ಜೂನ್ ನಿಂದ ಶುರುವಾಗಲಿದ್ಯಾ ಕೊರೊನಾ ನಾಲ್ಕನೇ ಅಲೆ? ತಜ್ಞರು ಏನಂತಾರೆ?

ಕೊರೋನಾ ಕಾಟ ಮತ್ತೆ ಶುರುವಾಗುವ ಲಕ್ಷಣ ಕಾಣ್ತಿದೆ.ಭಾರತದಲ್ಲಿ ಜೂನ್ ನಿಂದ ಕೊರೋನಾ ನಾಲ್ಕನೆಯ ಅಲೆ ಶುರುವಾಗಲಿದೆಯಂತೆ ಎನ್ನುವುದು ಈ ಕ್ಷಣದ ಲೆಟೆಸ್ಟ್ ಅಪ್ ಡೇಟ್. ಹೌದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ (ಐಐಟಿ-ಕೆ) ಸಂಶೋಧಕರು ಇಲ್ಲೊಂದು ಆಘಾತಕಾರಿ ಸುದ್ದಿಯೊಂದನ್ನು ಬಿಚ್ಚಿಟ್ಟಿದ್ದಾರೆ ನೋಡಿ. ಅದೇನಪ್ಪಾ ಎಂದರೆ ಭಾರತದಲ್ಲಿ ಜೂನ್‌ನಲ್ಲಿ ನಾಲ್ಕನೇ ಅಲೆ ಶುರುವಾಗಲಿದೆಯಂತೆ ಎಂದು ಸಂಶೋದಕರು ಭವಿಷ್ಯ ನುಡಿದಿದ್ದಾರೆ. ಐಐಟಿ-ಕೆ ಸಂಶೋಧಕರು ನಡೆಸಿದ ಸಂಶೋಧನೆಯ ಪ್ರಕಾರ, ಭಾರತವು ಜೂನ್ ತಿಂಗಳ ಮಧ್ಯ ಅಥವಾ ಅಂತ್ಯದಲ್ಲಿ ಕೋವಿಡ್-19 ನಾಲ್ಕನೆಯ […]

ನಿಮ್ಮ ಈ ಹವ್ಯಾಸಗಳೇ ಜೀವಕ್ಕೆ ಮಾರಕವಾಗಬಹುದು ಜೋಕೆ!

ವಯಸ್ಸು ಜಾಸ್ತಿಯಾಗುತ್ತಿದ್ದಂತೆಯೇ ಹುಮ್ಮಸ್ಸೂ ಕುಸಿಯತೊಡಗುತ್ತದೆ. ಯೌವ್ವನದಲ್ಲಿರುವ ಉಲ್ಲಾಸ ಕ್ರಮೇಣ ಮರೆಯಾಗುತ್ತದೆ.ಉಲ್ಲಾಸ ಕಡಿಮೆಯಾದಂತೆ ಆರೋಗ್ಯದಲ್ಲಿಯೂ ಏರು ಪೇರಾಗುತ್ತದೆ. ಹೀಗಾಗಲು ಪ್ರಮುಖ ಕಾರಣ ನಮ್ಮ ಜೀವನಶೈಲಿ ಮತ್ತು ಕೆಲವೊಂದು ಹವ್ಯಾಸಗಳು ಎಂದರೆ ನೀವು ಒಪ್ಪಿಕೊಳ್ಳಲೇಬೇಕು.ಯಾವೆಲ್ಲಾ ಹವ್ಯಾಸಗಳಿಂದ ಆರೋಗ್ಯ ಏರುಪೇರಾಗುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ. ಕೆಟ್ಟ ಜೀವನಶೈಲಿ, ಕೆಲವೊಂದು ಅಭ್ಯಾಸಗಳು ವ್ಯಕ್ತಿ ವಯಸ್ಸಾಗಿ ಕಾಣುವಂತೆ ಮಾಡುತ್ತದೆ ಎಂದು ವಿಜ್ಞಾನ ಹೇಳುತ್ತದೆ. ಎಲ್ಲರೂ ತಾವೂ ಯಾವಾಗಲೂ ಯಂಗ್ ಆಗಿ ಕಾಣಬೇಕೆಂದೇ ಇಷ್ಟಪಡುತ್ತಾರೆ. ಯಾವ ಹವ್ಯಾಸಗಳು ನಮಗೆ ಹೆಚ್ಚು ವಯಸ್ಸಾದಂತೆ ಕಾಣುವುದು ಎಂಬುದನ್ನು ಅರಿತುಕೊಂಡು […]

