ಸೊಂಟ ಮುರಿತ ಆಸ್ಪತ್ರೆಗೆ ದಾಖಲು..
ಉಡುಪಿ: ನಗರದ ಸಿಟಿ ಬಸ್ ನಿಲ್ದಾಣದ ಹತ್ತಿರ ಸರಸ್ಪತಿ ಶಾಲೆಯ ಹಿಂಬದಿ ಸೊಂಟದ ಸ್ವಾಧೀನ ಕಳೆದು ಕೊಂಡು ಬಿದ್ದ ವೃದ್ಧನನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಜಿಲ್ಲಾಸ್ಪತ್ರೆಗೆ ಇಂದು ದಾಖಲಿಸಿದ್ದಾರೆ. ಈತ ಕೂಲಿ ಕಾರ್ಮಿಕ ಎಂದು ತಿಳಿದು ಬಂದಿದ್ದು. ಈತನ ಹೆಸರು ಬಿ.ದಕ್ಷಿಣ ಮೂರ್ತಿ (60) ತಂದೆ ಬಸಪ್ಪ,ಚಿಕ್ಕರಾಯನ ಹಳ್ಳಿ,ತುಮಕೂರು ಜಿಲ್ಲೆ ಎಂದು ತಿಳಿದು ಬಂದಿದೆ. ನಂತರ ಆಟೋ ಚಾಲಕರ ನೆರವಿನಿಂದ ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಸಂಬಂಧಿಕರು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