದ ಮೇರೆಗೆ ಖಾಸಗಿ ಬಸ್‌ಗಳ ವಿರುದ್ಧ ಆರ್‌ಟಿಒ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಿದೆ. ಸೆಪ್ಟೆಂಬರ್ 11ರಿಂದ 15ರವರೆಗೆ ನಡೆದ ಐದು ದಿನಗಳ ಕಾರ್ಯಾಚರಣೆಯಲ್ಲಿ ರಾಜ್ಯಾದ್ಯಂತ ಒಟ್ಟು 14,987 ಖಾಸಗಿ ಬಸ್‌ಗಳನ್ನು ತಪಾಸಣೆ ಮಾಡಲಾಗಿದೆ. ಈ ವೇಳೆ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 3,756 ಪ್ರಕರಣಗಳನ್ನು ದಾಖಲಿಸಲಾಗಿದ್ದು, 33 ಬಸ್‌ಗಳನ್ನು ಜಪ್ತಿ ಮಾಡಲಾಗಿದೆ. ಪರವಾನಗಿ ನಿಯಮ ಉಲ್ಲಂಘನೆ, ತೆರಿಗೆ ಪಾವತಿಸದೆ ಸಂಚರಿಸುವುದು […]

ಈ ಬೆಕ್ಕಣ್ಣ ಈಗ ಮುಂಬೈ ಮೆಟ್ರೋದ ‘ಅಧಿಕಾರಿ..! ಜನಗಳ ಪ್ರೀತಿಯಿಂದಲೇ ಉನ್ನತ ಹುದ್ದೆ ಗಿಟ್ಟಿಸಿಕೊಂಡ ಮುದ್ದು ಬೆಕ್ಕು!

ಮುಂಬೈ: ಮೆಟ್ರೋ ನಿಲ್ದಾಣ ಎಂದರೆ ಪ್ರಯಾಣಿಕರ ಓಡಾಟ, ಸಿಬ್ಬಂದಿಯ ಕರ್ತವ್ಯ ಹಾಗೂ ರೈಲುಗಳ ಸಂಚಾರ. ಆದರೆ, ಮುಂಬೈನ ಗುಂಡವಲಿ ಮೆಟ್ರೋ ನಿಲ್ದಾಣದಲ್ಲಿ ಇವೆಲ್ಲದರ ನಡುವೆ ಪ್ರತಿದಿನ ಕಾಣಿಸಿಕೊಳ್ಳುವ ಮುದ್ದು ಬೆಕ್ಕೊಂದು ಇದೀಗ ಭಾರಿ ಸುದ್ದಿಯಾಗಿದೆ! ನಿಲ್ದಾಣದ ಪ್ರವೇಶದ್ವಾರದ ಬಳಿ ಆರಾಮವಾಗಿ ಕುಳಿತುಕೊಳ್ಳುವ ಈ ಬೆಕ್ಕು ಪ್ರಯಾಣಿಕರಿಗೂ ಚಿರಪರಿಚಿತ. ಕೆಲವೊಮ್ಮೆ ಅಲ್ಲೇ ನಿದ್ರಿಸುತ್ತಾ, ಕೆಲವೊಮ್ಮೆ ಪ್ರಯಾಣಿಕರತ್ತ ನೋಡುತ್ತಾ ‘ಕರ್ತವ್ಯ’ ನಿರ್ವಹಿಸುವಂತೆ ಕಾಣಿಸಿಕೊಳ್ಳುತ್ತದೆ. ಈ ಬೆಕ್ಕಿನ ಫೋಟೋವನ್ನು ಸಂದೇಶ್ ಸಾಮಂತ್ ಎಂಬ ಪ್ರಯಾಣಿಕ ‘ಎಕ್ಸ್‌’ನಲ್ಲಿ ಹಂಚಿಕೊಂಡು, “ಸಂಬಳವಿಲ್ಲದೆ ಉಚಿತ ಸೇವೆ […]

ಮಾರುತಿ ಸುಜುಕಿ ಕಾರು ಪ್ರಿಯರಿಗೆ ಶಾಕ್, ಕಾರುಗಳ ಬೆಲೆಯಲ್ಲಿ ಭಾರೀ ಏರಿಕೆ ಮಾಡಿದ ಕಂಪೆನಿ!