ವೈರಲ್ ಆಗ್ತಿದೆ “ಗರುಡ ಗಮನ ವೃಷಭ ವಾಹನ” ದಿಂದ ಪ್ರೇರಿತವಾದ ಕಾರ್ಕಳ ನೀರೆಯ ಈ ಹುಡುಗರ ಟ್ರೈಲರ್

ರಾಜ್ ಬಿ ಶೆಟ್ಟಿ ಮತ್ತು ವೃಷಭ್ ಶೆಟ್ಟಿ ಅಭಿನಯದ ಹೊಸ ಸಿನಿಮಾ, “ಗರುಡ ಗಮನ ವೃಷಭ ವಾಹನ” ಶುಕ್ರವಾರವಷ್ಟೇ ರಿಲೀಸ್ ಆಗಿದೆ. ಈಗಾಗಲೇ ಈ ಸಿನಿಮಾದ ಟ್ರೈಲರ್ ಕೂಡ ಸಖತ್ ಹಿಟ್ ಆಗಿದ್ದು, ಕನ್ನಡಿಗರ ಅಪಾರ ಗಮನ ಸೆಳೆದಿತ್ತು. ಈ ಸಿನಿಮಾದ ಟ್ರೈಲರ್ ನಿಂದ ಪ್ರೇರಿತರಾಗಿ ಕಾರ್ಕಳ ನೀರೆಯ  ತಂಡವೊಂದು ಅಂತದ್ದೇ ಒಂದು ಆಕರ್ಷಕ ಟ್ರೈಲರ್ ಅನ್ನು ಯುಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ದು, ದಿನದಿಂದ ದಿನಕ್ಕೆ ವೈರಲ್ ಆಗ್ತಿದೆ. ಅಂದ ಹಾಗೆ ಈ ಟ್ರೈಲರ್ ಗೆ  ಕಾನ್ಸೆಪ್ಟ್, […]

ವಸುಧೈವ ಕುಟುಂಬಕಂ’ ನುಡಿಯ ನಿಜವಾದ ಅರ್ಥ ಅರಿತಾಗ: ನಟ ಅನಿರುದ್ಧ್ ಬರೆದ ಬರಹ

ಜನಪ್ರಿಯ ಟಿವಿ ಧಾರಾವಾಹಿ ‘ದಿ ಟ್ವೈಲೈಟ್ ಝೋನ್’ನ ಒಂದು ಕಂತು ‘ಎ ಕೈಂಡ್ ಆಫ್ ಎ ಸ್ಟಾಪ್ ವಾಚ್’ದಲ್ಲಿ (೧೯೬೩). ಒಬ್ಬಾತನಿಗೆ ಸ್ಟಾಪ್ ವಾಚೊಂದನ್ನು ಉಡುಗೊರೆಯಾಗಿ ಕೊಟ್ಟಿರುತ್ತದೆ. ತನ್ನೊಡೆಯನ ಹೊರತಾಗಿ ಬೇರೆಲ್ಲದಕ್ಕೂ ಮತ್ತು ಬೇರೆಲ್ಲರಿಗೂ ಸಮಯವನ್ನೇ ನಿಲ್ಲಿಸಬಲ್ಲದು ಈ ಸ್ಟಾಪ್ ವಾಚ್. ಆ ಮನುಷ್ಯ ಈ ಸ್ಟಾಪ್ ವಾಚನ್ನು ಬ್ಯಾಂಕ್ ದರೋಡೆ ಮಾಡಲು ಉಪಯೋಗಿಸುತ್ತಾನೆ. ಕಂತೆ, ಕಂತೆ ನೋಟುಗಳನ್ನು ಒಯ್ಯುತ್ತಿರುವಾಗ ಆಕಸ್ಮಿಕವಾಗಿ ಸ್ಟಾಪ್ ವಾಚನ್ನು ಕೆಳಗೆ ಬೀಳಿಸಿ, ಒಡೆದು ಹಾಕುತ್ತಾನೆ. ಒಮ್ಮೆಲೇ, ಇಡೀ ಜಗತ್ತಿನ ಜನರು ಮತ್ತು […]

ಸಂಕಷ್ಟದಲ್ಲಿರುವ ಸಾಹಿತಿ, ಕಲಾವಿದರುಗಳಿಗೆ ಮಾಸಾಶನ: ಅರ್ಜಿ ಆಹ್ವಾನ

ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಹಿತ್ಯ, ಸಂಗೀತ, ನೃತ್ಯ., ನಾಟಕ, ದೈವಾರಾದನೆ, ಜಾನಪದ, ಯಕ್ಷಗಾನ, ಲಲಿತಕಲೆ ಮತ್ತು ಶಿಲ್ಪಕಲೆ ಕ್ಷೇತ್ರದಲ್ಲಿ 25 ವರ್ಷಗಳ ಕಾಲ ಗಣನೀಯವಾಗಿ ಸೇವೆ ಸಲ್ಲಿಸಿದಂತಹ ಆಸಕ್ತ ಸಾಹಿತಿ-ಕಲಾವಿದರಿಗೆ ಆರ್ಥಿಕ ನೆರವು ನೀಡಲು ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರು ಕನಿಷ್ಟ 58 ವರ್ಷ ವಯೋಮಾನದವರಾಗಿರಬೇಕು, ಅಂಗವಿಕಲರಾಗಿದ್ದಲ್ಲಿ 40 ವರ್ಷ ವಯೋಮಿತಿ ಹೊಂದಿರಬೇಕು ಹಾಗೂ ವಾರ್ಷಿಕ ಆದಾಯವು 1 ಲಕ್ಷ ರೂ ಮೀರಿರದೆ, 20 ವರ್ಷ ಕಲಾ ಸೇವೆ ಸಲ್ಲಿಸಿರಬೇಕು. ಅರ್ಜಿ ನಮೂನೆ ಹಾಗೂ […]