ನೇಕಾರರ ಉತ್ಪಾದಕ ಕಂಪೆನಿ ರಚಿಸುವ ಕುರಿತು ಪೂರ್ವಭಾವಿ ಸಭೆ

ಕಿನ್ನಿಗೋಳಿ: ನೇಕಾರರ ಉತ್ಪಾದಕ ಕಂಪನಿಯನ್ನು ( weavers OFPO ) ರಚಿಸುವ ವಿಚಾರದಲ್ಲಿ ರಾಜ್ಯ ಕೈಮಗ್ಗ ಇಲಾಖೆ ನೀಡಿರುವ ನಿರ್ದೇಶನದ ಕುರಿತು ಚರ್ಚಿಸಲು ಸಹಾಯಕ ನಿರ್ದೇಶಕರು, ಕೈ ಮಗ್ಗ ಮತ್ತು ಜವಳಿ ಇಲಾಖೆ ಉಡುಪಿ ಮತ್ತು ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಪೂರ್ವಭಾವಿ ಸಭೆ ಕಿನ್ನಿಗೋಳಿಯ ತಾಳಿಪಾಡಿ ನೇಕಾರ ಸಂಘದಲ್ಲಿ ನಡೆಯಿತು. ಉಡುಪಿ ಜಿಲ್ಲಾ ಕೈಮಗ್ಗ ಸಹಾಯಕ ನಿರ್ದೇಶಕ ಅಶೋಕ್ ಪ್ರಸ್ತಾವನೆ ಮಾಡಿ ನೇಕಾರರ ಉತ್ಪಾದಕ ಕಂಪನಿಯನ್ನು ರಚಿಸಲು ಇಲಾಖೆಯಿಂದ ಬಂದಿರುವ ನಿರ್ದೇಶನದ ಕುರಿತು ತಿಳಿಸಿದರು. ಕದಿಕೆ […]
ಉಡುಪಿ ಸೀರೆ ಪುನಶ್ಚೇತನಗೈದ ಕದಿಕೆ ಟ್ರಸ್ಟ್ ಗೆ ನಬಾರ್ಡ್ ನಿಂದ ಸಿಕ್ಕಿತು ರಾಷ್ಟ್ರಮಟ್ಟದ ಹೆಗ್ಗಳಿಕೆ

ಕಾರ್ಕಳ: ಕಳೆದ ಮೂರುವರೆ ವರ್ಷಗಳಿಂದ ಅಳಿವಿನಂಚಿನಲ್ಲಿದ್ದ ಉಡುಪಿ ಸೀರೆ ನೇಕಾರಿಕೆ ಪುನಶ್ಚೇತನಕ್ಕೆ ಶ್ರಮಿಸುತ್ತಿರುವ ಕದಿಕೆ ಟ್ರಸ್ಟ್ ಈ ಸಲದ ನಬಾರ್ಡ್ ಮುಂಬೈ ಮುಖ್ಯ ಕಚೇರಿಯಿಂದ ಕೈಮಗ್ಗ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಂಸ್ಥೆಗಳಲ್ಲಿ ಒಂದು ಎಂಬುದಾಗಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆ ಆಗಿದೆ. ಆಗಸ್ಟ್ 6 ರಂದು ನಡೆದ ಈ ಆನ್ಲೈನ್ ಕಾರ್ಯಕ್ರಮದಲ್ಲಿ ಕೊಡಲಾದ ಈ ಪ್ರಶಸ್ತಿಯನ್ನು ಆ.16 ರಂದು ಕಿನ್ನಿಗೋಳಿಯ ತಾಳಿಪಾಡಿ ನೇಕಾರ ಸಂಘದಲ್ಲಿ ನಡೆದ ರಾಷ್ಟ್ರೀಯ ಕೈಮಗ್ಗ ಸಪ್ತಾಹ ಆಚರಣೆಯ ಸಂದರ್ಭದಲ್ಲಿ ದ ಕ ಜಿಲ್ಲಾಧಿಕಾರಿ […]