ರಾಷ್ಟ್ರಗೀತೆಯಂತೆ ‘ವಂದೇ ಮಾತರಂ’ ಹಾಡುವುದು ಕಡ್ಡಾಯವಲ್ಲ,ಹಾಡುವುದು ಬಿಡುವುದು ನಮ್ಮ ಆಯ್ಕೆ: ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಉತ್ತರ

ಬೆಂಗಳೂರು: ರಾಷ್ಟ್ರಗೀತೆಯಾದ ‘ಜನ ಗಣ ಮನ’ದಂತೆ ‘ವಂದೇ ಮಾತರಂ’ ಹಾಡುವುದನ್ನು ಕಡ್ಡಾಯಗೊಳಿಸಲಾಗಿಲ್ಲ ಎಂದು ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ. ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ಸೆ.8ರಂದು ಹೊರಡಿಸಿರುವ ಸುತ್ತೋಲೆಯನ್ನು ಸರ್ಕಾರ ಸಮರ್ಥಿಸಿಕೊಂಡಿದೆ. ರಾಷ್ಟ್ರಗೀತೆಗೆ ಅನ್ವಯಿಸುವ ಕಡ್ಡಾಯ ನಿಯಮಗಳು ರಾಷ್ಟ್ರೀಯ ಗೀತೆಗೆ ಅನ್ವಯಿಸುವುದಿಲ್ಲ ಎಂದು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ‘ವಂದೇ ಮಾತರಂ’ನ ಎಲ್ಲಾ ಆರು ಚರಣಗಳನ್ನು ಹಾಡುವಂತೆ ಮಾಡಬೇಕೆಂಬ ನಿಯಮಕ್ಕೆ ಸಂಬಂಧಿಸಿದ ಪ್ರಕರಣ ಸುಪ್ರೀಂ […]

ಈ ಎಚ್ಚರಿಕೆಗಳನ್ನು ಫಾಲೋ ಮಾಡಿದರೆ ನೀವೆಂದಿಗೂ ಸೈಬರ್ ಕಳ್ಳರ ಮೋಸದ ಜಾಲಕ್ಕೆ ಬೀಳಲ್ಲ!

ದಿನೇ ದಿನೇ ಸೈಬರ್ ಪ್ರಕರಣಗಳು ಜಾಸ್ತಿಯಾಗುತ್ತಲೇ ಇದೆ. ಯಾರೋ ಕಳಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿ ಹಣ ಕಳೆದುಕೊಳ್ಳುವವರ, ಅಥಾ ಪಾಸ್ ವರ್ಡ್ ಗಳನ್ನು ಹಂಚಿಕೊಂಡು ಮೋಸ ಹೋದವರ ಸಂಖ್ಯೆ ಹೆಚ್ಚುತ್ತಲೇ ಇದೆ.ಎಷ್ಟೇ ಜನರಲ್ಲಿ ಜಾಗೃತಿ ಮೂಡಿಸಿದರೂ ಜನ ಮತ್ತೆ ಮತ್ತೆ ಮೋಸ ಹೋಗುತ್ತಲೇ ಇದ್ದಾರೆ. ಹಾಗೆ ನೋಡಿದರೆ ಸೈಬರ್ ವಂಚನೆ ಪ್ರಕರಣಗಳಿಂದ ದೂರವಿರುವುದು ತುಂಬಾ ಸುಲಭ, ಈ ಸರಳ ಕ್ರಮವನ್ನು ಪಾಲಿಸಿ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ : ವಾಟ್ಸಾಪ್, ಫೇಸ್ಬುಕ್, ಮೊಬೈಲ್ ಮೆಸೆಜ್ ಬಾಕ್ಸ್ […]

ಗಂಡನಿಲ್ಲದ ವೇಳೆ ಪ್ರೀತಿಸಿದ ಪ್ರಿಯಕರನ ಜೊತೆಗೆ ರೊಮ್ಯಾನ್ಸ್, ಆಮೇಲೇನಾಯ್ತು? ಈ ಚಿತ್ರದ ಕ್ಲೈಮ್ಯಾಕ್ಸ್ ಸಖತ್!

