ಹೋಂ ಐಸೋಲೇಶನ್ ನಲ್ಲಿರುವವರನ್ನು ಕೋವಿಡ್ ಸೋಂಕಿತರ ಕೈ ಗೆ ಸೀಲ್ ಹಾಕಿ : ಡಾ. ಎಂ.ಟಿ.ರೇಜು

ಉಡುಪಿ: ಕೋವಿಡ್ ಪಾಸಿಟಿವ್ ಆಗಿ, ಹೋಂ ಐಸೋಲೇಷನ್ ನಲ್ಲಿರುವವರು, ಅನಗತ್ಯವಾಗಿ ಮನೆಯಿಂದ ಹೊರಬಂದು , ಸಾರ್ವಜನಿಕವಾಗಿ ಸ್ಥಳಗಳಲ್ಲಿ ತಿರುಗಾಡಿ, ಆರೋಗ್ಯವಂತರಿಗೆ ಕೋವಿಡ್ ಸೋಂಕು ಹರಡುವುದನ್ನು ತಪ್ಪಿಸುವ ಉದ್ದೇಶದಿಂದ, ಹೋಂ ಐಸೋಲೇಷನ್ ನಲ್ಲಿರುವವರನ್ನು ಗುರುತಿಸಲು ಸಾಧ್ಯವಾಗುವಂತೆ, ಅವರ ಕೈ ಗೆ ಸೀಲ್ ಹಾಕುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಂ.ಟಿ. ರೇಜು ಸೂಚನೆ ನೀಡಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಕೋವಿಡ್ ಸ್ಥಿತಿಗತಿ ಕುರಿತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ […]

ವಿವಿಧ ಬ್ಯಾಂಕ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ತರಬೇತಿ

ಉಡುಪಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ದೇಶದಾದ್ಯಂತ ಎಸ್‍ಬಿಐ ಬ್ಯಾಂಕ್‍ನ ಎಂಟು ಸಾವಿರ ಗುಮಾಸ್ತರ ಹುದ್ದೆಗಳಿಗೆ ಮತ್ತು ಮುಂಬರುವ ವಿವಿಧ ಬ್ಯಾಂಕ್ ಅಧಿಕಾರಿಗಳ ಮತ್ತು ಗುಮಾಸ್ತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಆಯೋಜಿಸಿದೆ. ಈ ಸಂಬಂಧ ತರಬೇತಿಯನ್ನು ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದಲ್ಲಿ ತರಬೇತಿ ನೀಡಲಾಗುವುದು.  ಆಸಕ್ತರು ಮೇ 28 ರೊಳಗಾಗಿ ಮೈಸೂರಿನ ಕರ್ನಾಟಕ […]