ಉಡುಪಿ:ಅಪ್ರೆಂಟಿಸ್ ತರಬೇತಿ- ಅರ್ಜಿ ಆಹ್ವಾನ
ಉಡುಪಿ : ತಾಂತ್ರಿಕ ತರಬೇತಿ ಸಂಸ್ಥೆ (ಟಿ.ಟಿ.ಐ), ಎಚ್.ಎ.ಎಲ್, ಬೆಂಗಳೂರು ಸಂಕೀರ್ಣ ಇವರು ಎಚ್.ಎ.ಎಲ್ ನ ಸಾಮಾಜಿಕ ಹೊಣೆಗಾರಿಕೆ ವ್ಯವಹಾರಗಳ (ಸಿ.ಎಸ್.ಆರ್) ಚಾಲನೆ ಅನ್ವಯ ಅಪ್ರೆಂಟೈಸ್‍ಶಿಪ್ ಕಾಯ್ದೆ ಅಡಿಯಲ್ಲಿ ಸಿಎನ್‍ಸಿ ಪ್ರೋಗಾಮರ್ ಮತ್ತು ಆಪರೇಟರ್ ಟ್ರೇಡ್‍ಗಾಗಿ ಪೂರ್ಣಾವಧಿ ಅಪ್ರೆಂಟೈಸ್‍ಶಿಪ್ ತರಬೇತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿ ಅವಧಿಯು 15 ತಿಂಗಳಾಗಿರುತ್ತದೆ. ಎಸ್‍ಎಸ್‍ಎಲ್‍ಸಿ ಅಥವಾ ಸಮಾನ ಪರೀಕ್ಷೆಯಲ್ಲಿ ಸಾಮಾನ್ಯ/ಓಬಿಸಿ ಅಭ್ಯರ್ಥಿಗಳು ಸರಾಸರಿ ಕನಿಷ್ಠ 60% ಮತ್ತು ಪ.ಜಾ/ಪ.ಪಂ/ಪಿಡಬ್ಲ್ಯೂಡಿ ಅಭ್ಯರ್ಥಿಗಳು ಸರಾಸರಿ ಕನಿಷ್ಠ 50% ಅಂಕ […]