ನವದೆಹಲಿ: ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಹಾಗೂ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಇಂಡಿಯಾ ತನ್ನ ಆಯ್ದ ಕಾರು ಮಾದರಿಗಳ ಬೆಲೆಯನ್ನು ಗರಿಷ್ಠ ₹20,000ವರೆಗೆ ಹೆಚ್ಚಿಸಿದೆ. ಪರಿಷ್ಕೃತ ಬೆಲೆಗಳು ಸೆಪ್ಟೆಂಬರ್ 2026ರಿಂದಲೇ ಜಾರಿಗೆ ಬಂದಿವೆ. ಮೇ ತಿಂಗಳಿನಿಂದ ಕಂಪನಿ ಬೆಲೆ ಹೆಚ್ಚಿಸುತ್ತಿರುವುದು ಇದು ಮೂರನೇ ಬಾರಿ. ಈ ಬಾರಿ ಎಲ್ಲ ಮಾದರಿಗಳ ಬದಲಿಗೆ ಆಯ್ದ ಕಾರುಗಳಿಗೆ ಮಾತ್ರ ಬೆಲೆ ಏರಿಕೆ ಅನ್ವಯವಾಗಲಿದೆ. ಸ್ಟೀಲ್, ಅಲ್ಯೂಮಿನಿಯಂ, ಪ್ಲಾಸ್ಟಿಕ್ ಸೇರಿದಂತೆ ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಾಗೂ […]

ರಷ್ಯಾದಲ್ಲಿ ದೆಹಲಿ ಟೆಕ್ಕಿ ಬಂಧನ! ಪತಿಯನ್ನು ಬಿಡುಗಡೆಗೊಳಿಸಲು ಮೋದಿ, ಯೋಗಿಗೆ ಪತ್ನಿ ಮನವಿ

ಮಾಸ್ಕೋ: ಕಂಪನಿಯ ಕೆಲಸಕ್ಕಾಗಿ ರಷ್ಯಾಗೆ ತೆರಳಿದ್ದ ದೆಹಲಿಯ ಟೆಕ್ಕಿಯೊಬ್ಬರನ್ನು ಮಾಸ್ಕೋ ಪೊಲೀಸರು ಬಂಧಿಸಿರುವ ಆರೋಪ ಕೇಳಿಬಂದಿದೆ. ಪತಿಯನ್ನು ಬಿಡುಗಡೆಗೊಳಿಸಿ ನೆರವು ನೀಡುವಂತೆ ಅವರ ಪತ್ನಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದಾರೆ. ನೋಯ್ಡಾದ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಚಂದನ್ ಗುಪ್ತಾ ಅವರನ್ನು ಪೊಲೀಸರು ರಾತ್ರಿ 12.30ರ ಸುಮಾರಿಗೆ ಕರೆದೊಯ್ದಿದ್ದಾರೆ ಎಂದು ಪತ್ನಿ ಸ್ನೇಹ ಗುಪ್ತಾ ಆರೋಪಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ […]

ಅಪಘಾತ ತಡೆಯಲು ವಾಹನಗಳೇ ಪರಸ್ಪರ ಮಾತನಾಡಲಿವೆ! ಶೀಘ್ರದಲ್ಲೇ ಹೊಸ ವಾಹನಗಳಿಗೆ ಬರಲಿದೆ V2V ತಂತ್ರಜ್ಞಾನ

ನವದೆಹಲಿ: ದೇಶದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪಘಾತ ತಡೆಯಲು ಕೇಂದ್ರ ಸರ್ಕಾರ ಹೊಸ ತಂತ್ರಜ್ಞಾನ ಜಾರಿಗೆ ಮುಂದಾಗಿದೆ. ವಾಹನ-ವಾಹನ ಸಂವಹನ (V2V) ವ್ಯವಸ್ಥೆಯನ್ನು ಹೊಸ ವಾಹನಗಳಿಗೆ ಕಡ್ಡಾಯಗೊಳಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕ್ರಮ ಕೈಗೊಂಡಿದೆ. ಏನಿದು V2V? V2V ತಂತ್ರಜ್ಞಾನದಲ್ಲಿ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಪರಸ್ಪರ ಮಾಹಿತಿ ಹಂಚಿಕೊಳ್ಳುತ್ತವೆ. ವಾಹನದ ವೇಗ, ಸ್ಥಳ, ದಿಕ್ಕು ಹಾಗೂ ಬ್ರೇಕಿಂಗ್‌ ಮಾಹಿತಿಯನ್ನು ಹತ್ತಿರದ ವಾಹನಗಳಿಗೆ ಕಳುಹಿಸಲಾಗುತ್ತದೆ. ಉದಾಹರಣೆಗೆ, ಮುಂದಿರುವ ವಾಹನ ಏಕಾಏಕಿ ಬ್ರೇಕ್ […]