ಒಟಿಟಿ ವೇದಿಕೆಗಳಲ್ಲಿ ಥ್ರಿಲ್ಲರ್ ಸಿನಿಮಾಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಇದೇ ಸಾಲಿನಲ್ಲಿ ಮಲಯಾಳಂ ಭಾಷೆಯ Udal ಸಿನಿಮಾ ಗಮನ ಸೆಳೆಯುತ್ತಿದೆ. ರೋಚಕ ಕಥಾಹಂದರ ಹಾಗೂ ಅನಿರೀಕ್ಷಿತ ತಿರುವುಗಳಿಂದ ಕೂಡಿರುವ ಈ ಚಿತ್ರ ಥ್ರಿಲ್ಲರ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಕುಟುಂಬದ ಒಳಗಿನ ಸಂಘರ್ಷ, ದ್ವೇಷ ಮತ್ತು ಸೇಡಿನ ಸುತ್ತ ಹೆಣೆದಿರುವ ಕಥೆಯಲ್ಲಿ ಒಬ್ಬ ಮಹಿಳೆ ತನ್ನ ವೈಯಕ್ತಿಕ ಜೀವನದ ಸಂಕೀರ್ಣತೆಗಳ ನಡುವೆ ಸಿಲುಕಿಕೊಳ್ಳುತ್ತಾಳೆ. ಪರಿಸ್ಥಿತಿಗಳು ತೀವ್ರ ಸ್ವರೂಪ ಪಡೆದು ಒಂದು ಕೊಲೆ ನಡೆಯುತ್ತದೆ. ಬಳಿಕ ನಡೆಯುವ ಘಟನೆಗಳು […]

ಜಾಸ್ತಿಯಾಗುತ್ತಿದೆ ಡೇಂಜರಸ್ ಪೇಪರ್ ಲೋಟಗಳ ಬಳಕೆ: ನೀವು ಇದರಲ್ಲೇ ಟೀ, ಕಾಫಿ ನೀರು ಕುಡಿತಾ ಹೋದ್ರೆ ಮುಗೀತು ನಿಮ್ಮ ಕತೆ!

ಧಾರ್ಮಿಕ ಕಾರ್ಯಕ್ರಮಗಳು, ಸಾರ್ವಜನಿಕ ಕಾರ್ಯಕ್ರಮಗಳು, ಆಫೀಸ್ ಮೀಟಿಂಗ್, ಸಣ್ಣದ್ದೊಂದು ಭೇಟಿಯಲ್ಲಿಯೂ ಕೂಡ ಅಪಾಯಕಾರಿ ಪೇಪರ್ ಲೋಟದಲ್ಲಿಯೇ ಟೀ, ಕಾಫಿ, ನೀರು, ಮಜ್ಜಿಗೆ ಕುಡಿಯುವ ದೃಶ್ಯಗಳು ಈಗ ಎಲ್ಲಾ ಊರುಗಳಲ್ಲಿಯೂ, ಹೆಚ್ಚೇಕೆ ಮನೆಗಳಲ್ಲಿಯೂ ಮಾಮೂಲು. ಹೆಚ್ಚಿನ ಮಂದಿಗೆ ಪೇಪರ್ ಲೋಟ ಪ್ಲಾಸ್ಟಿಕ್ ಅಲ್ಲ ಎನ್ನುವ, ಇದು ಸುರಕ್ಷಿತ ಎನ್ನುವ ಭಾವನೆ ಇದೆ. ಇತ್ತೀಚೆಗೆ ವರದಿಯೊಂದು ಪೇಪರ್ ಲೋಟದ ಬಳಕೆ ಜಾಸ್ತಿ ಆಗಿದೆ. ಇದರಿಂದ ಮನುಷ್ಯ ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆಗಳನ್ನು ಅವನ ಅರಿವಿಲ್ಲದೆಯೇ ಅನುಭವಿಸುತ್ತಿದ್ದಾನೆ, ಭವಿಷ್ಯವೂ ಅಪಾಯದಲ್ಲಿದೆ ಎಂದು […]

ಮಣಿಪಾಲ‌ MSDC ಯಿಂದ ತಂತ್ರಜ್ಞಾನಾಧಾರಿತ ಕಲಿಕೆಯ ಬೇಸಿಗೆ ಶಿಬಿರ, ವಿದ್ಯಾರ್ಥಿಗಳನ್ನು ಭವಿಷ್ಯಕ್ಕಾಗಿ ಸಿದ್ಧಗೊಳಿಸುವ ವಿಶೇಷ ಕ್ಯಾಂಪ್!

ಮಣಿಪಾಲ: ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಂತ್ರಜ್ಞಾನ ಹಾಗೂ ಸೃಜನಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ STEM IoT ಸಮರ್ ಕ್ಯಾಂಪ್ ಆಯೋಜಿಸಲಾಗಿದೆ. ಮೇ 11ರಿಂದ 21ರವರೆಗೆ ನಡೆಯಲಿರುವ ಈ ಶಿಬಿರವು ಶಾಲಾ ವಿದ್ಯಾರ್ಥಿಗಳಿಗೆ ತಂತ್ರಜ್ಞಾನಾಧಾರಿತ ತರಬೇತಿ ನೀಡಲಿದೆ. ಶಿಬಿರದಲ್ಲಿ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಜೂನಿಯರ್ ಬ್ಯಾಚ್ ಹಾಗೂ 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸೀನಿಯರ್ ಬ್ಯಾಚ್ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ತರಗತಿಗಳು ನಡೆಯಲಿವೆ. ವಿದ್ಯಾರ್ಥಿಗಳಿಗೆ ಎಲ್‌ಇಡಿ […]